ಸಾಮರಸ್ಯದಿಂದ ಮನ, ಮನೆ, ದೇಶವನ್ನು ಕಟ್ಟಬಹುದು: ಟಿ.ಪ್ರಸನ್ನ

ಗದಗ ನಗರದ ಸೇವಾಚೇತನ ಸಭಾಂಗಣದಲ್ಲಿ ಗದುಗಿನ ಸಾಮಾಜಿಕ ಸಾಮರಸ್ಯ ವೇದಿಕೆ ಏರ್ಪಡಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್​, ವಿಶ್ವಗುರು ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಟಿ. ಪ್ರಸನ್ನ ಮಾತನಾಡಿದರು. ರವಿಕಾಂತ ಅಂಗಡಿ, ವಿಜಯಲಕ್ಷಿ$್ಮ, ಹನುಮಂತ ಕಾಳೆ, ಪ್ರೊ. ಮಾರುತಿ ಕಟ್ಟಿಮನಿ, ಡಾ. ಪ್ರಕಾಶ ಹೊಸಮನಿ, ಸುಧೀರಸಿಂಹ ಘೋರ್ಪಡೆ, ಶ್ರೀಪತಿ ಉಡುಪಿ, ಡಾ.ಉಮೇಶ ಹಾದಿ, ಬಸವರಾಜ ನಾಗಲಾಪೂರ, ಸಂತೋಷ ಅಕ್ಕಿ, ನಾಗವೇಣಿ ಕಟ್ಟಿಮನಿ, ರಮೇಶ ಸಜ್ಜಗಾರ, ನರಸಿಂಹ ಕಾಮಾತಿರ್, ಚೇತನ ಮೇರವಾಡೆ, ಸಿ. ಬಿ. ಸೊನ್ನದ, ಮಲ್ಲು ನಾಗಲಾಪೂರ ಇತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ದ್ವೇಷ, ಸಂರ್ಷ, ಯುದ್ಧದಿಂದ ಏನನ್ನೂ ಸಾಧಿಸಲಾಗದು. ಪರಸ್ಪರ ಮಾತುಕತೆ, ಸೌಹಾರ್ದ ಭೇಟಿ, ಸಾಮರಸ್ಯದ ಹೋಗಿ ಬರುವಿಕೆಯಿಂದ ನಾವಿಂದು ಮನ, ಮನೆ, ದೇಶವನ್ನು ಕಟ್ಟಲು ಸಾಧ್ಯವಿದೆ. ಅಂತಹ ಸದ್ಭಾವನೆಯ ಚಿಂತನೆಗೆ ನಾವಿಂದು ಅಣಿಗೊಳ್ಳುವದು ಅನಿವಾರ್ಯವಾಗಿದೆ ಎಂದು ಬಳ್ಳಾರಿಯ ಸಹಪ್ರಾಂತ ಕಾರ್ಯವಾಹ ವಕ್ತಾರ ಟಿ.ಪ್ರಸನ್ನ ಹೇಳಿದರು.
ಗುರುವಾರ ನಗರದ ಸೇವಾಚೇತನ ಸಭಾಂಗಣದಲ್ಲಿ ಗದುಗಿನ ಸಾಮಾಜಿಕ ಸಾಮರಸ್ಯ ವೇದಿಕೆ ಏರ್ಪಡಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್​, ವಿಶ್ವಗುರು ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ನಿಮಿತ್ಯ ಉಪನ್ಯಾಸ ನೀಡಿ ಮಾತನಾಡಿದ ಅವರು,
ಸಮಾಜದಲ್ಲಿನ ಮೇಲು, ಕೀಳು, ಬಡತನ, ಸಿರಿತನ, ಅರಸ್ಥ, ಅನರಸ್ಥ ಎಂಬುದು ಮುಖ್ಯವಲ್ಲ. ವೈಚಾರಿಕ ಚಿಂತನ ಮೂಡಿಸುವ ಶಿಣ, ಮಾನವೀಯ ಗುಣಗಳನ್ನು ಗಟ್ಟಿಗೊಳಿಸುವ ಸಂಬಂಧಗಳು, ನಾವೆಲ್ಲರೂ ಒಂದು, ನಾವೆಲ್ಲರೂ ಸಮಾನರು ಎಂಬ ಭಾವ ನಿರ್ಮಾಣಗೊಂಡು ಪರಸ್ಪರ ಕೈಜೋಡಿಸಿದಾಗ ಭಾರತ ಇನ್ನಷ್ಟು ಸಮೃದ್ಧ ಬಲಿಷ್ಠ ದೇಶವಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಡಾ. ಬಾಬಾಸಾಹೇಬ ಅಂಬೇಡ್ಕರ, ವಿಶ್ವಗುರು ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಸಮಸಮಾಜ ನಿರ್ಮಾಣಕ್ಕೆ, ಮನುಷ್ಯತ್ವ, ಮಾನವೀಯತೆ, ದೇಶದ ಏಕತೆ ಮತ್ತು ಐಕ್ಯತೆಗೆ ಶ್ರಮಿಸಿದ ಮಹಾನ್​ ಚೇತನರಾಗಿದ್ದಾರೆ. ಭಾರತ ಮತ್ತು ಭಾರತೀಯರ ಸಂರಣೆಗೆ ಮನಮಿಡಿದವರು. ಅವರ ವಿಚಾರಧಾರೆಗಳನ್ನು ಕಾರ್ಯಗತ ಗೊಳಿಸುವುದರಿಂದ ನಾವು ಅವರಿಗೆ ಸಲ್ಲಿಸಬೇಕಾದ ಗೌರವವಾಗಿದೆ ಎಂದರು.
12ನೇ ಶತಮಾನದಲ್ಲಿ ಅನುಭವ ಮಂಟದ ಮೂಲಕ ಸಮಾನತೆ ಧ್ವನಿಸಿ, ವಿಶ್ವಬಂಧುತ್ವ ಸಂದೇಶ ಸಾರಿದ ಬಸವಣ್ಣ ಇಂದಿಗೂ ಪ್ರಸ್ತುತ. ಅಸ್ಪಶ್ರತೆಯಿಂದಾಗಿ ತುಳಿತಕ್ಕೆ ಒಳಗಾದವರನ್ನು ಸ್ವಾಭಿಮಾನದಿಂದ ಎದ್ದು ನಿಲ್ಲುವಂತೆ ಮಾಡಿದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಶಿಣ ಹಾಗೂ ಸಂಸ್ಕಾರದ ಮೂಲಕ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ, ಸಮಾನತೆ ತಂದ ಮಹಾನ ದಾರ್ಶನಿಕರಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತರಾಗಿದ್ದರು ಎಂದರು.
ಸಮಾರಂಭದ ಅಧ್ಯತೆ ವಹಿಸಿದ್ದ ನೀರಾವರಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಂ. ಜಿ. ಸಂತೋಜಿ ಮಾತನಾಡಿ ಹಿಂದೂಗಳೆಲ್ಲರೂ ಒಂದಾಗುವದು ಎಂದಿಗಿಂತ ಇಂದು ಅವಶ್ಯವಿದೆ. ಜಾತಿ ಧರ್ಮ, ಬಡವ ಶ್ರೀಮಂತ ಎಂಬುದನ್ನು ಮರೆತು ದೇಶದ ಐಕ್ಯತೆಗೆ ನಾವು ಬದ್ಧರಾಗಿರಬೇಕು. ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯ ಸದುಪಯೋಗ ಆಗಬೇಕು. ಗುರು, ವಿರಕ್ತರು ಸದ್ಭಕ್ತರನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ರವಿಕಾಂತ ಅಂಗಡಿ, ವಿಜಯಲಕ್ಷಿ$್ಮ, ಹನುಮಂತ ಕಾಳೆ, ಪ್ರೊ. ಮಾರುತಿ ಕಟ್ಟಿಮನಿ, ಡಾ. ಪ್ರಕಾಶ ಹೊಸಮನಿ, ಸುಧೀರಸಿಂಹ ಘೋರ್ಪಡೆ, ಶ್ರೀಪತಿ ಉಡುಪಿ, ಡಾ.ಉಮೇಶ ಹಾದಿ, ಬಸವರಾಜ ನಾಗಲಾಪೂರ, ಸಂತೋಷ ಅಕ್ಕಿ, ನಾಗವೇಣಿ ಕಟ್ಟಿಮನಿ, ರಮೇಶ ಸಜ್ಜಗಾರ, ನರಸಿಂಹ ಕಾಮಾತಿರ್, ಚೇತನ ಮೇರವಾಡೆ, ಸಿ. ಬಿ. ಸೊನ್ನದ, ಮಲ್ಲು ನಾಗಲಾಪೂರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net