ರೋಟರಿ ಕ್ಲಬ್​ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

 ಗದಗ ರೋಟರಿ ಭವನದಲ್ಲಿ ಜರುಗಿದ ನೂತನ ಪದಾಧಿಕಾರಿಗಳ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜು ಚಂದಪ್ಪನ್ನವರ, ಶ್ರೀಧರಗೌಡ ಧರ್ಮಾಯತ, ರಾಜು ಕುರಡಗಿ, ವಿ.ಕೆ. ಗುರುಮಠ, ಶಶಿಧರ ದಿಂಡೂರು, ಸದಾಶಿವ ಮದರಿಮಠ, ಎಂ.ಸಿ. ಐಲಿ ಹಲವರು ಇದ್ದರು.
ಗದಗ ರೋಟರಿ ಭವನದಲ್ಲಿ ಜರುಗಿದ ನೂತನ ಪದಾಧಿಕಾರಿಗಳ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜು ಚಂದಪ್ಪನ್ನವರ, ಶ್ರೀಧರಗೌಡ ಧರ್ಮಾಯತ, ರಾಜು ಕುರಡಗಿ, ವಿ.ಕೆ. ಗುರುಮಠ, ಶಶಿಧರ ದಿಂಡೂರು, ಸದಾಶಿವ ಮದರಿಮಠ, ಎಂ.ಸಿ. ಐಲಿ ಹಲವರು ಇದ್ದರು.
Published on
ಸಮಾಜ ಸೇವೆಗೆ ಇನ್ನಷ್ಟು ಒತ್ತು: ಮಲ್ಲಿಕಾರ್ಜುನ ಚಂದಪ್ಪನ್ನವರ
ವಿಜಯವಾಣಿ ಸುದ್ದಿಜಾಲ ಗದಗ
ರೋಟರಿ ಕ್ಲಬ್​ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ರೋಟರಿ ಭವನದಲ್ಲಿ ಸೋಮವಾರ ಜರುಗಿತು.
ಮುಖ್ಯ ಅತಿಥಿಯಾ ಡಾ. ಪ್ರಾಣೇಶ ಜಾಗಿರದಾರ ಮಾತನಾಡಿ, ರೋಟರಿ ಸಂಸ್ಥೆಯು ಮಾನವೀಯ ಸೇವೆ, ಸಾಮಾಜಿಕ ಕಳಕಳಿ ಮತ್ತು ನಾಯಕತ್ವದ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ರೋಟರಿ ನೀಡುತ್ತಿರುವ ಕೊಡುಗೆ ಶ್ಲಾನೀಯ ಎಂದರು.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಚಂದಪ್ಪನ್ನವರ ಮಾತನಾಡಿ, ಈ ವರ್ಷ ಸದಸ್ಯರ ಸಹಕಾರದೊಂದಿಗೆ ಇನ್ನಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಶಾಲಾ ಮಕ್ಕಳಿಗೆ ಅಗತ್ಯ ಸೌಲಭ್ಯಗಳು, ವೃಕ್ಷಾರೋಪಣ, ರಕ್ತದಾನ, ಮಹಿಳಾ ಸಬಲೀಕರಣ ಹಾಗೂ ಯುವಜನರ ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸದಸ್ಯತ್ವ ವಿಸ್ತರಣೆ, ಸಮಾಜ ಸೇವೆ ಹಾಗೂ ಹೊಸ ಯೋಜನೆಗಳ ಮೂಲಕ ಕ್ಲಬ್​ ಇನ್ನಷ್ಟು ಜನರಿಗೆ ತಲುಪುವಂತೆ ಕಾರ್ಯ ನಿರ್ವಹಿಸಲಾಗುವುದು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವೇ ರೋಟರಿಯ ಮೂಲ ಧ್ಯೇಯವಾಗಿದೆ. ಪ್ರತಿಯೊಬ್ಬ ಸದಸ್ಯರೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಸಮಾರಂಭದಲ್ಲಿ ಸಮಾಜ ಸೇವೆ, ಶಿಕ್ಷಣ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಚಂದಪ್ಪನ್ನವರ, ಕಾರ್ಯದಶಿರ್ಯಾಗಿ ಪರಶುರಾಮ ನಾಯ್ಕರ, ಖಜಾಂಚಿಯಾಗಿ ಸಿ. ಜಿ. ಹಿರೇಗೌಡ ಆಯ್ಕೆ ಆದರು. ನಿರ್ಗಮಿತ ಅಧ್ಯಕ್ಷರು ಕಳೆದ ಸಾಲಿನ ಸೇವಾ ಚಟುವಟಿಕೆಗಳ ವರದಿಯನ್ನು ಮಂಡಿಸಿ, ಕ್ಲಬ್​ ಕೈಗೊಂಡ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣೆ, ಶಿಕ್ಷಣ ಪ್ರೋತ್ಸಾಹ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಶ್ರೀಧರಗೌಡ ಧರ್ಮಾಯತ, ರಾಜು ಕುರಡಗಿ, ವಿ.ಕೆ. ಗುರುಮಠ, ಶಶಿಧರ ದಿಂಡೂರು, ಸದಾಶಿವ ಮದರಿಮಠ, ಎಂ.ಸಿ. ಐಲಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net