ಪ್ರಸಕ್ತ 2025 - 26ನೇ ಸಾಲಿನಲ್ಲಿ ಶೇ. 100 ರಷ್ಟು ಸಾಧನೆ ಮಾಡಿದ ಶಾಲೆಗಳ ಸಂಖ್ಯೆ ಕಳೆದ ಬಾರಿಗಿಂತಲೂ ಅಧಿಕಗೊಂಡಿವೆ. ಶಿಕ್ಷಣ ಇಲಾಖೆ ಪರಿಶ್ರಮಕ್ಕೆ ಇದು ಸಾಯಾಗಿದೆ. ಜಿಲ್ಲೆಯಲ್ಲಿ 63 ಸರ್ಕಾರಿ ಶಾಲೆಗಳು, 29 ಅನುದಾನಿತ ಶಾಲೆಗಳು, 33 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 125 ಶಾಲೆಗಳು ಶೇ. 100 ರಷ್ಟು ಲಿತಾಂಶ ಸಾಧಿಸಿವೆ. ಕಳೆದ 2024 25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ಕಾರಿ 5 ಶಾಲೆಗಳು, ಅನುದಾನಿತ 1 ಶಾಲೆ ಮತ್ತು ಅನುದಾನ ರಹಿತ 5 ಶಾಲೆಗಳು ಸೇರಿ ಒಟ್ಟು 11 ಶಾಲೆಗಳು ಮಾತ್ರ ಶೇ. 100 ರಷ್ಟು ಫಲಿತಾಂಶ ಸಾಧಿಸಿದ್ದವು.