ಎಸೆಸೆಲ್ಸಿ ಸಾಧಕರಿಗೆ ಸನ್ಮಾನ: ಬಡತನ ಸಾಧನೆಗೆ ಅಡ್ಡಿಯಲ್ಲ: ಸಚಿವ ಎಚ್.ಕೆ. ಪಾಟೀಲ
ಗದಗ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಎಸೆಸೆಲ್ಸಿ ಸಾಧಕರನ್ನು ಸನ್ಮಾನಿಸಲಾಯಿತು. ಸಚಿವ ಎಚ್.ಕೆ. ಪಾಟೀಲ, ಡಾ. ದುರಗೇಶ ಕೆ. ಆರ್., ಆರ್. ಎಸ್. ಬುರಡಿ, ಶರಣು ಗೊಗೇರಿ, ವಿ.ವಿ. ನಡುವಿನಮನಿ ಇತರರು ಇದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಗದಗ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾಥಿರ್ಗಳಿಗೆ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಭಾನುವಾರ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾನೂನು ಸಚಿವ ಎಚ್.ಕೆ. ಪಾಟೀಲ ವಿದ್ಯಾಥಿರ್ಗಳುನ್ನು ಸನ್ಮಾನಿಸಿ, ಮಾತನಾಡಿ, ವಿದ್ಯಾರ್ಜನೆಗೆ ಬಡತನ ಎಂದಿಗೂ ಅಡ್ಡಿ ಆಗುವುದಿಲ್ಲ ಎಂಬುದಕ್ಕೆ ಗದಗ ಜಿಲ್ಲೆಯ ವಿದ್ಯಾಥಿರ್ಗಳ ಸಾಧನೆಯೇ ಸ್ಪಷ್ಟ ಉದಾಹರಣೆ. ಬಡತನವನ್ನು ನೆಪ ಮಾಡದೆ ಪ್ರತಿಯೊಬ್ಬ ವಿದ್ಯಾಥಿರ್ಯೂ ಶಿಕ್ಷಣದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಅದರ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಲು ವಿದ್ಯಾಥಿರ್ಗಳು ಮುಂದಾಗಬೇಕು. ಜಿಲ್ಲೆಯ ಮಕ್ಕಳು ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪಾಲಕರು ನಿರ್ಲಕ್ಷ$್ಯ ತೋರಬಾರದು. ವಿದ್ಯಾಥಿರ್ಗಳ ಭವಿಷ್ಯ ನಿಮಾರ್ಣದಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಚಿವರು, ಜಿಲ್ಲೆಯ ಒಟ್ಟು ಫಲಿತಾಂಶ ಸುಧಾರಣೆಗೆ ಶ್ರಮಿಸಿದ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು.
ಬಿ. ಬಿ. ಅಸೂಟಿ, ಸಿದ್ದು ಪಾಟೀಲ, ಾರೂಕ್ ಹುಬ್ಬಳ್ಳಿ, ಬಸವರಾಜ ಕಡೇಮನಿ, ಡಾ. ದುರಗೇಶ ಕೆ. ಆರ್., ಆರ್. ಎಸ್. ಬುರಡಿ, ಶರಣು ಗೊಗೇರಿ, ವಿ.ವಿ. ನಡುವಿನಮನಿ ಇತರರು ಇದ್ದರು.