

ಗದಗ : ಭಾರತವು ಪೋಲೀಯೊ ಮುಕ್ತ ದೇಶವಾಗಿದೆ ಆದರೆ, ನೇರೆಯ ದೇಶಗಳಲ್ಲಿ ಪೋಲಿಯೋ ಇನ್ನೂ ಜೀವಂತ ಇರುವದರಿಂದ ನಮ್ಮ ದೇಶದಲ್ಲಿಯು ಮತ್ತೆ ಮರುಕಳಿಸುವ ಸಾಧ್ಯತೆ ಇರುವುದರಿಂದ ನಮ್ಮ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ನಮ್ಮ ದೇಶದ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.
ರವಿವಾರ ಜಿಲ್ಲಾ ಆಢಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಡರಿ ಕ್ಲಭ್ ಸಂಯುಕ್ತ ಆಶ್ರಯದಲ್ಲಿ ದುಂಡಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಜರುಗಿದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೋಲಿಯೋ ವಿರುದ್ದ ಭಾರತ ದೇಶವು ಸಾಧಿಸಿರುವ ಗೆಲುವನ್ನು ನಾವೆಲ್ಲರೂ ಮುಂದುವರಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿ, ಮಕ್ಕಳಿಗೆ ಎರಡು ಪೋಲಿಯೋ ಹನಿ ಹಾಕಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೆಶಕಿ ಹಾಗೂ ರಾಜ್ಯ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ.ನಂದಿನಿ ಬಿ. ಮಾತನಾಡಿ ರಾಷ್ಟಿçÃಯ ಪಲ್ಲ್ ಪೋಲಿಯೊ ಕಾರ್ಯಕ್ರಮವು ದೇಶಾದ್ಯಂತ ಮತ್ತು ರಾಜ್ಯಾದಂತ ಎರಡು ಹನಿಗಳು ಮೋಲೀಯೋ ವಿರುದ್ದ ನಿರಂತರ ಗೆಲುವು ಸಾಧಿಸಲು ೦ ಯಿಂದ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹಾಕಲಾಗುತ್ತಿದ್ದು, ಶಾಶ್ವತ ಅಂಗವಿಕಲತೆ ತರಬಲ್ಲ ಪೋಲಿಯೋವನ್ನು ಲಸಿಕೆಯ ಮೂಲಕ ಪ್ರತಿರೊದಿಸೋಣ ಎಂದು ತಿಳಿಸಿದರು. ಹೆಚ್ಚನ ಮಾಹಿತಿಗಾಗಿ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಕಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಎಸ್ ಎಸ್ ನೀಲಗುಂದ ಮಾತನಾಡಿ ಪಲ್ಸ್ ಪೋಲಿಯೊ ಕಾರ್ಯಕ್ರಮದಡಿಯಲ್ಲಿ ನಮ್ಮ ಜಿಲ್ಲೆಯ ಎಲ್ಲಾ ತಾಯಂದಿರು ಐದು ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಬಂದು ತಪ್ಪದೆ ಪೋಲೀಯೊ ಹನಿ ಹಾಕಿಸಿಕೊಳ್ಳಲು ವಿನಂತಿಸಿಕೊAಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ.ಮೀನಾಕ್ಷಿ ಕೆ.ಎಸ್, ಡಾ. ಬಿ ಸಿ ಕರಿಗೌಡ್ರ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಜೇಂದ್ರ, ಜಿಲ್ಲಾ ಐ.ಎಮ್.ಎ ಅಧ್ಯಕ್ಷ ಡಾ.ಶ್ರೀಧರ ಕುರಡಗಿ, ಡಾ. ಅರುಂಧತಿ ಜಿಲ್ಲಾ ಕ್ಷಯರೋಗ ನಿವಾರಣಾ ಅಧಿಕಾರಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ, ಡಾ ಶೇಖರ ಸಜ್ಜನ, ರುಪಶೇನ ಸಿ ಚವ್ಹಾಣ, ಸುರೇಶ ಕುಂಬಾರ, ರಾಜೇಂದ್ರ ಗಡಾದ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.