ಗದಗ: ಸರ್ಕಾರಿ ಆಯುಷ್ ಇಲಾಖೆ ಡಿ ಗ್ರುಪ್ ಹೊರಗುತ್ತಿಗೆ ನೌಕರ ಮೈಲಾರಲಿಂಗೇಶ್ವರ ರಂಗಪ್ಪ(35) ಶನಿವಾರ ಇಲಾಖೆಯಲ್ಲೇ ನೇಣು ಬಿಗುದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಟಗೇರಿಯ ಸರ್ಕಾರಿ ಆಯುಷ್ ಇಲಾಖೆಯಲ್ಲಿ ಈ ಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿಕ್ಕಮುದುರೆ ಗ್ರಾಮದ ಮೈಲಾರಲಿಂಗೇಶ್ವರ ಕಳೆದ ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಆಯುಷ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಸಂಜೆವರೆಗೂ ಸಿಬ್ಬಂದಿಗಳ ಜತೆ ಲವಲವಿಕೆಯಿಂದ ಮಾತನಾಡುತ್ತಿದ್ದ. ಶನಿವಾರ ಬೆಳಗಿನಜಾವ ಸಿಬ್ಬಂದಿಗಳು ಇಲಾಖೆಯ ಬಾಗಿಲು ತೆರೆದ ಸಂದರ್ಭದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೈಲಾರಲಿಂಗೇಶ್ವರ ಶವವನ್ನು ನೋಡಿದ್ದಾರೆ. ತಕ್ಷಣ ಬೆಟಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೆಟಗೇರಿ ಪೊಲೀಶರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.