ಗದಗ : ನಗರದ ಐತಿಹಾಸಿಕ ಗಂಗಾಪುರ ಪೇಟೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸಡಗರ-ಸಂಭ್ರಮದಿಂದ ಜರುಗುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷರಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಆಯ್ಕೆಯಾಗಿದ್ದಾರೆ.
ಈಚೆಗೆ ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಂ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಿದ್ದಣ್ಣ ಪಲ್ಲೇದ ಅವರನ್ನು ಸರ್ವಾನುಮತದಿಂದ 2026ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಇತ್ತಿಚಿಗೆ ನಡೆದ ಸಭೆಯಲ್ಲಿ, ಮೂರು ವರ್ಷಕ್ಕೊಮ್ಮೆ ಬರುವ ದುರ್ಗಾದೇವಿ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವದಿಂದ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಬಸವರಾಜ ಬೆಳದಡಿ, ಪ್ರಧಾನ ಕಾರ್ಯದರ್ಶಿ ಸಂಜೀವ ಚವ್ಹಾಣ, ಕೋಶಾಧ್ಯಕ್ಷ ಬಸವರಾಜ ಅಣ್ಣಿಗೇರಿ, ಟ್ರಸ್ಟಿಗಳಾದ ಮೋಹನ ಇಮರಾಪೂರ, ಬಸವರಾಜ ಕವಳಿಕಾಯಿ, ರಾಜೇಶ ಬುರಬುರೆ, ಯಮನಪ್ಪ ಗೊಂದಿ, ವಿರುಪಾಕ್ಷಪ್ಪ ಕೋತಂಬ್ರಿ, ಪರಶುರಾಮ ಹಬೀಬ ಉಪಸ್ಥಿತರಿದ್ದರು.