ಹುಟ್ಟು ಮೃತ್ಯುವಿನ ಮಧ್ಯದ ಬದುಕು ಸಾರ್ಥಕಗೊಳ್ಳಿ: ರಂಭಾಪುರಿ ಜಗದ್ಗುರುಗಳು.

ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಉಭಯ ಶ್ರೀಗಳ ಜಾತ್ರಾಮೋತ್ಸವ ಕಾರ್ಯಕ್ರಮವನ್ನು ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉದ್ಘಾಟಿಸಿದರು. ರಂಭಾಪುರಿ ಜಗದ್ಗುರುಗಳು, ಎಸ್​.ವಿ. ಸಂಕನೂರು ಸೇರಿದಂತೆ ಇತರರು ಇದ್ದರು.
ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಉಭಯ ಶ್ರೀಗಳ ಜಾತ್ರಾಮೋತ್ಸವ ಕಾರ್ಯಕ್ರಮವನ್ನು ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉದ್ಘಾಟಿಸಿದರು. ರಂಭಾಪುರಿ ಜಗದ್ಗುರುಗಳು, ಎಸ್​.ವಿ. ಸಂಕನೂರು ಸೇರಿದಂತೆ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಬಹು ಜನ್ಮ ಜನ್ಮಗಳ ಪುಣ್ಯದ ಲವಾಗಿ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವು ಉಳ್ಳ ಮಾನವ ಜೀವನದಲ್ಲಿ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಂಡು ಬಾಳಬೇಕು. ಹುಟ್ಟು ಎಷ್ಟು ಸಹಜವೋ ಮೃತ್ಯು ಅಷ್ಟೇ ನಿಶ್ಚಿತ. ಹುಟ್ಟು ಮತ್ತು ಮೃತ್ಯುವಿನ ಮಧ್ಯ ಇರುವ ಬದುಕನ್ನು ಸಾರ್ಥಕ ಗೊಳಿಸಬೇಕಾಗಿದ್ದು ಅವರವರ ಜವಾಬ್ದಾರಿ ಆಗಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಹಾ ಪೀಠದ ಶ್ರೀಮದ್​ ರಂಭಾಪುರಿ ಜ. ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಉಭಯ ಶ್ರೀಗಳಾದ ಪಂಚಾರ ಗವಾಯಿಗಳವರ 82ನೇ ವರ್ಷದ ಪುಣ್ಯ ಸ್ಮರಣೆ ಮತ್ತು ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರ 16ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾನವ ಜೀವನ ಒಂದು ತೆರೆದಿಟ್ಟ ಪುಸ್ತಕ. ಆ ಪುಸ್ತಕದ ಮೊದಲನೆಯ ಪುಟವನ್ನು ಮತ್ತು ಕೊನೆಯ ಪುಟವನ್ನು ಭಗವಂತನೇ ಬರೆದು ಕಳಿಸಿದ್ದಾನೆ. ಮೊದಲನೇ ಪುಟದಲ್ಲಿ ಹುಟ್ಟು ಬರೆದರೆ ಕೊನೆಯ ಪುಟದಲ್ಲಿ ಮೃತ್ಯು ಬರೆದಿಟ್ಟಿದ್ದಾನೆ. ಹುಟ್ಟುವಾಗ ಉಸಿರು ಇರುತ್ತದೆ. ಆದರೆ ಹೆಸರು ಇರುವುದಿಲ್ಲ. ಮನುಷ್ಯ ಅಗಲಿದಾಗ ಉಸಿರು ಇರುವುದಿಲ್ಲ. ಆದರೆ ಹೆಸರು ಉಳಿಯುವ ರೀತಿ ಬಾಳಿ ಬದುಕಿದವರು ವೀರೇಶ್ವರ ಪುಣ್ಯಾಶ್ರಮದ ಪುಣ್ಯಾತ್ಮರು. ಲಿಂ. ಹಾನಗಲ್​ ಶ್ರೀಕುಮಾರ ಶಿವಯೋಗಿಗಳವರ ಕಾರುಣ್ಯದಿಂದ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿತಗೊಂಡಿತು. ಕಣ್ಣಿದ್ದವರೆ ಬಾಳುವುದು ಕಷ್ಟ. ಕಣ್ಣಿಲ್ಲದವರು ಬಾಳುವುದು ಇನ್ನಷ್ಟು ಕಷ್ಟ. ಪಂಚಾರ ಗವಾಯಿಗಳವರು ಅಂಧರ ಬಾಳಿಗೆ ಬೆಳಕು ತೋರಿದವರು. ಕಣ್ಣಿದ್ದವರಂತೆ ಬಾಳಿ ಬದುಕಿ ಸಂಗೀತ ಜ್ಞಾನವನ್ನು ಅನುಗ್ರಹಿಸಿ ಉದ್ಧರಿಸಿದ್ದನ್ನು ಮರೆಯಲಾಗದು. ಅದೇ ಹೆದ್ದಾರಿಯಲ್ಲಿ ಡಾ. ಪುಟ್ಟರಾಜ ಕವಿ ಗವಾಯಿಗಳವರು ಸದಾ ಕ್ರಿಯಾಶೀಲರಾಗಿ ನ ವಿದ್ವಾಂಸರಾಗಿ ಹಲವಾರು ಪುರಾಣ ಪುಣ್ಯ ಕಥೆಗಳನ್ನು ಬರೆದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂದು ಆ ಜವಾಬ್ದಾರಿಯನ್ನು ಕಲ್ಲಯ್ಯಜ್ಜನವರು ವಹಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ. ಆ ಉಭಯ ಮಹಾನುಭಾವರ ಪುಣ್ಯ ಸ್ಮರಣೋತ್ಸವ ಜರುಗುತ್ತಿರುವುದು ಧರ್ಮ ಅಭಿಮಾನಿಗಳಿಗೆ ಸಂತೋಷ ತಂದಿದೆ ಎಂದರು.
ಅಧ್ಯತೆ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ ಗುರು ಕಾರುಣ್ಯವಿಲ್ಲದೆ ಯಾವ ಕಾರ್ಯಗಳು ನಡೆಯುವುದಿಲ್ಲ. ಜ್ಞಾನ ಸೂರ್ಯನಾದ ಗುರುವಿನಿಂದ ಭವ ಬಂಧನ ದೂರವಾಗಿ ಜೀವನ ಉಜ್ವಲಗೊಳ್ಳುತ್ತದೆ. ವೀರೇಶ್ವರ ಪುಣ್ಯಾಶ್ರಮಕ್ಕೂ ಜಗದ್ಗುರು ರಂಭಾಪುರಿ ಪೀಠಕ್ಕೂ ಪೂರ್ವದಿಂದಲು ನಿಕಟವಾದ ಸಂಪರ್ಕ ಇದೆ. ಈ ವರ್ಷ ರಂಭಾಪುರಿ ಜಗದ್ಗುರುಗಳಿಂದ ಕಾರ್ಯಕ್ರಮ ಪ್ರಾರಂಭ ಗೊಳ್ಳುತ್ತಿರುವುದು ಆಶ್ರಮದ ಎಲ್ಲ ಬಳಗಕ್ಕೂ ಸಂತೋಷ ಉಂಟು ಮಾಡಿದೆ ಎಂದರು.
ವಿಧಾನ ಪರಿಷತ್​ ಸದಸ್ಯ ಎಸ್​.ವಿ.ಸಂಕನೂರು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮ ಅಂಧ ಅನಾಥ ಮಕ್ಕಳಿಗೆ ಆಸರೆ ಆಗುವುದಲ್ಲದೇ ಸಂಗೀತ ಶಿಣದ ಮೂಲಕ ಅವರೆಲ್ಲರ ಬಾಳಿಗೆ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಪಂ.ಪುಟ್ಟರಾಜ ಗವಾಯಿಗಳವರು ಅಂಧರಾಗಿ, ತ್ರಿಭಾಷಾ ಪಂಡಿತರಾಗಿ 60 ಪುಸ್ತಕಗಳನ್ನು ಬರೆದಿದ್ದಾರೆ. ಸಂಗೀತ, ಸಾಹಿತ್ಯ, ಪುರಾಣ, ನಾಟಕ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ. 16 ವಾದ್ಯಗಳನ್ನು ನುಡಿಸುವ ಸಾಮರ್ಥ್ಯ ಪಂ.ಪುಟ್ಟರಾಜ ಗವಾಯಿಗಳಿಗೆ ಮಾತ್ರ ಸಾದ್ಯ. ಅವರ ಸೇವೆಗೆ ಕೇಂದ್ರ, ಅನ್ಯ ರಾಜ್ಯ ಮತ್ತು ಕರ್ನಾಟಕ ಸರ್ಕಾರಗಳಿಂದ ಪ್ರಶಸ್ತಿಗಳ ಸುರಿಮಳೆ ಆಗಿದೆ. ಅವರ ಸೇವೆಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು, ಮುಂದಿನ ದಿನಗಳಲ್ಲಿ ಆ ಕಾರ್ಯ ಆಗುತ್ತದೆ ಎಂದು ಭರವಸೆ ಇದೆ.
ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು, ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಮೈನಹಳ್ಳಿ ಸಿದ್ದೇಶ್ವರ ಶಿವಾಚಾರ್ಯರು, ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯರು, ಅಡ್ನೂರ ರಾಜೂರ ಅಭಿನವ ಪಂಚಾರ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ನೆಗಳೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಶ್ರಮದ ನೂತನ ವೆಬ್​ಸೈಟ್​ ಹಾಗೂ ಲೋಗೋ ಲೊಕಾರ್ಪಣೆ ಹಾಗೂ ಕಿರು ಹೊತ್ತಿಗೆ ಮಾಡಲಾಯಿತು. ವೀರೇಶ್ವರ ಪುಣ್ಯಾಶ್ರಮ ಟ್ರಸ್ಟ್​ ಅಧ್ಯ ನಿಂಗಪ್ಪ ಕೆಂಗಾರ, ಡಾ.ಪಂ. ರಾಜಗುರು ಗುರುಸ್ವಾಮಿ ಕಲಕೇರಿ, ಚಂದ್ರು ಬಾಳಿಹಳ್ಳಿಮಠ, ವೀರೇಶ ಕೂಗು, ಬಳೂಟಗಿ ಸಿದ್ಧೇಶ್ವರ ಶಾಸ್ತ್ರಿಗಳು, ಪೀರಸಾಬ ಕೌತಾಳ ಇತರರು ಇದ್ದರು.
ಕೋಟ್​:
ಅಯೋಧ್ಯಯ ರಾಮ ಮಂದಿರದಲ್ಲಿ ದೇಣಿಗೆ ಹಣ ರ್ದುಬಳಕೆ ಅಗುತ್ತಿರುವದು ಹಿಂದೂ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಯಾವುದೇ ದೇವಸ್ಥಾನ, ಧಾಮಿರ್ಕ ಕೇಂದ್ರಗಳಲ್ಲಿ ಇಂತಹ ಕಹಿ ಟನೆಗಳು ನಡೆಯಬಾರದು. ಜಾತ್ರೆಗಳನ್ನು ಮಾಡುವದರಿಂದ ಜಾತ್ಯಾತಿತ ಮನೋಭಾವನೆ ಬೆಳೆಯುತ್ತದೆ.
ಎಸ್​.ವಿ. ಸಂಕನೂರು, ವಿಧಾನ ಪರಿಷತ್​ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net