ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಠಕ್ಕೆ ದೇಣಿಯಾಗಿ ಬರುವ ವಸ್ತುಗಳನ್ನು, ಮಠದ ಆಸ್ತಿಯನ್ನು ಕಾಪಾಡಿಕೊಂಡು ಬರುತ್ತಿದ್ದೇವೆ. ಆದರೆ ಮಠದ ಟ್ರಸ್ಟನಲ್ಲಿ ಇರುವ ಕೆಲವರು ಮಠದ ಆಸ್ತಿ ಕಬಳಿಸಲು ವಿವಿಧ ರೀತಿಯಿಂದ ಹುನ್ನಾರ ನಡೆಸುತ್ತಿದ್ದಾರೆ. ಕೆಲ ಸಮಿತಿ ಸದಸ್ಯರು ನನ್ನಿಂದ ಸಾಲ ಕೇಳಿದ್ದರು. ಆದರೆ, ಮಠಕ್ಕೆ ಬರುವ ದೇಣಿಗೆಯನ್ನು ಸಾಲ ನೀಡಲು ಸಾಧ್ಯವಿಲ್ಲ. ಸಾಲ ನೀಡುವುದಕ್ಕೆ ಮತ್ತು ನಾನಾ ಕಾರಣಗಳಿಂದ ವೈಮನಸ್ಸು ಮೂಡಿದೆ. ಜತೆಗೆ ಶಿಕ್ಷಣ ಸಮಿತಿಯಲ್ಲೂ ಅನಗತ್ಯ ಅನುಮಾನಗಳು ತೊಂದರೆಗಳನ್ನು ಕೆಲವರು ಉಂಟು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಬಹಳ ದಿನಗಳಿಂದ ಬೆದರಿಕೆ ಒಡ್ಡುತ್ತಿದ್ದು, ಮಠದ ಗೌರವದಿಂದ ಸುಮ್ಮನಿದ್ದೆ. ಆದರೆ, ನಿರಂತರ ಬೆದರಿಕೆ ಬರುತ್ತಿದ್ದು, ನನಗೆ ಪ್ರಾಣಭಯ ಇದೆ. ಪ್ರಮುಖವಾಗಿ ಸಮಿತಿಯ ಪ್ರಕಾಶ ಬಸರಿಗಿಡದ, ಎಸ್.ಎಂ. ಗೌಡ್ರ, ಮಲ್ಲಯ್ಯ ಶಿರೋಳಮಠ, ಇಟಗಿ ಶಿವರುದ್ರಪ್ಪ, ವಸಂತಗೌಡ ಪಾಟೀಲ ಹಾಗೂ ಚಕ್ರಣ್ಣವರ ಅವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಮತ್ತು ಇಲಾಖೆ ಇಂತವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಲ್ಲಯ್ಯಜ್ಜನವರು ಹೇಳಿದರು.