ಒಳಮೀಸಲಾತಿಯಲ್ಲಿ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ, ಮನವಿ

ಒಳಮೀಸಲಾತಿಯಲ್ಲಿ ಅನ್ಯಾಯ ಸರಿಪಡಿಸಿ ಎಂದು ಆಗ್ರಹಿಸಿ ಕೊರಚ, ಕೊರಮ, ಬೋವಿ ಹಾಗೂ ಲಂಭಾಣಿ ಸಮುದಾಯದವರು ಪ್ರತಿಭಟನೆ ನಡೆಸಿದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ರವಿಕಾಂತ ಅಂಗಡಿ, ಕೆ. ಸಿ. ನಭಾಪುರ, ಪರಮೇಶ ನಾಯಕ, ರಮೇಶ ನಾಯಕ, ಟಿ. ಡಿ. ಪೂಜಾರ, ಎಲ್​. ಎಲ್​. ಚವ್ಹಾಣ, ಚಂದು ನಾಯಕ, ವಿಠ್ಠಲ್​ ತೋಟದ, ತುಳಚಪ್ಪ ಚವ್ಹಾಣ ಹಲವರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಒಳಮೀಸಲಾತಿಯಲ್ಲಿ ಬಂಜಾರಾ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಅವೈಜ್ಞಾನಿಕ ವಗಿರ್ಕರಣ ವಿರೋಧಿಸಿ ಬಂಜಾರ ಕೊರಮ ಕೊರಚ ಹಾಗೂ ಬೋವಿ ಸಮುದಾಯಗಳು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು.
ಮನವಿ ಸಲ್ಲಿ ಮಾತನಾಡಿದ ಮುಕಂಡ ರವಿಕಾಂತ ಅಂಗಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಲಾತಿಯ ವರ್ಗೀಕರಣ, ಮೀಸಲಾತಿ ಶೇಕಡಾವಾರು ಹಂಚಿಕೆ ಹಾಗೂ ರೋಸ್ಟರ್​ ಬಿಂದು ನಿಗದಿಯಲ್ಲಿ ಬಂಜಾರಾ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಅನ್ಯಾಯವಾಗಿದೆ. ಗಂಭೀರ ಆತಂಕ ನಮ್ಮ ಸಮುದಾಯದ ಜನರಲ್ಲಿ ಉಂಟಾಗಿದೆ. ಆದ್ದರಿಂದ ಮೀಸಲಾತಿಯಲ್ಲಿ ಎಬಿಸಿ ವರ್ಗೀಕರಣವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಪರಿಷತ ಜಾತಿಗಳಿಗೆ ಲಭ್ಯ ಇರುವ ಶೇ. 15 ರಷ್ಟು ಮೀಸಲಾತಿಯಲ್ಲಿ ಸಿ ಗುಂಪಿಗೆ ನೀಡಬೇಕು ಎಂದು ಆಗ್ರಹಿಸಿದರು. ಈಗಿರುವ ನೇಮಕಾತಿಗಳ ಅಧಿಸೂಚನೆಗಳನ್ನು ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಜಾರಿಯಲ್ಲಿ ಇರುವ ನಿಯಮಗಳ ಪ್ರಕಾರ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸಬೇಕು ಎಂದರು.
ಕೆ. ಸಿ. ನಭಾಪುರ, ಪರಮೇಶ ನಾಯಕ, ರಮೇಶ ನಾಯಕ, ಟಿ ಡಿ ಪೂಜಾರ, ಎಲ್​. ಎಲ್​. ಚವ್ಹಾಣ, ಚಂದು ನಾಯಕ, ವಿಠ್ಠಲ್​ ತೋಟದ, ತುಳಚಪ್ಪ ಚವ್ಹಾಣ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net