ಎಸ್​ಐಆರ್​ ಅಂಗವಾಗಿ ವಿಶೇಷ ಮತದಾರರ ಜಾಗೃತಿ ಅಭಿಯಾನ

  ಗದಗ ಜಿಪಂ ಸಭಾಂಗಣದಲ್ಲಿ ಎಸ್​ಐಆರ್​ ಕುರಿತು ಸಭೆ ಜರುಗಿತು. ಸಿಇಓ ಮುಕುಲ್​ ಜೈನ್​, ಸಿ.ಆರ್​. ಮುಂಡರಗಿ ಇತರರು ಇದ್ದರು.
ಗದಗ ಜಿಪಂ ಸಭಾಂಗಣದಲ್ಲಿ ಎಸ್​ಐಆರ್​ ಕುರಿತು ಸಭೆ ಜರುಗಿತು. ಸಿಇಓ ಮುಕುಲ್​ ಜೈನ್​, ಸಿ.ಆರ್​. ಮುಂಡರಗಿ ಇತರರು ಇದ್ದರು.
Published on
18 ವರ್ಷ ರ್ಪೂಣಗೊಂಡ ಯುವ ಮತದಾರರ ನೋಂದಣಿಗೆ ಆದ್ಯತೆ: ಮುಕುಲ್​ ಜೈನ
ವಿಜಯವಾಣಿ ಸುದ್ದಿಜಾಲ ಗದಗ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -2026ರ ಅಂಗವಾಗಿ ಜಿಲ್ಲೆಯ ಎಲ್ಲ ಅರ್ಹ ಯುವ ಮತದಾರರನ್ನು ಗುರುತಿಸಿ, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಸ್ವೀಪ ಸಮಿತಿ ಅಧ್ಯಕ್ಷ, ಜಿಪಂ ಸಿಇಓ ಮುಕುಲ್​ ಜೈನ್​ ಹೇಳಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಎಸ್​ಐಆರ್​ ಪ್ರಕ್ರಿಯೆಯ ಅಂಗವಾಗಿ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಅರ್ಹ ನಾಗರಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೇರೇಪಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಹ ನಾಗರಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೇರೇಪಿಸಲು ಸೆ. 19, ಶನಿವಾರ ಹಾಗೂ ಸೆ. 20, ಭಾನುವಾರ ಯಾವುದೇ ಅರ್ಹ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬ ಧ್ಯೇಯವಾಕ್ಯದೊಂದಿಗೆ ವಿಶೇಷ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ್ನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಅಭಿಯಾನದ ಮೂಲಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ ಅರ್ಹ ನಾಗರಿಕರನ್ನು ಗುರುತಿಸಿ, ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪದವಿ, ಐಟಿಐ, ಪಾಲಿಟೆಕ್ನಿಕ್​ ಹಾಗೂ ವಿಶ್ವವಿದ್ಯಾಲಯ ಕಾಲೇಜುಗಳ ನೇಮಕಾತಿ ದಾಖಲೆಗಳನ್ನು ಇಟ್ಟುಕೊಂಡು 18 ವರ್ಷ ರ್ಪೂಣಗೊಂಡಿರುವ ಹಾಗೂ ಶ್ರ್ರೀದಲ್ಲೆ 18 ವರ್ಷ ಪೂರೈಸಲಿರುವ ವಿದ್ಯಾಥಿರ್ಗಳ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸಬೇಕು. ವಿದ್ಯಾಥಿರ್ಗಳ ಹೆಸರು, ವಯಸ್ಸು, ಜನ್ಮ ದಿನಾಂಕ ಹಾಗೂ ಅಗತ್ಯ ದಾಖಲೆಗಳ ಲಭ್ಯತೆಯನ್ನು ಪರಿಶೀಲಿಸಿ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹರಾಗಿರುವ ವಿದ್ಯಾಥಿರ್ಗಳನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅರ್ಹ ವಿದ್ಯಾಥಿರ್ಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅನುಸರಿಸಬೇಕಾದ ಪ್ರಕ್ರಿಯೆ ಹಾಗೂ ಅಗತ್ಯ ದಾಖಲೆಗಳ ಕುರಿತು ಎಲೆಕ್ಟ್ರಓಲ್​ ಲಿಟಸಿರ್ ಕ್ಲಬ್​ ಗಳ ಮೂಲಕ ಸಮಗ್ರ ಮಾಹಿತಿ ನೀಡಬೇಕು. ಕಾಲೇಜುಗಳಲ್ಲಿನ ಸದಸ್ಯರು ಹಾಗೂ ನೋಡಲ್​ ಅಧಿಕಾರಿಗಳು ವಿದ್ಯಾಥಿರ್ಗಳಿಗೆ ಮತದಾರರ ನೋಂದಣಿಯ ಮಹತ್ವ, ಅರ್ಹತೆ, ನೋಂದಣಿ ಪ್ರಕ್ರಿಯೆ ಹಾಗೂ ಮತದಾನದ ಹಕ್ಕಿನ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ವಿಶೇಷವಾಗಿ 18 ವರ್ಷ ರ್ಪೂಣಗೊಳಿಸಿದ ವಿದ್ಯಾಥಿರ್ಗಳು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾಲೇಜು ಮಟ್ಟದಲ್ಲಿ ನಿರಂತರ ಪರಿಶೀಲನೆ ನಡೆಸಬೇಕು. ಅರ್ಹ ವಿದ್ಯಾಥಿರ್ಗಳಿಂದ ಅಗತ್ಯ ಅಜಿರ್ಗಳನ್ನು ಪಡೆದು, ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನೋಂದಣಿ ಪ್ರಕ್ರಿಯೆಯನ್ನು ತ್ವರಿತವಾಗಿ ರ್ಪೂಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದ ಸಿಇಓ, ಎನ್​ಎಸ್​ಎಸ್​, ಎನ್​ಸಿಸಿ, ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಹಾಗೂ ಯುವಕರ ಸಹಯೋಗದಲ್ಲಿ ಸೈಕಲ್​ ಮತ್ತು ಬೈಕ್​ ರ್ಯಾಲಿಗಳನ್ನು ಆಯೋಜಿಸಿ ಮತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ನಗರ ಸ್ಥಳಿಯ ಸಂಸ್ಥೆಗಳು, ಪುರಸಭೆ ಹಾಗೂ ನಗರಸಭೆಗಳ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್​ ಮಿಷನ್​ನ ಡಿಜಿಟಲ್​ ಮತ್ತು ಭೌತಿಕ ಹೋಲ್ಡಿಂಗ್​ಗಳ ಮೂಲಕ ಮತದಾರರ ನೋಂದಣಿ, ಮತದಾನದ ಮಹತ್ವ ಹಾಗೂ ಜಾಗೃತಿ ಸಂದೇಶಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್​ ಉಪ ಕಾರ್ಯದಶಿರ್ ಸಿ.ಆರ್​. ಮುಂಡರಗಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net