ಗದಗ ತಾಲೂಕಿನಲ್ಲಿ 4 ಬಾಲಕಿಯರ ಮತ್ತು 3 ಬಾಲಕರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿವೆ. ಬಾಲಕರ ವಸತಿ ನಿಲಯ ವಿದ್ಯಾಥಿಗಳು ಒಟ್ಟು ಶೇ. 87 ಹಾಗೂ ಬಾಲಕಿಯತ ವಸತಿ ನಿಲಯದ ವಿದ್ಯಾಥಿರ್ಗಳು ಶೇ. 92 ರಷ್ಟು ಸಾಧನೆ ಮಾಡಿದ್ದಾರೆ. 2025&26ನೇ ಸಾಲಿನ ಲಿತಾಂಶದಲ್ಲಿ ತಾಲೂಕಿನ 7 ಬಿಸಿಎಂ ವಿದ್ಯಾಥಿರ್ ನಿಲಯದ ವಿದ್ಯಾಥಿರ್ಗಳ ಒಟ್ಟು ಲಿತಾಂಶ ಶೇ. 91 ರಷ್ಟು ಆಗಿದ್ದು, ಪಿಯು ವಿಭಾಗದ ಪ್ರಶಂಸೆಗೆ ಪಾತ್ರವಾಗಿದೆ. ಮನೆಯಲ್ಲಿ ಎಲ್ಲ ಅನುಕೂಲತೆಗಳಿದ್ದರೂ ಟಿವಿ, ಮೊಬೈಲ್ ಕಾರಣದಿಂದ ಮಕ್ಕಳು ಕಡಿಮೆ ಅಂಕಗಳಿಸುತ್ತಿದ್ದಾರೆ. ಆದರೆ, ಹಾಸ್ಟೆಲ್ ನಲ್ಲಿ ಓದುವುದಕ್ಕೆ ಹೆಚ್ಚಿನ ಸಮಯ ಸಿಗುವುದರಿಂದ ಹೆಚ್ಚಿನ ಅಂಕ ಗಳಿಸಲು ಸಾಧ್ಯ. ಹಾಸ್ಟೆಲ್ ವಿದ್ಯಾಥಿರ್ಗಳಿಗೆ ಮೊಬೈಲ್, ಟಿವಿ ಮುಂತಾದ ವ್ಯತ್ಯಯಗಳು ಕಡಿಮೆ ಇರುತ್ತವೆ. ಇದರಿಂದ ಅವರ ಗಮನ ಓದಿನ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.