ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪಕ್ಷದಿಂದ ಉಚ್ಚಾಟಿಸಬೇಕು: ರವಿಕಾಂತ ಅಂಗಡಿ

ಶಿರಹಟ್ಟಿ ಮತಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಸಾಕ್ಷ$್ಯ ಬಿಡುಗಡೆ ಮಾಡುವ ಕುರಿತು ರವಿಕಾಂತ ಅಂಗಡಿ ಸುದ್ದಿಗೋಷ್ಟಿ ನಡೆಸಿದರು. ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಚಂದ್ರು ಮಾಗಡಿ, ಶಿವಾನಂದ ಬನ್ನಿಮಟ್ಟಿ, ಮುತ್ತು ನಿರಲಗಿ, ಬಸವರಾಜ ಜಾಲಗಾರ, ಮಂಜುನಾಥ ದೊಡ್ಡಗೌಡರ, ಮಂಜನಗೌಡ ನರಸಮ್ಮನ್ನವರ, ಪರಶುರಾಮ ಚವ್ಹಾಣ ಇದ್ದರು.
ಶಿರಹಟ್ಟಿ ಮತಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಸಾಕ್ಷ$್ಯ ಬಿಡುಗಡೆ ಮಾಡುವ ಕುರಿತು ರವಿಕಾಂತ ಅಂಗಡಿ ಸುದ್ದಿಗೋಷ್ಟಿ ನಡೆಸಿದರು. ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಚಂದ್ರು ಮಾಗಡಿ, ಶಿವಾನಂದ ಬನ್ನಿಮಟ್ಟಿ, ಮುತ್ತು ನಿರಲಗಿ, ಬಸವರಾಜ ಜಾಲಗಾರ, ಮಂಜುನಾಥ ದೊಡ್ಡಗೌಡರ, ಮಂಜನಗೌಡ ನರಸಮ್ಮನ್ನವರ, ಪರಶುರಾಮ ಚವ್ಹಾಣ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಅವರಿಗೆ ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ ಮತ್ತು ಹೊನ್ನಪ್ಪ ವಡ್ಡರ ಅವರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾ ಕಾರ್ಯದಶಿರ್ ಕ್ಕಿರೇಶ ರಟ್ಟಿಹಳ್ಳಿ ಮತ್ತು ಜಾನು ಲಮಾಣಿ ಅವರ ಆರೋಪಗಳು ಆಧಾರ ರಹಿತವಾಗಿವೆ. ಶಿರಹಟ್ಟಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಕುರಿತು ಆಡಿಯೋಗಳು, ಪೋಟೋಗಳು ನಮ್ಮ ಬಳಿ ಇವೆ. ಪಕ್ಷದ ಮುಖಂಡರಿಗೆ ಈ ಬಗ್ಗೆ ದೂರು ನೀಡಲಾಗುವುದು. ಕ್ಕಿರೇಶ ರಟ್ಟಿಹಳ್ಳಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ರವಿಕಾಂತ ಅಂಗಡಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ದುರದ್ದೇಶದಿಂದ ಸುದ್ದಿಗೋಷ್ಟಿ ನಡೆಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಇದ್ದು, ಪಕ್ಷದ ಅನುಮತಿ ಪಡೆಯದೇ ಬಿಜೆಪಿ ಮುಖಂಡರ ಮೇಲೆಯೇ ಆರೋಪಗಳನ್ನು ಮಾಡಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗೌರವ ಇಲ್ಲದಂತಾಗಿದೆ. ಬಿಜೆಪಿ ಮುಖಂಡರು ಇದೆನ್ನೆಲ್ಲ ಗಮನಿಸುತ್ತಿದ್ದಾರೆ. ಪಕ್ಷವು ಇಂತವರ ಮೇಲೆ ಕ್ರಮ ಕೈಗೊಂಡು ಉಚ್ಚಾಟಿಸಬೇಕು ಎಂದರು.
ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ಪಕ್ಷ ವಿರೋಧಿ ಚಟುವಟಿಕೆ ಮಾಡಿದರ ಕುರಿತು ಸಾಕ್ಷ$್ಯಗಳು ನಮ್ಮ ಬಳಿ ಇವೆ. ಎಲ್ಲವನ್ನು ದಾಖಲೆ ಸಮೇತ ಬಿಡುಗಡೆ ಮಾಡಲಾಗುವುದು. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಗರ್​ ಹೂಕುಂ ಸಾಗುವಳಿ, ಅರಣ್ಯ ಇಲಾಖೆ, ಮತಾಂತರ ವಿರುದ್ಧ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದೇವೆ. ಈ ಕೆಲಸಗಳು ಶಾಸಕರಿಗೆ ಮತ್ತು ಅವರ ಬೆಂಬಲಿಗರಿಗೆ ನಂಬಲಾರದ ತುತ್ತಾಗಿದೆ. ಹಾಗಾಗಿ ನಮ್ಮ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದರಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಪ್ಪ ವಡ್ಡರ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆದರೂ ಪರ್ಸಂಟೇಜ್​ ಕಿರುಕುಳದಿಂದ ಯಾವುದೇ ಗುತ್ತಿಗೆದಾರ ಟೆಂಡರ್​ ಪಡೆಯುತ್ತಿಲ್ಲ. ನಮ್ಮ ಮೇಲೂ ಇಲ್ಲ ಕಿರುಕುಳದ ಆರೋಪಗಳನ್ನು ಹೊರಸಿದ್ದಾರೆ. ನಮ್ಮ ಮೇಲಿನ ಆರೋಪಗಳನ್ನು ಸಾಭಿತು ಪಡುಸದಿದ್ದರೆ ಮಾನನಷ್ಟ ಮೊಕದಮ್ಮೆ ಹಾಕಲಾಗುವುದು ಎಂದು ಹೇಳಿದರು.
ನಮ್ಮ ಮೇಲಿನ ಆರೋಪಗಳನ್ನು ಅವರು ಸಾಭಿತು ಪಡಿಸಬೇಕು. ಇಲ್ಲವಾದರೆ ಅವರ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಕ್ಷೇತ್ರದಲ್ಲಿ ಅನವಶ್ಯಕ ಲಿಂಗಾಯತ ಜನರ ಮೇಲೆಜಾತಿ ನಿಂಧನೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮಂಜುನಾಥ ಮಾಗಡಿ ಮಾತನಾಡಿದರು. ಚಂದ್ರು ಮಾಗಡಿ, ಶಿವಾನಂದ ಬನ್ನಿಮಟ್ಟಿ, ಮುತ್ತು ನಿರಲಗಿ, ಬಸವರಾಜ ಜಾಲಗಾರ, ಮಂಜುನಾಥ ದೊಡ್ಡಗೌಡರ, ಮಂಜನಗೌಡ ನರಸಮ್ಮನ್ನವರ, ಪರಶುರಾಮ ಚವ್ಹಾಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net