ಗದಗ ಮಾಂಗಲ್ಯ ಮಂದಿರದ ಶಿವರಂಭಾಪುರೀಶ್ವರ ಸಭಾಂಗಣ ಲೋಕಾರ್ಪಣೆ

 ಗದಗ ನಗರ ಮಾಂಗಲ್ಯ ಮಂದಿರ ಆವರಣದಲ್ಲಿ ನೂತನವಾಗಿ ನಿಮಿರ್ಸಿದ  ಶಿವರಂಭಾಪುರೀಶ್ವರ ಸಭಾಂಗಣವನ್ನು ರಮಭಾಪುರಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ಶಿವ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮಿಗಳು, ಜಿ. ಎಸ್​. ಗಡ್ಡದೇವರಮಠ, ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ದುಂಡಪ್ಪ ಮಲ್ಲಾಡದ, ಬಸವಣ್ಣೆಪ್ಪ ಪುರದ, ಚಂದ್ರು ಬಾಳಿಹಳ್ಳಿಮಠ, ರಾಜಣ್ಣ ಮಲ್ಲಾಡದ, ಮಂಜುನಾಥ ಬೇಲೇರಿ ಹಲವರು ಇದ್ದರು.
ಗದಗ ನಗರ ಮಾಂಗಲ್ಯ ಮಂದಿರ ಆವರಣದಲ್ಲಿ ನೂತನವಾಗಿ ನಿಮಿರ್ಸಿದ ಶಿವರಂಭಾಪುರೀಶ್ವರ ಸಭಾಂಗಣವನ್ನು ರಮಭಾಪುರಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ಶಿವ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮಿಗಳು, ಜಿ. ಎಸ್​. ಗಡ್ಡದೇವರಮಠ, ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ದುಂಡಪ್ಪ ಮಲ್ಲಾಡದ, ಬಸವಣ್ಣೆಪ್ಪ ಪುರದ, ಚಂದ್ರು ಬಾಳಿಹಳ್ಳಿಮಠ, ರಾಜಣ್ಣ ಮಲ್ಲಾಡದ, ಮಂಜುನಾಥ ಬೇಲೇರಿ ಹಲವರು ಇದ್ದರು.
Published on
ವೀರಶೈವ ಲಿಂಗಾಯತರ ಶಕ್ತಿ ಬಹಳ ದೊಡ್ಡದು: ರಂಭಾಪುರಿ ಶ್ರೀಗಳು
ವಿಜಯವಾಣಿ ಸುದ್ದಿಜಾಲ ಗದಗ
ವೀರಶೈವ ಲಿಂಗಾಯತ ಸಮಾಜದಲ್ಲಿ ಸಂಟನೆಗಳು ಪರಸ್ಪರ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಸಮಾಜದ ಶಕ್ತಿ, ಧರ್ಮ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದ ಆವರಣದಲ್ಲಿ ನೂತನವಾಗಿ ನಿಮಿರ್ಸಿದ ಶಿವ ರಂಭಾಪುರೀಶ್ವರ ಸಭಾಂಗಣ ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀಗಳು, ವೀರಶೈವ ಲಿಂಗಾಯತ ಸಮಾಜದ ಶಕ್ತಿ ಅಪಾರವಾಗಿದೆ. ಸಮಾಜದಲ್ಲಿರುವ ವಿವಿಧ ಸಂಟನೆಗಳು ಪರಸ್ಪರ ಸಹಕಾರ, ಸೌಹಾರ್ದತೆ ಮತ್ತು ಸಮನ್ವಯದಿಂದ ಒಂದಾಗಿ ಕಾರ್ಯ ನಿರ್ವಹಿಸಿದರೆ ಸಮಾಜದ ಅಭ್ಯುದಯಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ಹೇಳಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಧ್ಯೇಯದೊಂದಿಗೆ ನಿಮಿರ್ಸಿದ ಸಭಾಂಗಣವು ಧಾಮಿರ್ಕ, ಸಾಂಸತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆ ಆಗಲಿದೆ. ಸಮಾಜದಲ್ಲಿ ಸದ್ಭಾವನೆ ಮತ್ತು ಏಕತೆಯನ್ನು ಬೆಳೆಸುವ ಕೇಂದ್ರ ಆಗಲಿ. 1975&76ರಲ್ಲಿ ತ್ರಿಕಾಲ ವಂದನೀಯರಾದ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಮಾಜಿ ಸಚಿವ ಕೆ.ಎಚ್​. ಪಾಟೀಲರ ಸಹಕಾರದಿಂದ ಈ ಜಾಗ ಮಂಜೂರಾಗಿತ್ತು. ಮಾಂಗಲ್ಯ ಮಂದಿರಕ್ಕೆ ಅಡಿಗಲ್ಲು ಹಾಕಲಾಗಿತ್ತು. ನಂತರ ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದರೂ, 1992ರಲ್ಲಿ ಪೀಠಾರೋಹಣದ ಬಳಿಕ ಭಕ್ತರ ಸಹಕಾರದಿಂದ ಕಾಮಗಾರಿ ಪುನರಾರಂಭಗೊಂಡಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಳ್ಳದ ಪಂಚಗ್ರಹ ಮಠದ ಶಿವ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ನರಸಾಪೂರ ಪೂಜ್ಯ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಾಜಿ ಶಾಸಕ ಜಿ.ಎಸ್​.ಗಡ್ಡದೇವರಮಠ, ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ಕಾರ್ಯಾಧ್ಯ ದುಂಡಪ್ಪ ಮಲ್ಲಾಡದ, ಉಪಾಧ್ಯ ಬಸವಣ್ಣೆಪ್ಪ ಪುರದ, ಕಾರ್ಯದಶಿರ್ ಚಂದ್ರು ಬಾಳಿಹಳ್ಳಿಮಠ, ಕೋಶಾಧಿಕಾರಿ ರಾಜಣ್ಣ ಮಲ್ಲಾಡದ, ಜಗದ್ಗುರು ಪಂಚಾಚಾರ್ಯ ಸೇವಾ ಸಂದ ಅಧ್ಯ ಮಂಜುನಾಥ ಬೇಲೇರಿ, ಪಂಚಾಚಾರ್ಯ ಮಾಂಗಲ್ಯ ಮಂದಿರದ ಟ್ರಸ್ಟ್​ನ ಧರ್ಮದಶಿರ್ ಮಂಜುನಾಥ ಅಬ್ಬಿಗೇರಿ, ಡಾ. ಶ್ರೀಶೈಲಪ್ಪ ಮಲ್ಲಾಡದ, ಸುರೇಶ ಅಬ್ಬಿಗೇರಿ, ಅಮರನಾಥ ಮಲ್ಲಾಡದ, ಪ್ರಸನ್ನರೇಣುಕಸ್ವಾಮಿ ಶಾಬಾದಿಮಠ, ವಿಜಯಕುಮಾರ ಗಡ್ಡಿ, ಶಂಕ್ರಪ್ಪ ಗಡಾದ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net