ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಣಗುಡುತ್ತಿದ್ದ ಶಾಲೆ-ಕಾಲೇಜು ಆವರಣಗಳಿಗೆ ಮತ್ತೆ ಜೀವಕಳೆ ತುಂಬುವ ಸಮಯ ಬಂದಿದೆ. ಇಂದಿನಿಂದ ಶಾಲಾ ಪ್ರಾರಂಭೋತ್ಸವ ದಿನವಾಗಿದ್ದು, ಶಾಲೆಗೆ ವಿದ್ಯಾರ್ಥಿಗಳ ಬರುವಿಕೆಗಾಗಿ ಶಿಕ್ಷಕ ಸಮೂಹ ಶಾಲಾ ಕೊಠಡಿ ಸ್ವಚ್ಛಗೊಳಿಸಿ ಕಾಯುತ್ತಿದ್ದಾರೆ.
ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆ ಶಾಲೆಗಳ ಆವರಣ, ಬೋಧನಾ ಕೊಠಡಿಗಳು, ಅಡುಗೆ ಕೊಠಡಿಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದ್ದು, ಸುಣ್ಣ-ಬಣ್ಣದೊಂದಿಗೆ ಅಲಂಕಾರ ಮಾಡಲಾಗಿದೆ. ರಜೆ ಮೂಡ್‌ನಲ್ಲಿದ್ದ ವಿದ್ಯಾರ್ಥಿ ಸಮೂಹ ಹೊಸ ತರಗತಿಗೆ ಹೋಗುವ ಸಂಭ್ರಮದಲ್ಲಿದ್ದರೆ, ಪಾಲಕರು ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿ ಖರೀದಿ ಮಾಡಿದ್ದಾರೆ.
ಬೇಸಿಗೆ ರಜೆ ಮೋಜಿಗಾಗಿ ಸಂಬಂಧಿಕರು, ಬಂಧುಗಳ ಊರುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಇದೀಗ ಪುನಃ ತವರಿಗೆ ಹಿಂದಿರುಗುತ್ತಿದ್ದಾರೆ. ಶಾಲೆ ಆರಂಭ ಆಗುವ ಮುನ್ನವೇ ಮಕ್ಕಳ ಓದಿಗೆ ಬೇಕಿರುವ ಪಠ್ಯಪುಸ್ತಕ, ನೋಟ್‌ಬುಕ್, ಸಮವಸ್ತçಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲಕರು-ವಿದ್ಯಾರ್ಥಿಗಳು ನಿರತರಾಗಿದ್ದಾರೆ.
ಶಾಲೆಗೆ ಸಾಮಗ್ರಿ ಖರೀದಿ ಭರಾಟೆ:
ಮುದ್ರಣ ಕಾಶಿ ಎಂದೇ ಕರೆಯಲಾಗುವ ಗದಗನ ಪುಸ್ತಕ ಅಂಗಡಿಕಾರರು ಅಗತ್ಯ ಸಾಮಗ್ರಿಯನ್ನು ಅದಾಗಲೇ ದಾಸ್ತಾನು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ನೋಟ್ ಬುಕ್, ಪೆನ್, ಸ್ಕೂಲ್ ಬ್ಯಾಗ್, ಕಂಪಾಸ್, ಪುಸ್ತಕದ ರಕ್ಷಾ ಕವಚ ಒಳಗೊಂಡಂತೆ ಎಲ್ಲ ಬಗೆಯ ವಸ್ತುಗಳನ್ನು ಜೋಡಿಸಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಪಾಲಕರು ಮಕ್ಕಳಿಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಅತ್ತ ಬಟ್ಟೆ ಅಂಗಡಿಕಾರರು ಕೂಡ ವಿವಿಧ ಶಾಲೆಗಳ ಸಮವಸ್ತçಗಳನ್ನು ಸಂಗ್ರಹಿಸಿಕೊAಡಿದ್ದಾರೆ. ಬಿಸಿಲು ಕಳೆದು ಸಂಜೆಯಾಗುತ್ತಿದ್ದAತೆಯೇ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಪಾಲಕರು ಹಾಗೂ ಮಕ್ಕಳ ದಂಡು ನೆರೆಯುತ್ತಿದೆ. ಎತ್ತ ಕಣ್ಣು ಹಾಯಿಸಿದರೂ ಪುಸ್ತಕ, ಸಮವಸ್ತç, ಶೂ ಖರೀದಿಸುವ ನೋಟವೇ ಕಂಡುಬರುತ್ತಿದೆ. ಮಳಿಗೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ಶಾಲಾ ಕೊಠಡಿ ಸ್ವಚ್ಛತಾ ಕಾರ್ಯ:
ಅವಳಿ ನಗರ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ, ಗ್ರಾಮ ಪಂಚಾಯತ ಹಾಗೂ ವಿವಿಧ ಸಂಘಟನೆಗಳ ಸಹಕಾರದಿಂದ ಶಾಲೆಗಳ ಕೊಠಡಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿ, ಅಡುಗೆ ಕೋಣೆಗಳಿಗೆ ಸುಣ್ಣಬಣ್ಣ ಬಳಿದು ಶೃಂಗರಿಸುವ ಕಾಯಕದಲ್ಲಿ ತೊಡಗಿದ್ದರು.
ಪುಸ್ತಕಗಳು ಶಾಲೆಗಳಿಗೆ ರವಾನೆ:
ಜಿಲ್ಲೆಯ ಬಹುತೇಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಸೇರಿ ಕನ್ನಡ, ಇಂಗ್ಲೀಷ್ ಹಾಗೂ ಉರ್ದು ಮಾಧ್ಯಮದ ಶಾಲೆಗಳಿಗೂ ಈಗಾಗಲೇ ಪುಸ್ತಕಗಳನ್ನು ಆಯಾ ತಾಲೂಕಿನ ಬಿಇಒ ಕಚೇರಿ ಮೂಲಕ ಕಳುಹಿಸಿಕೊಡಲಾಗಿದೆ.
ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ
ಮಕ್ಕಳಿಗೆ ಉಚಿತವಾಗಿ ದೊರೆಯುವ ಪಠ್ಯಪುಸ್ತಕ, ಸಮವಸ್ತç, ಬಿಸಿಯೂಟ, ಹಾಲು ಸೇರಿ ವಿವಿಧ ಸೌಲಭ್ಯಗಳ ಮಾಹಿತಿ ನೀಡಿ ದಾಖಲಾತಿ ಹೆಚ್ಚಿಸಲು ಶ್ರಮಿಸಲಾಗುತ್ತಿದೆ. ಶಾಲೆ ಬಿಟ್ಟಂತಹ ಮಕ್ಕಳನ್ನು ಗುರುತಿಸಿ ತಿಂಗಳ ಮೊದಲ ಹಾಗೂ ಮೂರನೇ ಸೋಮವಾರ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಭೇಟಿ ಮಾಡಿ ಮುಖ್ಯವಾಹಿನಿಗೆ ತರಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಮಾಹಿತಿ ನೀಡಿದರು.
ಕೋಟ್
ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರು ಕಳೆದ ಎರಡು ದಿನಗಳಿಂದ ಶಾಲಾ ಆವರಣ, ಬೋಧನಾ ಹಾಗೂ ಅಡುಗೆ ಕೊಠಡಿಗಳ ಸ್ವಚ್ಛತಾ ಕಾರ್ಯದಲ್ಲಿ ಪೂರ್ಣಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಿ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಗುಣಾತ್ಮಕ ಫಲಿತಾಂಶ ವೃದ್ಧಿಸಲು ಮಕ್ಕಳ ದಾಖಲಾತಿ ಚೆನ್ನಾಗಿದ್ದರೆ ಕಲಿಕೆ ಚೆನ್ನಾಗಿರುತ್ತದೆ ಎಂಬ ಅಂಶದೊAದಿಗೆ ಮಕ್ಕಳ ಹಾಜರಾತಿಗೆ ಹೆಚ್ಚಿಸಲು ವಿಶೇಷ ಆದ್ಯತೆ ಮೇಲೆ ಕೆಲಸ ಮಾಡಲಾಗುತ್ತಿದೆ.