ಖಗೋಳಶಾಸ್ತ್ರವು ನಮ್ಮ ಚಿಂತನೆಗೆ ಹೊಸ ದಿಕ್ಕನ್ನು ನೀಡುತ್ತದೆ: ಡಾ. ಸಂಜೀವ ಜೋಷಿ
ಬೆಟಗೇರಿಯ ತಾರಾಲಯದಲ್ಲಿ ನಡೆಯುತ್ತಿರುವ ಖಗೋಳ ವಿಜ್ಞಾನ ಬೇಸಿಗೆ ಶೀಬಿರದಲ್ಲಿ ಡಾ. ಸಂಜೀವ ಜೋಷಿ ಮಾತನಾಡಿದರು. ಎಂ. ಎಚ್. ಸವದತ್ತಿ ಎಂ. ಎ. ಯರಗುಡಿ, ಶಾಮ ಲಾಂಡೆ, ವಿಜಯಕುಮಾರ್ ಕಪ್ಪಲಿ, ಚಂದ್ರಶೇಖರ ಜೋಗಿನ, ಜಗದೀಶ ದಿನ್ನಿ, ಸವಿತಾ ಯಾಳಗಿ, ಮಂಜುಳಾ ಹುಲಕೋಟಿ, ವಿಜಯಕುಮಾರ ಸೇರಿದಂತೆ ಹಲವರು ಇದ್ದರು.
ವಿಜ್ಞಾನವೆಂದರೆ ಪುಸ್ತಕಗಳಲ್ಲಿ ಮಾತ್ರ ಸೀಮಿತವಾಗಿರದೆ, ಪ್ರತಿ ಸಾಮಾನ್ಯ ಜನರ ಬದುಕಿನ ಭಾಗವಾಗಬೇಕು. ಖಗೋಳಶಾಸ್ತ್ರವು ಆಕಾಶದ ರಹಸ್ಯಗಳನ್ನು ಮಾತ್ರವಲ್ಲ, ನಮ್ಮ ಚಿಂತನೆಗೆ ಹೊಸ ದಿಕ್ಕನ್ನು ನೀಡುತ್ತದೆ ಎಂದು ಡಾ. ಸಂಜೀವ ಜೋಷಿ ಹೇಳಿದರು.
ಬೆಟಗೇರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಶಾಲಾ ಶಿಣ ಇಲಾಖೆ ಹಾಗೂ ಗದಗ ಐಎಂಎ ಶತಮಾನೋತ್ಸವದ ಅಂಗವಾಗಿ ವಿದ್ಯಾಥಿರ್ಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಖಗೋಳ ವಿಸ್ಮಯ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿಯೂ ಖಗೋಳ ವಿಜ್ಞಾನವನ್ನು ಪರಿಚಯಿಸುವುದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ನಿಸರ್ಗದ ಅದ್ಭುತಗಳನ್ನು ನೇರವಾಗಿ ಅನುಭವಿಸಲು ಪ್ರೇರೇಪಿಸುವುದು, ಇವುಗಳೇ ನಿಜವಾದ ವಿಜ್ಞಾನ. ವಿಜ್ಞಾನವನ್ನು ಜನರ ಬಳಿಗೆ ತಲುಪಿಸಿ ಸಮಾಜದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು ಆಕಾಶವನ್ನು ನೋಡುವ ಕಣ್ಣು ಮಾತ್ರವಲ್ಲ, ಅದರ ಬಗ್ಗೆ ಪ್ರಶ್ನಿಸುವ ಮನಸ್ಸು ಮುಖ್ಯ ಎಂದರು.
ಇಂದಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಭವಿಷ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ತಂತ್ರಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವುದು ನಿಜ. ಆದರೆ, ಇದರ ಅತಿಯಾದ ಬಳಕೆ ವಿಶೇಷವಾಗಿ ಮಕ್ಕಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ದಿನನಿತ್ಯ ಮಕ್ಕಳು ಗಂಟೆಗಟ್ಟಲೆ ಮೊಬೈಲ್ಗಳಲ್ಲಿ ಸಮಯ ಕಳೆಯುತ್ತಿದ್ದು, ಅವರ ಅಧ್ಯಯನ, ಆರೋಗ್ಯ ಹಾಗೂ ಮಾನಸಿಕ ಬೆಳವಣೆಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಬೈಲ್ ಬಳಕೆಯ ಹೆಚ್ಚಳದಿಂದ ಮಕ್ಕಳಲ್ಲಿ ಓದಿನ ಮೇಲೆ ಆಸಕ್ತಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಅಭ್ಯಾಸ, ಸೃಜನಾತ್ಮಕ ಚಿಂತನೆ ಹಾಗೂ ಕ್ರೀಡಾ ಚಟುವಟಿಕೆಗಳತ್ತ ಅವರ ಗಮನ ಣಿಸುತ್ತಿದೆ. ಇದರಿಂದಾಗಿ ಅವರ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ದೀರ್ ಕಾಲ ಮೊಬೈಲ್ ಬಳಸುವುದರಿಂದ ಕಣ್ಣು ಸಮಸ್ಯೆಗಳು, ನಿದ್ರಾಹಿನತೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಭವಿಷ್ಯಕ್ಕೆ ಗಂಭೀರ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ ಎಂದರು.
ಪೋಷಕರು ಮತ್ತು ಶಿಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಓದು, ಕ್ರೀಡೆ, ಸಂಸತಿಕ ಹಾಗೂ ವೈಜ್ಞಾನಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಜೊತೆಗೆ, ಸಮಯ ನಿಯಮಿತ ಬಳಕೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ತಂತ್ರಜ್ಞಾನವು ನಮ್ಮ ಜೀವನ ಸುಲಭಗೊಳಿಸಲು ಇರುವ ಸಾಧನ ಆಗಿದೆ. ಅದನ್ನು ಸರಿಯಾಗಿ ಬಳಸಿದಾಗ ಮಾತ್ರ ಅದು ಉಪಯುಕ್ತವಾಗುತ್ತದೆ. ಇಲ್ಲವಾದರೆ, ಅದೇ ಸಾಧನ ನಮ್ಮ ಭವಿಷ್ಯಕ್ಕೆ ಅಡ್ಡಿಯಾಗಬಹುದು. ಆದಕಾರಣ ವಿದ್ಯಾಥಿರ್ಗಳು ರಜೆಯ ಈ ಶಿಬಿರದ ಪ್ರಯೋಜನಗಳನ್ನು ಪಡೆದು ವೈಜ್ಞಾನಿಕ ಮನೋಭಾವ ಮೂಡಿದಾಗ ಮಾತ್ರ ಪುಟಾಣಿ ವಿಜ್ಞಾನಿಗಳಾಗಲು ಸಾಧ್ಯ ಎಂದರು.
ಎಂ. ಎಚ್. ಸವದತ್ತಿ ಎಂ. ಎ. ಯರಗುಡಿ, ಶಾಮ ಲಾಂಡೆ, ವಿಜಯಕುಮಾರ್ ಕಪ್ಪಲಿ, ಚಂದ್ರಶೇಖರ ಜೋಗಿನ, ಜಗದೀಶ ದಿನ್ನಿ, ಸವಿತಾ ಯಾಳಗಿ, ಮಂಜುಳಾ ಹುಲಕೋಟಿ, ವಿಜಯಕುಮಾರ ಸೇರಿದಂತೆ ಹಲವರು ಇದ್ದರು.