ಖಾತೆ ತೆರೆಯಲು ಆರಂಭಿಕ ಠೇವಣಿ ₹2 ಸಾವಿರ ಹಣವನ್ನು ಆರೋಪಿಗಳೇ ನೀಡಿದ್ದರು. ನಂತರ, ಅವರಿಂದ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ವಿವರ ಹಾಗೂ ಖಾತೆಗೆ ಲಿಂಕ್ ಇದ್ದ ಮೊಬೈಲ್ ಸಿಮ್ ಕಾರ್ಡ್ ಪಡೆದುಕೊಂಡಿದ್ದರು. ಈ ವಂಚನೆ ಕುರಿತು ಮಾರ್ಚ್ 11ರಂದು ಪ್ರಕರಣ ದಾಖಲಾಗಿತ್ತು.