ಬಾಲಕಿಯರ ವಸತಿ ನಿಲಯದ ವಿದ್ಯಾಥಿರ್ನಿಯರಿಗೆ ಔಷಧ ಕಿಟ್ ವಿತರಣೆ
ನಗರದ ಡಾ.ಬಿ.ಆರ್.ಅಂಬೇಡ್ಕರ ಸರ್ಕಾರಿ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ಆಯುಷ್ ಇಲಾಖೆಯು ಬಾಲಕಿಯರಿಗೆ ಎಸ್ಸಿ, ಟಿಎಸ್ಪಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾಥಿರ್ ಚೇತನ ಕಾರ್ಯಕ್ರಮದಲ್ಲಿ ಔಷಧ ಕಿಟ್ ವತರಿಸಲಾಯಿತು. ನಂದಾ ಹನಬರಟ್ಟಿ, ಸುಜಾತಾ ಪಾಟೀಲ, ಗಾಯತ್ರಿ ಲಮಾಣಿ, ಸುಧಾ, ಗೀತಾ ಇತರರು ಇದ್ದರು.
ರಾಜ್ಯ ಸರ್ಕಾರವು ವಿದ್ಯಾಥಿರ್ಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ಶಿಣಕ್ಕೆ ಹೆಚ್ಚಿನ ಒತ್ತನ್ನು ನೀಡಿರುವ ಯೋಜನೆಗಳ ಸೌಲಭ್ಯಗಳನ್ನು ವಿದ್ಯಾಥಿರ್ಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಡಾ.ನಂದಾ ಹನಬರಟ್ಟಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ಸರ್ಕಾರಿ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ಆಯುಷ್ ಇಲಾಖೆಯು ಬಾಲಕಿಯರಿಗೆ ಎಸ್ಸಿ, ಟಿಎಸ್ಪಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾಥಿರ್ ಚೇತನ ಕಾರ್ಯಕ್ರಮದಲ್ಲಿ ಔಷಧ ಕಿಟ್ ವಿತರಿಸಿ ಮಾತನಾಡಿದರು.
ಆಯುಷ್ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾಥಿರ್ ನಿಲಯಗಳಲ್ಲಿರುವ ವಿದ್ಯಾಥಿರ್, ವಿದ್ಯಾಥಿರ್ನಿಯರಿಗೆ ವಿದ್ಯಾಥಿರ್ ಚೇತನ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾಥಿರ್ಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮಾಗೋರ್ಪಾಯಗಳನ್ನು ತಿಳಿಸುವ ಮೂಲಕ ಅವರಲ್ಲಿ ಆರೋಗ್ಯ ಜಾಗೃತಿ, ವೈಚಾರಿಕತೆ ಮೂಡಿಸಲಾಗುತ್ತಿದೆ ಎಂದರು.
ವಿದ್ಯಾಥಿರ್ಗಳಿಗೆ ಯೋಗ, ಧ್ಯಾನ, ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾಥಿರ್ಗಳು ಶ್ರದ್ಧೆಯಿಂದ ಇಷ್ಟಪಟ್ಟು ಅಭ್ಯಾಸ ಮಾಡಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಶೋಕ ಮತ್ತಿಗಟ್ಟಿ ಅವರು ಮಾತನಾಡಿ ವಿದ್ಯಾಥಿರ್ಗಳು ಒತ್ತಡ ರಹಿತ ಜೀವನ ನಡೆಸಬೇಕು. ಮನೋವಿಕಾಸಕ್ಕೆ, ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿರುವ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಭ್ಯಾಸ, ಆರೋಗ್ಯ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ವಿದ್ಯಾಥಿರ್ ಚೇತನ ಯೋಜನೆಯ ನಿರ್ವಹಣಾಕಾರಿ ಡಾ.ಸಾಯಿಪ್ರಕಾಶ ಮಡಿವಾಳರ ಅವರು ಔಷಧ ಕಿಟ್ದಲ್ಲಿರುವ ಔಷಧಗಳ ಮಾಹಿತಿ ಮತ್ತು ಅವುಗಳನ್ನು ಉಪಯೋಗಿಸುವ ರೀತಿಯನ್ನು ವಿದ್ಯಾಥಿರ್ಗಳಿಗೆ ಮನವರಿಕೆ ಮಾಡಿಕೊಟ್ಟರು. ವಸತಿ ನಿಲಯದ 250 ವಿದ್ಯಾಥಿರ್ನಿಯರಿಗೆ ಔಷಧ ಕಿಟ್ಗಳನ್ನು ಹಾಗೂ ವಸತಿ ನಿಲಯಕ್ಕೆ ಐಇಸಿ ಎರಡು ಪ್ರೇಮ್ಗಳನ್ನು ಆಯುಷ್ ಇಲಾಖೆಯಿಂದ ವಿತರಿಸಲಾಯಿತು.
ವಿದ್ಯಾಥಿರ್ ನಿಲಯದ ಮೇಲ್ವಿಚಾರಕಿ ಸುಜಾತಾ ಪಾಟೀಲ ಮಾತನಾಡಿದರು. ಗಾಯತ್ರಿ ಲಮಾಣಿ, ಸುಧಾ, ಗೀತಾ ಇತರರು ಇದ್ದರು.