ಈ ವರದಿಯಲ್ಲಿ ಗದಗ ಜಿಲ್ಲೆಯನ್ನು ಅತ್ಯಂತ ಹಿಂದೂಳಿದ ಜಿಲ್ಲೆಯಾಗಿ ಪರಿಗಣಿಸಿರುವ ಸಮಿತಿಯು, ಕೈಗಾರಿಕೋದ್ಯಮ, ವರಮಾನ, ಶಿಕ್ಷಣ, ಸಾಮಾಜಿಕ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಗದಗ ಜಿಲ್ಲೆ ಸಂರ್ಪೂಣ ಹಿಂದೂಳಿದೆ ಎಂದು ಉಲ್ಲೇಖಿಸಿದೆ. ನಂಜುಂಡಪ್ಪ ವರದಿ ಅನುಸಾರ ಈ ಹಿಂದೆ ಜಿಲ್ಲೆಯ ಶಿರಹಟ್ಟಿ, ರೋಣ ತಾಲೂಕುಗಳು ಹಿಂದೂಳಿದ ತಾಲೂಕು ಆಗಿದ್ದವು. ಪ್ರಸ್ತತ ವರದಿಯಲ್ಲಿ ಜಿಲ್ಲೆಯ ಎಲ್ಲ 7 ತಾಲೂಕುಗಳನ್ನು ವಿವಿಧ ಮಾನದಂಡಗಳ ಅನುಸಾರ ಮೌಲ್ಯಮಾಪನ ಮಾಡಿರುವ ಪ್ರೊ. ಗೋವಿಂದರಾವ್ ಸಮಿತಿಯು ಎಲ್ಲ ತಾಲೂಕುಗಳನ್ನು ಅತ್ಯಂತ ಹಿಂದೂಳಿದ ಮತ್ತು ಅತಿ ಹಿಂದೂಳಿದ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ವರದಿ ಪ್ರಕಾರ ಜಿಲ್ಲೆಯ ಯಾವುದೇ ತಾಲೂಕು ಅಭಿವೃದ್ದಿ ಹೊಂದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಜಿಲ್ಲೆಯ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನಿಸಿದರೆ ಇಲ್ಲಿಮ ಜನಪ್ರತಿನಿಧಿಗಳ ಮತ್ತು ಅಧಿಕಾರಿ ವರ್ಗವು ಜಿಲ್ಲೆಯ ಅಭಿವೃದ್ಧಿಯ ಕೊಡುಗೆ ಏನೆಂಬುದನ್ನು ಪ್ರಶ್ನೆ ಮಾಡುವಂತಿದೆ. ತಲಾವಾರು ಉತ್ಪನ್ನದಲ್ಲೂ ಜಿಲ್ಲೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದ್ದು, 2005&06ರಲ್ಲಿ ಶೇ. 73.3ರಷ್ಟಿದ್ದ ತಲಾವಾರು ಉತ್ಪನ್ನ ಈಗ ಶೇ. 58.5ಕ್ಕೆ ಕುಸಿದಿದೆ.