ದಂಡಿನ ದುರ್ಗಮ್ಮ ದೇವಸ್ಥಾನ ಸ್ಥಳಾಂತರ ಬೇಡ: ರಾಜು ಖಾನಪ್ಪನ್ನವರ

ನೀರಾವರಿ ಯೋಜನೆಗಾಗಿ ದಂಡಿನ ದುರ್ಗಮ್ಮ ದೇವಸ್ಥಾನ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ಮನವಿ ಸಲ್ಲಿಸಲಾಯಿತು. ರಾಜೂ ಖಾನಪ್ಪನ್ನವರ, ಚಂದ್ರು ಚವ್ಹಾಣ, ಪರಶುರಾಮ ಕಾಳೆ, ದಾವಲ ಪವಾರ ಇತರರು ಇದ್ದರು.
ನೀರಾವರಿ ಯೋಜನೆಗಾಗಿ ದಂಡಿನ ದುರ್ಗಮ್ಮ ದೇವಸ್ಥಾನ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ಮನವಿ ಸಲ್ಲಿಸಲಾಯಿತು. ರಾಜೂ ಖಾನಪ್ಪನ್ನವರ, ಚಂದ್ರು ಚವ್ಹಾಣ, ಪರಶುರಾಮ ಕಾಳೆ, ದಾವಲ ಪವಾರ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಪೈಪ್​ ಲೈನ್​ ಕಾಮಗಾರಿಯಿಂದ ಇತಿಹಾಸ ಪ್ರಸಿದ್ಧ ದಂಡಿನ ದುರ್ಗಮ್ಮ ದೇವಾಲಯಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಶಾಶ್ವತ ರಕ್ಷಣಾ ಕ್ರಮ ಕೈಗೊಂಡು, ದೇವಾಲಯವನ್ನು ಎತ್ತಂಗಡಿ ಮಾಡುವ ಪ್ರಸ್ತಾವವನ್ನು ಕೈಬಿಡಬೇಕು ಎಂದು ರಾಜು ಖಾನ್ನಪ್ಪನ್ನವರ ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಗರದ ಹೊರವಲಯದಲ್ಲಿ ಇರುವ ದಂಡಿನ ದುರ್ಗಮ್ಮ ದೇವಸ್ಥಾನವನ್ನು ಕಾಮಗಾರಿ ನೆಪವೊಡ್ಡಿ ಸ್ಥಳಾಂತರಿಸಲಾಗುತ್ತಿದೆ. ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇತಿಹಾಸ ಪ್ರಸಿದ್ದ ದಂಡಿನ ದುರ್ಗಮ್ಮ ದೇವಾಲಯವು ಸುಮಾರು ಎರಡು ಶತಮಾನಗಳ ಇತಿಹಾಸ ಹೊಂದಿದೆ. ಈ ದೇವಾಲಯವು ಲಕ್ಷಾಂತರ ಭಕ್ತರ ಆರಾಧನಾ ಕೇಂದ್ರವಾಗಿರುವುದರ ಜೊತೆಗೆ, ಹರಣಶಿಕಾರಿ ಸಮುದಾಯದ ಆರಾಧ್ಯ ದೈವವಾಗಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರಸ್ತುತ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ದೇವಾಲಯದ ಕೆಳಭಾಗದಿಂದ ಪೈಪ್​ಲೈನ್​ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರಿಂದ ದೇವಾಲಯದ ಸುರಕ್ಷತೆ ಹಾಗೂ ಅಸ್ತಿತ್ವಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಹಾಗಾಗಿ ಯೋಜನೆ ಕೈಬಿಡಬೇಕು ಅಥವಾ ದೇವಸ್ಥಾನಕ್ಕೆ ತೊಂದರೆ ಆಗದಂತೆ ಯೋಜನೆ ಬದಲಾಯಿಸಬೇಕು ಎಂದರು.
ನಾವು ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುತ್ತಲ್ಲ. ಆದರೆ ಅಭಿವೃದ್ಧಿಯ ಜೊತೆಗೆ ಐತಿಹಾಸಿಕ, ಧಾಮಿರ್ಕ ಹಾಗೂ ಸಾಂಸತಿಕ ಪರಂಪರೆಯನ್ನು ಸಂರಕ್ಷಿಸುವುದು ಸರ್ಕಾರ ಮತ್ತು ಆಡಳಿತದ ಸಂವಿಧಾನಬದ್ಧ ಕರ್ತವ್ಯವಾಗಿದೆ. ಲಕ್ಷಾಂತರ ಭಕ್ತರ ಆರಾಧನಾ ಕೇಂದ್ರವಾಗಿರುವ ಈ ದೇವಾಲಯಕ್ಕೆ ಧಕ್ಕೆಯಾಗುವ ಯಾವುದೇ ಕ್ರಮವು ಭಕ್ತರ ಧಾಮಿರ್ಕ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಚಂದ್ರು ಚವ್ಹಾಣ, ಪರಶುರಾಮ ಕಾಳೆ, ದಾವಲ ಪವಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net