ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ

ಗದಗ
ಗದಗ
Published on
ಮೇಳದಲ್ಲಿ ಮರೆಹೋದು ಖಾದ್ಯಗಳ ಕುರಿತು ಪಾಕ ಸ್ಪರ್ಧೆ
ವಿಜಯವಾಣಿ ಸುದ್ದಿಜಾಲ ಗದಗ
ಪ್ರಸಕ್ತ ಸಾಲಿನ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ವಾಣಿಜ್ಯ ಮೇಳ ಅಂಗವಾಗಿ ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ರಾಗಿಯಿಂದ ನಿಮಿರ್ಸಿದ ಕೇಕ್​ ಕತ್ತರಿಸುವ ಮೂಲಕ ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯಗಳು ಕಡಿಮೆ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಬೆಳೆಯುತ್ತಿದ್ದು, ಪೌಷ್ಟಿಕಾಂಶಗಳ ಆಗರವಾಗಿರುತ್ತವೆ. ಇವುಗಳ ನಿಯಮಿತವಾದ ಸೇವನೆಯಿಂದ, ಈಗಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಕ್ಕರೆ ರೋಗ, ರಕ್ತದೊತ್ತಡ, ಬೊಜ್ಜು ಇತ್ಯಾದಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಹು. ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯಕರ ಜೀವನವನ್ನು ನಡೆಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ ಸ್ಪರ್ಧೆಯಲ್ಲಿ ಎಲ್ಲರೂ ಅತಿ ಉತ್ಸಾಹದಿಂದ ಭಾಗವಹಿಸಿರುವುದು ತುಂಬಾ ಸಂತೋಷ. ಎಲ್ಲ ಖಾದ್ಯಗಳು ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಬಹುಮಾನ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದರು.
ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಿಂದ ಒಟ್ಟು 73 ಸ್ಪರ್ಧಾಥಿರ್ಗಳು ವೈವಿಧ್ಯಮಯ ಹಾಗೂ ರುಚಿಕರವಾದ ವಿವಿಧ ಸಿರಿಧಾನ್ಯದ ಹಾಗೂ ಮರೆತು ಹೋದ ಖಾದ್ಯಗಳನ್ನು ಪ್ರದಶಿರ್ಸಿದರು. ಸಿರಿಧಾನ್ಯದ ಸಿಹಿ ಖಾದ್ಯಗಳಲ್ಲಿ ವಿವಿಧ ಪಾಯಸಗಳು, ಹೋಳಿಗೆಗಳು, ಲಾಡುಗಳು, ಹಲ್ವಾ, ಕೇಕ್​, ಪುಡ್ಡಿಂಗ್​, ಸಿರಿಧಾನ್ಯ ಗಾರಿಗೆ, ಸಜ್ಜೆ ಉಂಡೆ ಮತ್ತು ಮಾದ್ಲಿ ಇತ್ಯಾದಿಗಳನ್ನು ತಯಾರಿಸಿ ಆಕರ್ಷಕವಾಗಿ ಪ್ರದಶಿರ್ಸಿದರು.
ಮೇಳದಲ್ಲಿ ಸಿರಿಧಾನ್ಯದ ಖಾರದ ಖಾದ್ಯಗಳಲ್ಲಿ ರುಚಿಕರವಾದ ವಡೆಗಳು, ನುಚ್ಚು, ಅಂಬಲಿ, ಹಪ್ಪಳ, ಚಕ್ಕುಲಿ, ಕಿಚಡಿ, ರೊಟ್ಟಿಗಳು, ಜೋಳದ ಮುಟುಗಿ, ಎಣ್ಣೆಗಡುಬು, ಪಲಾವ್​, ದೋಸೆ, ಮಾಲ್ಟ್​, ಸಾವಿ ಮೊಸರನ್ನ, ಉಂಡಗಡುಬು, ಜೋಳದ ಕಿಚಡಿ, ಜೋಳದ ಮಸಾಲೆ ರೊಟ್ಟಿ, ಬಲಿರ್ ಪೊಂಗಲ್​, ಸಿರಿಧಾನ್ಯ ನಿಪ್ಪಟ್ಟು ನೋಡುಗರನ್ನು ಸೆಳೆದವು. ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಪೌಷ್ಟಿಕವಾದ ಕೊರಲೆ ಅಕ್ಕಿ ಸಂಡಿಗೆ, ಕೋಡಬೇಳೆ, ಗೋದಿ ಗಾರಿಗೆ, ಆಣಿಕಲ್ಲು ಹುಗ್ಗಿ, ಹುರುಳಿ ಪಾಯಸ, ಗುಳ್ಳಡಿಕೆ ಉಂಡಿ, ಬೆಲ್ಲದ ಹೋಳಿಗೆ, ಅಗಸೆ ಉಂಡೆ, ಕೆಂಪು ಗೋಧಿ ಹಲ್ವ ಇತ್ಯಾದಿಗಳನ್ನು ಪ್ರದರ್ಶನ ಮಾಡಲಾಯಿತು.
ಶ್ರೀಮತಿ ಸುಧಾ ಮಂಕಣಿ, ಮುಖ್ಯಸ್ಥರು(ಪ್ರಭಾರಿ), ಕೆ.ಚ್​.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಶ್ರೀಮತಿ ಸಾವಿತ್ರಿ ಬ್ಯಾಡಗಿ, ಆರ್​.ಡಿ.ಪಿ.ಆರ್​. ಯುನಿಸಿರ್ಟಿ, ಹಾಗೂ ಶ್ರೀಮತಿ ಸ್ಫೂತಿರ್ ಜಿ.ಎಸ್​., ಉಪ ಕೃಷಿ ನಿರ್ದೇಶಕರು, ಗದಗ ಇವರು ನಿರ್ಣಾಯಕರಾಗಿ ಭಾಗವಹಿಸಿದ್ದರು.
ಉಪವಿಭಾಗಾಧಿಕಾರಿ ಗಂಗಪ್ಪ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net