ದಲಿತ ಮಹಿಳಾ ಕಾಮಿರ್ಕರಿಗೆ ಕನಿಷ್ಠ ವೇತನಕ್ಕೆ ಆಗ್ರಹಿಸಿ ಅನಿಧಿರ್ಷ್ಠಾವಧಿ ಧರಣಿ

 ನಗರಸಭೆ ಮಹಿಳಾ ಕಾಮಿರ್ಕರಿಗೆ ಕನಿಷ್ಠವೇತನ ಮತ್ತು ನೇರನೇಮಾಕತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೃಷ್ಣ ಪರಾಪೂರೆ ಮಾತನಾಡಿದರು. ವಾಸು ಹುನಗುಂದ, ಗೋವಿಂದ ಬಳ್ಳಾರಿ ಹಲವರು ಇದ್ದರು.
ನಗರಸಭೆ ಮಹಿಳಾ ಕಾಮಿರ್ಕರಿಗೆ ಕನಿಷ್ಠವೇತನ ಮತ್ತು ನೇರನೇಮಾಕತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೃಷ್ಣ ಪರಾಪೂರೆ ಮಾತನಾಡಿದರು. ವಾಸು ಹುನಗುಂದ, ಗೋವಿಂದ ಬಳ್ಳಾರಿ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆಯಲ್ಲಿ ಮನೆ, ಮನೆ ಕಸ ಸಂಗ್ರಹ ಮಾಡುವ ದಲಿತ ಮಹಿಳಾ ಕಾಮಿರ್ಕರಿಗೆ ಕನಿಷ್ಠ ವೇತನ ಮತ್ತು ನೇರ ನೇಮಕಾತಿ ನೀಡಬೇಕು ಎಂದು ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ಆಗ್ರಹಿಸಿದರು.
ನಗರಸಭೆ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಅನಿಧಿರ್ಷ್ಠಾವಧಿ ಧರಣಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ದಲಿತ ಮಹಿಳಾ ಕಾಮಿರ್ಕರಿಗೆ ವೇತನ ನೀಡುತ್ತಿಲ್ಲ. ಸ್ತ್ರೀಶಕ್ತಿ ಗುಂಪುಗಳು, ಸ್ವಸಹಾಯ ಗುಂಪುಗಳನ್ನು ಬಳಸಿ ನತ್ಯಾಜ್ಯ ವಸ್ತುಗಳ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಲು ಮಾರ್ಗಸೂಚಿ ಇದೆ. ನಗರಸಭೆ ಸ್ಥಳಿಯ ಸಂಸ್ಥೆಯಲ್ಲಿ ನೇಮಕವಾದ 133 ಮಹಿಳಾ ಕಾಮಿರ್ಕರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಪ್ರತಿ ಮನೆಗೆ ರೂ. 15 ನೀಡುವಂತೆ ಸರ್ಕಾರದ ಆದೇಶ ಇದ್ದರೂ ಈ ವರೆಗೂ ಪಾಲನೆ ಆಗುತ್ತಿಲ್ಲ ಎಂದರು.
ಈ ಹಿಂದೆ ನಗರಸಭೆಯಲ್ಲಿ ಠರಾವು ಪಾಸಾಗಿದ್ದು, ಪ್ರತಿಯೊಬ್ಬ ಕಾಮಿರ್ಕರಿಗೆ ಪ್ರತಿ ತಿಂಗಳು ರೂ.6500 ಗೌರವಧನ ನೀಡಬೇಕೆಂದು ಠರಾವು ಮಾಡಲಾಯಿತು. ಆದರೆ, 6500 ರೂ. ನಲ್ಲಿ ಜೀವನ ನಡೆಸಲು ಕಷ್ಟವಾಗಿದೆ. ಹಾಗಾಗಿ ಸಕಾರದ ಆದೇಶದಂತೆ ಹೆಚ್ಚುವರಿ ಪ್ರತಿ ಮನೆ ಕಸ ಸಂಗ್ರಹಕ್ಕೆ 15 ರೂ. ನೀಡಬೇಕು ಎಂದರು.
ಮಹಿಳಾ ಕಾಮಿರ್ಕರು 20 ವರ್ಷಗಳಿಂದ ಮನೆ, ಮನೆ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈಗಲಾದರೂ ಮನವಿಯನ್ನು ಪರಿಗಣಿಸಿ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ನಿಡಬೇಕು ಹಾಗೂ ನೇರನೇಮಕಾತಿ ಮಾಡಿಕೊಳ್ಳವ ಮೂಲಕ ಕಾಮಿರ್ಕರ ಜೀವನಕ್ಕೆ ಸರ್ಕಾರ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಯುವರಾಜ ಬಳ್ಳಾರಿ, ಮಾರುತಿ ಬಳ್ಳಾರಿ, ಪೃಥ್ವಿ ಪರಾಪುರ, ಮುತ್ತು ಗೌಡರ ಸೇರಿದಂತೆ ಮಹಿಳಾ ಕಾಮಿರ್ಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net