ಅಕ್ಷಯಪಾತ್ರೆಯಾದ "ನೀರು ಸರಬರಾಜು' ಪ್ರಕ್ರಿಯೆ

Gadag Nagarasabge
Gadag Nagarasabge
Published on
ಕೋಟ್ಯಂತರ ರೂ. ವ್ಯಯಿಸಿದರೂ ತಪ್ಪದ ನೀರನ ಭವಣೆ  
ಶಿವಾನಂದ ಹಿರೇಮಠ ಗದಗ
ನಗರದಲ್ಲಿ "ನೀರು ಸರಬರಾಜು' ಎಂಬುದು ಪ್ರಭಾವಿಗಳಿಗೆ, ನಗರಸಭೆ ಸದಸ್ಯರಿಗೆ ಮತ್ತು ಗುತ್ತಿಗೆದಾರರಿಗೆ ಅಕ್ಷಯ ಪಾತ್ರ ಎಂಬಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಟ್ಯಾಂಕರ್​ ನೀರು ಪೂರೈಕೆ ಮತ್ತು ನಿರಂತರ ಕುಡಿಯುವ ನೀರಿನ ಯೋಜನೆಗಳು ಸಮಯಕ್ಕೆ ಸರಿಯಾಗಿ ಜನಸಾಮಾನ್ಯರಿಗೆ ನೀರು ಒದಗಿಸುವುದಕ್ಕಿಂತ ಪ್ರಭಾವಿಗಳಿಗೆ ಸೂಕ್ತ ಸಮಯದಲ್ಲಿ ಬಿಲ್​ ರೂಪದಲ್ಲಿ ಕಾಂಚಾಣ ಒದಗಿಸುತ್ತಿವೆ ಎಂಬ ಆರೋಪಗಳು ನಗರಸಭೆ ಆವರಣದಲ್ಲೇ ಕೇಳಿ ಬರುತ್ತಿವೆ. ಬರಗಾಲ ಇರಲಿ, ಇರದೇ ಇರಲಿ ಟ್ಯಾಂಕರ್​ ಮೂಲಕ ನೀರು ಸರಬರಾಜು ನಿರಂತರವಾಗಿ ಸಾಗಿರುತ್ತದೆ. ಇದರ ಜತೆಗೆ ಮಹತ್ವದ ಯೋಜನೆಯಾದ ಮುಂಡರಗಿಯಿಂದ ಗದಗ ನಗರಕ್ಕೆ ಸರಬರಾಜು ಆಗುವ ನಿರಂತರ ಕುಡಿಯುವ ನೀರಿನ ಯೋಜನೆಯಲ್ಲಿ ಕೋಟ್ಯಂತರ ರೂ. ನಿರ್ವಹಣಾ ವೆಚ್ಚ ಸುರಿದರೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ನೋವು ಸಾರ್ವಜನಿಕರರನ್ನು ಕಾಡುತ್ತಿದೆ.
ಟ್ಯಾಂಕರ್​ ಅಕ್ರಮ?
ನಗರದಲ್ಲಿ ಟ್ಯಾಂಕರ್​ ನೀರು ಪೂರೈಕೆ ಎಂಬುದು ಲೆಕ್ಕವಿಲ್ಲದ ಪುಸ್ತಕ ಎಂಬಂತೆ ಭಾಸವಾಗುತ್ತಿದೆ. ಪ್ರತಿನಿತ್ಯ ಸರಾಸರಿ 60 ಟ್ಯಾಂಕರ್​ ನೀರು ನಗರದಲ್ಲಿ ನಿರಂತರ  ಪೂರೈಕೆ ಮಾಡಲಾಗುತ್ತಿದೆ. ಪ್ರತಿನಿತ್ಯ ಅಂದಾಜು 38 ಸಾವಿರ ರೂ.ಗೂ ಅಧಿಕ ವೆಚ್ಚ ಭರಿಸಲಾಗುತ್ತಿದೆ. ಆದರೆ, ಸಮಪರ್ಕವಾಗಿ ಎಲ್ಲಿ ನೀರು ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿ ಮತ್ತು ಪ್ರತಿವರ್ಷ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡಿದ ಮೊತ್ತದ ಕುರಿತು ನಗರಸಭೆ ಅಥವಾ ತಹಸೀಲ್ದಾರ ಕಚೇರಿ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡದೇ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ತಹಸೀಲ್ದಾರ ಅವರನ್ನು ಕೇಳಿ ಎನ್ನುತ್ತಾರೆ. ತಹಸೀಲ್ದಾರ ಅವರು ನಗರಸಭೆ ಅಧಿಕಾರಿಗಳನ್ನು ಕೇಳಿ ಎಂದು ನುಣುಚಿಕೊಳ್ಳುತ್ತಿದ್ದಾರೆ.  
ನಿರಂತರ ಕುಡಿಯುವ ನೀರು?
ಮುಂಡರಗಿಯಿಂದ ಗದಗ ನಗರಕ್ಕೆ ನೀರು ಸರಬರಾಜು ನಿರ್ವಹಣೆಯನ್ನು ಈ ಮೊದಲು ಖಾಸಗಿ ಏಜೆನ್ಸಿಗೆ ನೀಡಲಾಗಿತ್ತು. ಆದರೆ, ಏಜೆನ್ಸಿ ಅವರು ಸಮಪರ್ಕಕ ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣದಿಂದ ಏಜೆನ್ಸಿ ಗುತ್ತಿಗೆಯನ್ನು ಕೊನೆಗಾಣಿಸಿ ನಗರಸಭೆಯಿಂದಲೇ ನಿರ್ವಹಣೆ ಆರಂಭಿಸಲಾಯಿತು. ಆದರೆ, ನೀರು ನಿರ್ವಹಣೆಗೆ ನಗರಸಭೆ ಕೊಟ್ಯಂತರ ನೀರು ವ್ಯಯಿಸಲಾಗುತ್ತಿದ್ದರೂ ನಿರ್ವಹಣೆ ಮಾತ್ರ ಸಮರ್ಪಕ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ನಿರ್ವಹಣೆ ಮತ್ತು ಸಿಬ್ಬಂದಿ ವೇತನಕ್ಕೆ ವಾಷಿರ್ಕ 4.59 ಕೋಟಿ ವೆಚ್ಚ ಭರಿಸಲಾಗುತ್ತಿದೆ. ಹಣ ನಿರಿನಂತೆ ಖಚಾದರೂ ನೀರು ಮಾತ್ರ ಸಮಪರ್ಕ ಹರಿಯುತ್ತಿಲ್ಲ.
ನಗರಸಭೆ ಭರಿಸುವ ವೆಚ್ಚ: 
* ನೀರು ಸರಬರಾಜಿನ ಕೆಆರ್​ಪಿ ಸಂಸ್ಥೆಯ ಸಿಬ್ಬಂದಿ ವೇತನ, ವಾಷಿರ್ಕ 1.58 ಕೋಟಿ
* ನೀರು ಸರಬರಾಜಿನ ಎಂಆರ್​ಎಂ ಸಂಸ್ಥೆಯ ಸಿಬ್ಬಂದಿ ವೇತನ, ವಾಷಿರ್ಕ 79 ಲಕ್ಷ
* ಕೊಳವೆಭಾವಿ ದುರಸ್ಥಿ ಮತ್ತು ನಿರ್ವಹಣೆಗಾಗಿ ವಾಷಿರ್ಕ 72 ಲಕ್ಷ
* ನಗರ ನೀರು ಸರಬರಾಜು ಸಂಸ್ಥೆ, ವಾಷಿರ್ಕ 87 ಲಕ್ಷ
* ಕ್ಲೋರಿನ್​ ಮತ್ತು ಕೆಮಿಕಲ್​ ಖರೀದಿಗೆ ವಾಷಿರ್ 39 ಲಕ್ಷ 
* ನೀರು ಸರಬರಾಜು ಮಾನವ ಸಂಪನ್ಮೂಲ, ವಾಷಿರ್ಕ 24.96 ಲಕ್ಷ
ಕೋಟ್​:
ಪ್ರತಿ ಟ್ಯಾಂಕರ್​ಗೆ 560 ರೂ. ಕಡಿಮೆ ಮೊತ್ತಕ್ಕೆ ಟೆಂಡರ್​ ಆಗಿದೆ. ಹೊರಗಡೆ 400 ರೂ. ಮೊತ್ತಕ್ಕೆ ಟ್ಯಾಂಕರ್​ ನೀರು ಪೂರೈಸುತ್ತಿರುವರು ಒಂದೇ ಬಾರಿ ನೀರು ಖಾಲಿ ಮಾಡಿ ತೆರಳುತ್ತಾರೆ. ಸ್ಥಳದಲ್ಲೇ ಹಣ ಪಾವತಿ ಪಡೆಯುತ್ತಾರೆ. ಆದರೆ ನಾವು ಟ್ಯಾಂಕರ್​ ನಲ್ಲಿ ತುಂಬಿಸಿಕೊಂಡು ಮನೆ ಮನೆಗೆ ನೀರು ಕೊಡುತ್ತ ಸಾಗಬೇಕು. ಇದರಿಂದ ಸಮಯದ ವಿಳಂಬ ಆಗುತ್ತದೆ. ವರ್ಷಕ್ಕೆ ಎರಡೂ ಅಥವಾ ಮೂರು ಬಾರಿ ಬಿಲ್​ ಪಾವತಿ ಮಾಡಲಾಗುತ್ತದೆ. ಅದಕ್ಕಾಗಿ 560ರೂ. ಗೆ ಟೆಂಡರ್​ ಪಡೆಲಾಗಿದೆ. ಈ ಮೊತ್ತವು ಕಡಿಮೆ ಆಗುತ್ತದೆ ಎಂದು ನಗರಸಭೆಗೆ ಮನವಿ ಮಾಡಿದ್ದೇವೆ   
- ಮಲ್ಲಿಕಾರ್ಜುನ ತಡಹಾಳ, ಗುತ್ತಿಗೆದಾರ
ಕೋಟ್​:
ಬೇಸಿಗೆಯಲ್ಲಿ ನೀರು ಸರಬರಾಜು ಮಾಡಲು ಟ್ಯಾಂಕರ್​ ನೀರು ಪೂರೈಸುವ ಗುತ್ತಿಗೆ ನೀಡಲಾಗಿದೆ.  ತುರ್ತು ನಿಧಿಯಲ್ಲಿ ಈ ಹಣ ಭರಿಸಲಾಗುತ್ತದೆ. ಟೆಂಡರ್​ ಪಡೆದ ಗುತ್ತಿಗೆದಾರರು ದರ ಮರುಪರಿಶೀಲಿಸಲು ಹಲವು ಬಾರಿ ಮನವಿ ಮಾಡಿದ್ದಾರೆ. ಈಗಿರುವ 560 ರೂ. ಗಿಂತ ಕಡಿಮೆ ಮೊತ್ತಕ್ಕೆ ಟ್ಯಾಂಕರ್​ ನೀರು ಪೂರೈಸಲು ಯಾರಾದರು ಗುತ್ತಿಗೆದಾರರು ಮುಂದೆ ಬಂದರೆ ಮರುಟೆಂಡರ್​ ಕರೆಯಲಾಗುವುದು. ಮರು ಟೆಂಡರ್​ಗೆ ಈಗಾಗಲೇ ಅನುಮತಿ ಪಡೆಯಲಾಗಿದೆ. 
 ಜೋಗದಂಡೆಕರ್​, ಎಇಇ, ನಗರಸಭೆ
ಕೋಟ್​:
ನಗರದಲ್ಲಿ ಜನರಿಗೆ ನೀರು ಪೂರೈಕೆ ಎಂಬುದು ಗೋಲ್ಮಾಲ ಯೋಜನೆ ಆಗಿದೆ. ಕೋಟ್ಯಂತರ ರೂ. ವ್ಯಯಿಸಿದರೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ನಗರಸಭೆಯಲ್ಲಿ ಜನಪ್ರತಿನಿಧೀಗಳ ಆಡಳಿತ ಇರುವುದರಿಂದ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ವಾರ್ಡನಲ್ಲಿ ಜನರ ಪ್ರಶ್ನೆಗೆ ಉತ್ತರಿಸದ ಸ್ಥಿತಿ ನಿರ್ಮಾಣ ಆಗಿದೆ. ನೀರು ಪೂರೈಕೆಗೆ ವ್ಯಯಿಸುವ ವೆಚ್ಚದ ಬಗ್ಗೆ ಸಂರ್ಪೂಣ ತನಿಖೆ ಆಗಬೇಕು.
 ಕರಿಸೋಮನಗೌಡರ, ನಗರಸಭೆ ಸದಸ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net