ಬಂಜಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ
ನಗರದ ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದಲ್ಲಿ ಬಾಂಜಾರ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತೋಂಟದಾರ್ಯ ಮಠದ ಶ್ರೀಗಳು, ಎಂ. ಶರ್. ಚವ್ಹಾಣ, ಡಾ. ಕೆ. ಬಿ. ಪವಾರ, ರವಿಕಾಂತ ಅಂಗಡಿ, ಶ್ರೀಕಾಂತ್ ಜಾಧವ, ಡಾ. ಉಮೇಶ ಪುರದ, ಡಾ. ಬಿ. ಎಸ್. ರಾಠೋಡ ಹಲವರು ಇದ್ದರು
ಗದಗ: ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಹಾಗೂ ಸಮಾಜ ಸೇವಕರಿಗೆ ಹಮ್ಮಿಕೊಳ್ಳಲಾಗಿದ್ದ ಅದ್ಧೂರಿ ಸನ್ಮಾನ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕರ್ನಾಟಕ ಗೊರಸೇನಾ ಸಂಘಟನೆ, ಗೋರಶಕವಾಡಿ ಚಳುವಳಿ ಭಾರತ, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕರ್ನಾಟಕ ಬಂಜಾರ ಸಾಹಿತ್ಯ ಅಕಾಡೆಮಿ, ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಶಿರಸಿಯ ಕೃಪಾ ಫೌಂಡೇಶನ್ ಇವರುಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ‘ಖೋಳಾ ಗೋರಬೊಲಿ ಬಂಜಾರ’ ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇತ್ತೀಚೆಗೆ ನಡೆದ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಂಜಾರ ಸಮುದಾಯದ ವಿದ್ಯಾರ್ಥಿನಿಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಎಸೆಸೆಲ್ಸಿ ವಿಭಾಗ ಅತಿ ಹೆಚ್ಚು ಅಂಕ ಗಳಿಸಿದ ಸುಷ್ಮಾ ತಾವರೆಪ್ಪ ನಾಯಕ ಹಾಗೂ ವೈಷ್ಣವಿ ಕೇಶಪ್ಪ ಲಮಾಣಿ. ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಭಾಗ್ಯಾ ಶೇಖರ ನಾಯಕ ಅವರನ್ನು ಸನ್ಮಾನಿಸಲಾಯಿತು.
ತೋಂಟದ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿದರು. ಕರ್ನಾಟಕ ಬಂಜಾರ ಸಾಂಸ್ಕೃತಿಕ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎಂ. ಆರ್. ಚವ್ಹಾಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ಕೆ. ಬಿ. ಪವಾರ, ರವಿಕಾಂತ ಅಂಗಡಿ, ಶ್ರೀಕಾಂತ್ ಜಾಧವ, ಡಾ. ಉಮೇಶ ಪುರದ, ಡಾ. ಬಿ. ಎಸ್. ರಾಠೋಡ ಹಲವರು ಇದ್ದರು.