ಸರ್ಕಾರಿ ನೌಕರರ ಸಂ ಜಿಲ್ಲಾ ಟಕದ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಮಣಿಪಾಲ ಆಸ್ಪತ್ರೆ ಹೃದಯ ರೋಗಕ್ಕೆ ವಿಶೇಷ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿ ಆಗಿದೆ. ಇಲ್ಲಿನ ತಜ್ಞ ವೈದ್ಯರು ನಗರಕ್ಕೆ ಆಗಮಿಸಿ ಹೃದಯ ರೋಗದ ಕುರಿತು ಸಂವಾದ ನಡೆಸುತ್ತಿರುವುದು ಸಂತಸದ ವಿಷಯ. ನಿಯಮಿತ ದೈಹಿಕ ವ್ಯಾಯಾಮ, ಸಮತೋಲಿತ ಆಹಾರ, ಧೂಮಪಾನವನ್ನು ತ್ಯಜಿಸುವುದು, ಒತ್ತಡ ನಿರ್ವಹಣೆಗೆ ಯೋಗ ಧ್ಯಾನ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದು ಎಂದರು.