ಎಸೆಸೆಲ್ಸಿ ಫಲಿತಾಂಶ! ಸರ್ಕಾರಿ ಶಾಲಾ ವಿದ್ಯಾಥಿರ್ಗಳೇ ಬೆಸ್ಟ್​

Gadag SSLC Result
Gadag SSLC Result
Published on
ಶಿವಾನಂದ ಹಿರೇಮಠ ಗದಗ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೊಂಡಿದ್ದು, ಜಿಲ್ಲೆಯು 17 ರಿಂದ 16ನೇ ಸ್ಥಾನಕ್ಕೆ ಜಿಗಿತಗೊಂಡು, ಸಮಾಧಾನ ಮೂಡಿಸಿದೆ. ಇದರಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶ ಜಿಲ್ಲೆಯ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ವಿಶೇಷ. ಖಾಸಗಿ, ಅನುದಾನಿತ ಶಾಲೆಗಳಿಂದ ಸರ್ಕಾರಿ ಶಾಲೆಗಳೇ ಅತೀ ಹೆಚ್ಚು ಉತ್ತಮ ಪಲಿತಾಂಶ ನೀಡಿದ್ದು, ಸರ್ಕಾರಿ ಶಾಲಾ ಬೋಧನೆ ವ್ಯವಸ್ಥೆ ಉತ್ತಮ ಎಂದು ಮತ್ತೊಮ್ಮೆ ಸಾಭಿತು ಪಡಿಸಿದೆ.
ಕಳೆದ ಬಾರಿಗಿಂತ ಈ ಬಾರಿ ಶೇ. 100 ರಷ್ಟು ಲಿತಾಂಶ ಪಡೆದ ಶಾಲೆಗಳ ಸಂಖ್ಯೆ ದ್ವಿಗುಣಗಂಡಿವೆ. ಅದರಲ್ಲಿ ಸರ್ಕಾರಿ ಶಾಲೆಗಳೇ ಅತೀ ಹೆಚ್ಚು 100 ರಷ್ಟು ಲಿತಾಂಶ ದಾಖಲಿಸಿವೆ. ಜಿಲ್ಲೆಯಲ್ಲಿ 138 ಸರ್ಕಾರಿ ಪ್ರೌಢಶಾಲೆಗಳಿವೆ. ಅದರಲ್ಲಿ 63 ಶಾಲೆಗಳು ಶೇ. 100 ರಷ್ಟು ಮತ್ತು 63 ಶಾಲೆಗಳು ಶೇ. 90ಕ್ಕಿಂತ ಅಧಿಕ ಪಲಿತಾಂಶ ಪಡೆದಿದೆ. ಇನ್ನೂಳಿದ 12 ಶಾಲೆಗಳಲ್ಲಿ ಮಾತ್ರ ಶೇ. 80ಕ್ಕಿಂತ ಕಡಿಮೆ ಲಿತಾಂಶ ಪಡೆದಿದೆ. ಕಳೆದ ಬಾರಿ ಕೇವಲ 5 ಸರ್ಕಾರಿ ಶಾಲೆಗಳು ಶೇ. 100 ರಷ್ಟು ಲಿತಾಂಶ ದಾಖಲಿಸಿದ್ದವು. ಈ ಬಾರಿ 63 ಸರ್ಕಾರಿ ಶಾಲೆಗಳು ಶೇ. 100 ರಷ್ಟು ಲಿತಾಂಶ ದಾಖಲಿಸಿವೆ. ಇನ್ನೂ ಜಿಲ್ಲೆಯ ಮೂವರು ಟಾಪರ್​ ವಿದ್ಯಾಥಿರ್ಗಳು ಸರ್ಕಾರಿ ಶಾಲೆಯ ವಿದ್ಯಾಥಿರ್ಗಳೇ ಎಂಬುದು ಹೆಮ್ಮೆ. ಅದರಲ್ಲೂ ಶೇ. 90ಕ್ಕಿಂತ ಅಧಿಕ ಪಲಿತಾಂಶ ಮಾಡಿದ ದಾಖಲೆಯೂ ಸರ್ಕಾರಿ ಶಾಲೆಗಳದ್ದೇ ಆಗಿದೆ ಎಂಬುದು ವಿಶೇಷ.
ಶೇ.95.98 ಪಲಿತಾಂಶ:
ಸರ್ಕಾರಿ ಶಾಲೆಗಳಿಂದ ಹಾಜರಾದ ಒಟ್ಟು 6785 ವಿದ್ಯಾಥಿರ್ಗಳ ಪೈಕಿ 6512 ವಿದ್ಯಾಥಿರ್ಗಳು ತೇರ್ಗೆಡೆ ಹೊಂದಿದ್ದು, ಕೇವಲ 273 ವಿದ್ಯಾಥಿರ್ಗಳು ಮಾತ್ರ Fail​ ಆಗಿದ್ದಾರೆ. ಸರ್ಕಾರಿ ಶಾಲೆಯ ಒಟ್ಟು ಪಲಿತಾಂಶ ಶೇ.95.98 ರಷ್ಟು ಆಗಿದೆ. ಸರ್ಕಾರಿ ಶಾಲಾ ವ್ಯಾಫ್ತಿಯಲ್ಲೂ ಮುಂಡರಗಿ ತಾಲೂಕು ಶೇ. 97.34 ಲಿತಾಂಶ ಸಾಧಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಇನ್ನೂಳಿದಂತೆ ಸರ್ಕಾರಿ ಶಾಲಾ ಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿ ಶಿರಹಟ್ಟಿ(ಶೇ. 97.13), ಮೂರನೇ ಸ್ಥಾನದಲ್ಲಿ ಗದಗ ಗ್ರಾಮೀಣ(ಶೇ.97.07), ನಾಲ್ಕನೇ ಸ್ಥಾನದಲ್ಲಿ ನರಗುಂದ(ಶೇ. 95.08), ಐದನೇ ಸ್ಥಾನದಲ್ಲಿ ಗದಗ ಶಹರ(ಶೇ. 94.43) ಹಾಗೂ ಕೊನೆಯ ಸ್ಥಾನದಲ್ಲಿ ಶೇ. 94.30 ಲಿತಾಂಶದೊಂದಿಗೆ ರೋಣ ತಾಲೂಕು ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಶಿಕ್ಷಕರ ಕಸರತ್ತು:
ಸರ್ಕಾರಿ ಶಾಲಾ ಏಸೆಸೆಲ್ಸಿ ಪಲಿತಾಂಶ ಸುಧಾರಣೆಯಲ್ಲಿ ಶಾಲಾ ಶಿಕ್ಷಕರ ಪಾತ್ರವೇ ಪ್ರಾಧಾನ್ಯತೆ ಪಡೆದಿದೆ. ಈ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪಲಿತಾಂಶ ಸುಧಾರಣೆಗೆ ಶಿಕ್ಷಕರು ಹಾಗೂ ಜಿಲ್ಲಾ ಶಿಕ್ಷಣ ಇಲಾಖೆ ಇನ್ನೀಲ್ಲದ ಕಸರತ್ತು ನಡೆಸಿತ್ತು. ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಇತರೆ ಶಾಲೆಗಳ ಮೇಲ್ವಿಚಾರಣೆ, ಪೂರ್ವಸಿದ್ಧತಾ ಪತ್ರಿಕೆಗಳ ಪರಿಶೀಲನೆ ಜತೆಗೆ ಹಲವು ಜವಾಬ್ದಾರಿ ನೀಡಿತ್ತು. ಶಾಲಾ ವಾರು ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿತ್ತು. ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಲಿತಾಂಶ ಹೊಂದಿದ ಶಾಲೆಗಳನ್ನು ಗುರುತಿಸಿ ಕಾರ್ಯಾಗಾರ ನಡೆಸಲಾಗಿತ್ತು. ಪೂರ್ವ ಸಿದ್ಧತಾ ಪರೀೆಗಳಲ್ಲಿ ವಿಜ್ಞಾನ, ಗಣಿತ ಮತ್ತು ಇಂಗ್ಲೀಷ ವಿಷಯಗಳಲ್ಲಿ ಕಡಿಮೆ ಅಂಕಗಳ ಪಡೆದ ವಿದ್ಯಾಥಿರ್ಗಳಲ್ಲಿ ವಿಶೇಷ ಕಾಳಜಿ ವಹಿಸಲಾಗಿತ್ತು. ಪೂರ್ವ ಸಿದ್ಧತಾ ಪರೀೆಗಳಲ್ಲಿ "ಸಿ' ಮತ್ತು "ಸಿ+' ಶ್ರೇಣಿ ಪಡೆದ ವಿದ್ಯಾಥಿರ್ಗಳಿಗೆ ಶಾಲಾ ಹಂತದಲ್ಲಿ ಪ್ರತಿ ದಿನ ಪರಿಹಾರ ಬೋಧನೆ ಮತ್ತು ವಿಶೇಷ ಪರೀೆಗಳನ್ನು ನಡೆಸಲಾಗಿದೆ. ಪೂರ್ವ ಸಿದ್ಧತೆ ಪರೀೆಯಲ್ಲಿ 10 ರಿಂದ 28 ಅಂಕಗಳನ್ನು ಪಡೆದ ವಿದ್ಯಾಥಿರ್ಗಳಿಗೆ ಶಾಲಾ ಮಟ್ಟದಲ್ಲಿ ವಸತಿ ರಹಿತ ಕಲಿಕಾ ಶಿಬಿರಗಳನ್ನು ಹಮ್ಮಿಕೊಂಡು ಲಿತಾಂಶ ಸುಧಾರಿಸಲಾಗಿದೆ.
ಶಿಕ್ಷಣ ಇಲಾಖೆ ಕ್ರಮಗಳು:
* ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ ಒಂದೊಂದು ಶಾಲೆಗಳನ್ನು ದತ್ತು ನೀಡಿ, ಮೇಲ್ವಿಚಾರಣೆಗೆ ಸೂಚನೆ.
* ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪಾಲಕರಿಗೆ ಕರೆ ಮಾಡಿ ಮಕ್ಕಳು ಕಲಿಕೆಯಲ್ಲಿ ತೋಡಗಿಸಿಕೊಳ್ಳುವಂತೆ ನೋಡಿಕೊಳ್ಳುವುದು.
* ಕ್ಲಸ್ಟರ ಮಟ್ಟದಲ್ಲಿ ಶಾಲಾ ಶಿಕ್ಷಕರ ಸಮಿತಿ ರಚಿಸಿ, ಮೊತ್ತು ಶಾಲೆಯ ಶೈಕ್ಷಣಿಕ ಗುಣಮಟ್ಟ, ಪರೀಾ ಅಂಕಗಳ ಪರಿಶೀಲನೆ ನಡೆಸುವುದು.
* ಆಯಾ ಶಾಲಾ ಮಟ್ಟದಲ್ಲಿ ಪಠ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ವ್ಯಾಕರಣ, ಕಂಠಪದ್ಯ, ವಿಜ್ಞಾನ ವಿಷಯಗಳ ಮೇಲೆ ಸ್ಪ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net