ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯೋತ್ಸವ ಸಂಭ್ರಮ

Gadag
Gadag
Published on
ವಿಜಯವಾಣಿ ಸುದ್ದಿಜಾಲ ಗದಗ
ಅವಳಿ ನಗರ ಸೇರಿದಂತೆ ಜಿಲ್ಲಯ ವಿವಿಧೆಡೆ ಮಂಗಳವಾರ ಪಂ.ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯೋತ್ಸವ ಆಚರಿಸಲಾಯಿತು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮ ಬೆಳ್ಳಗೆಯಿಂದ ಜರುಗಿದವು. ಎಲ್ಲೆಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಆರಾಧಿಸಲಾಯಿತು.
ಬೆಳಗ್ಗೆಯಿಂದ ಪುಣ್ಯಾಶ್ರಮದಲ್ಲಿರುವ ಹಾನಗಲ್​ ಕುಮಾರಸ್ವಾಮಿ ಗದ್ದುಗೆ, ಪಂ.ಪಂಚಾಕ್ಷರಿ ಗವಾಯಿಗಳು ಹಾಗೂ ಪಂ.ಪುಟ್ಟರಾಜ ಗವಾಯಿಗಳ ಕೃರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಜಿಲ್ಲೆಯ ನಾನಾ ಭಾಗದಿಂದ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಮೂವರು ಶ್ರೀಗಳು ಗದ್ದುಗೆ ದರ್ಶನ ಪಡೆದರು.
ಸುಮಂಗಲೆಯರ ರ್ಪೂಣಕುಂಭ:
ಅಂಧರ ಬೆಳಕಿನ ಆಶಾಕಿರಣ, ಅನಾಥರಿಗೆ ದಾರಿ ದೀಪ ಗಾನಗಂಧರ್ವ ಲಿಂ. ಪಂ.ಪುಟ್ಟರಾಜ ಕವಿ ಗವಾಯಿಗಳ 112 ನೇ ಜಯಂತೋತ್ಸವ ಅಂಗವಾಗಿ 112 ರ್ಪೂಣ ಕುಂಭದೊಂದಿಗೆ ಪಂ.ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್​ ಕುಂಭ ಮೇಳ ಮೆರವಣಿಗೆ ಭೂಮರೆಡ್ಡಿ ವೃತ್ತ, ಕೆ. ಎಚ್​. ಪಾಟೀಲ್​ ವೃತ್ತ, ಹತ್ತಿಕಾಳ ಕೂಟ, ಟಾಂಗಾಕೂಟ, ಗಾಂಧಿ ಸರ್ಕಲ್​, ಕೆ.ಸಿ.ರಾಣಿ ರಸ್ತೆ ಮಾರ್ಗವಾಗಿ ಪುನಃ ಪುಣ್ಯಾಶ್ರಮ ತಲುಪಿತು. ಸಾವಿರಾರು ಮಹಿಳೆಯರು ಹಾಗೂ ವಿದ್ಯಾಥಿರ್ಗಳು ನಗರದ ಪ್ರಮುಖ ಮಾರ್ಗಗಳಲ್ಲಿ ವಾದ್ಯಮೇಳ, ರ್ಪೂಣಕುಂಭದೊಂದಿಗೆ ಗವಾಯಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಸಾವಿರಾರು ಸುಮಂಗಲೆಯರು ರ್ಪೂಣಕುಂಭ ಕಳಶ ಹೊತ್ತು ಪಾಲ್ಗೊಂಡು, ಮೆರುಗು ನೀಡಿದರು.
ಎಲ್ಲೆಲ್ಲೂ ಪುಟ್ಟರಾಜರ ಸ್ಮರಣೆ:
ನಗರದ ಭೂಮ್ಮರಡ್ಡಿ ಸರ್ಕಲ್​ನಲ್ಲಿರುವ ಪುಟ್ಟರಾಜರ ಮೂತಿರ್ಗೆ ಭಕ್ತರು ಪೂಜೆ ಸಲ್ಲಿಸಿದರು. ಇನ್ನೂ ನಗರದ ಮಾರ್ಗಗಳಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಅವರನ್ನು ಸ್ಮರಿಸುವ ಜತೆಗೆ ಎಲ್ಲೆಡೆಯೂ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿತ್ತು. ದಾರಿಹೋಕರಿಗೆ ಪ್ರಸಾದದೊಂದಿಗೆ ತಂಪು ಪಾನೀಯ ವಿತರಿಸಲಾಯಿತು.
ಮೂವರು ಶ್ರೀಗಳ ಗದ್ದುಗೆ ವಿಶೇಷ ಪೂಜೆ:
ಡಾ.ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಪದ್ಮಭೂಷಣ ಲಿ.ಡಾ.ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತ್ಯೋತ್ಸವದ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿರುವ ಮೂವರು ಶ್ರೀಗಳ ಗದ್ದುಗೆಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೂ ನೂರಾರು ಭಕ್ತರು ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಗಳ ದರ್ಶನಾಶೀರ್ವಾದ ಪಡೆದರು. ಜತೆಗೆ ಹಲವಾರು ಅಂಧ ಅನಾಥ ಮಕ್ಕಳು ಸಹ ಜಯಂತ್ಯೋತ್ಸವ ಅಂಗವಾಗಿ ಮಠಕ್ಕೆ ಆಗಮಿಸಿ ಆಶಿರ್ವಾದ ಪಡೆದವರು.
22 ಜೋಡಿ ಸಾಮೂಹಿಕ ವಿವಾಹ:
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿ.ಡಾ.ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತ್ಯೋತ್ಸವದ ಅಂಗವಾಗಿ ಸರ್ವಧರ್ಮ 22 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು.
ಭಕ್ತರಿಗೆ ಅನ್ನ ಪ್ರಸಾದ:
ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರಿಗೆ ಹಾಗೂ 22 ಜೋಡಿ ಮದುವೆಗೆ ಬಂದಿರುವ ಭಕ್ತರಿಗೆ ಎಪಿಎಂಸಿ ಆವಣರದಲ್ಲಿರುವ ಕೆ.ಎಚ್​.ಪಾಟೀಲ ಸಭಾಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಭಕ್ತರು ಪ್ರಸಾದ ಸವಿದರು.
ಟ್ರಾಫಿಕ್​ ಜಾಮ್​
ನಗರದ ಹೃದಯ ಭಾಗದಲ್ಲಿರುವ ವೀರೇಶ್ವರ ಪುಣ್ಯಾಶ್ರಮ ಆವರಣ ಹಾಗೂ ಎಪಿಎಂಸಿ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಬಂದಿರುವ ಹಿನ್ನಲೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಬೈಕ್​, ಕಾರ್​, ಟ್ರಾಕ್ಟರ್​ ಸೇರಿದಂತೆ ವಿವಿಧ ವಾಹನಗಳಿಂದ ಸಾಯಂಕಾಲ ವರಿಗೆ ಟ್ರಾಫಿಕ್​ ಕಿರಿಕಿರಿ ಉಂಟಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net