ಇದು ಸಂವಿಧಾನದ ಮೇಲೆ ವ್ಯವಸ್ಥಿತ ದಾಳಿ : ಸಂತೊಷ ಅಕ್ಕಿ

ಸಂತೋಷ ಅಕ್ಕಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ
ಸಂತೋಷ ಅಕ್ಕಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ
Published on
ಗದಗ: ನ್ಯಾಯಾಧೀಶರನ್ನೇ ಒತ್ತೆಯಾಳು ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಇದು ಸಂವಿಧಾನದ ಮೇಲೆ ನಡೆದ ವ್ಯವಸ್ಥಿತ ದಾಳಿ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಏಳು ನ್ಯಾಯಾಂಗ ಅಧಿಕಾರಿಗಳನ್ನು, ಮಹಿಳೆಯರನ್ನು ಮತ್ತು ಐದು ವರ್ಷದ ಮಗುವನ್ನು ಸುಮಾರು ಒಂಬತ್ತು ಗಂಟೆಗಳ ಕಾಲ 1500 ಜನರ ಹಿಂಸಾತ್ಮಕ ಗುಂಪೊಂದು ಒತ್ತೆಯಾಳಾಗಿ ಇರಿಸಿಕೊಂಡ ಟನೆ ಇದಾಗಿದೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ವೈಲ್ಯವಲ್ಲದೇ ಭಾರತೀಯ ಸಂವಿಧಾನದ ಮೇಲೆ ನಡೆದ ವ್ಯವಸ್ಥಿತ ದಾಳಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿದ್ದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆದ ಈ ಕೃತ್ಯವು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಈ ಟನೆಯನ್ನು ಸುಪ್ರೀಂ ಕೋರ್ಟ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು "ಪೂರ್ವನಿಯೋಜಿತ ಮತ್ತು ವ್ಯವಸ್ಥಿತ ಸಂಚು' ಎಂದು ಬಣ್ಣಿಸಿದೆ. ಈ ಪ್ರಕರಣದ ಎಲ್ಲಾ 12 ಎಫ್​ಐಆರ್​ ಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಐಅ) ವರ್ಗಾಯಿಸಲು ಸುಪ್ರೀಂ ಕೋರ್ಟ ಆದೇಶಿಸಿದೆ. ಈ ಕೃತ್ಯದ ಮಾಸ್ಟರ್​ ಮೈಂಡ್​ ಮೊಫಕ್ಕರುಲ್​ ಇಸ್ಲಾಂ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಬಂಧನವಾಗಿರುವುದು ಸ್ವಾಗತಾರ್ಹ. ಇಂತಹ ದೇಶದ್ರೋಹಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net