ಶಾಸಕ ಚಂದ್ರು ಲಮಾಣಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಬಂಜಾರ ಸಮುದಾಯಕ್ಕೆ ಒಳಮೀಸಲಾತಿ ವಿಷಯದಲ್ಲಿ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿತ್ತು. ಬಂಜಾರ ಸಮುದಾಯವನ್ನು ಎಸ್ಸಿ ಮೀಸಲಿನಿಂದ ಬಿಜೆಪಿ ಪಕ್ಷ ಹೊರಗಡೆ ಇಡುತ್ತದೆ ಎಂದು ಕಾಂಗ್ರೆಸ್ ಪಕ್ಷ ಸುಳ್ಳನ್ನು ಹೇಳಿ ಅಪಪ್ರಚಾರ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಪಕ್ಷ ಬಾಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಕೊರಚ, ಕೊರಮ, ಬೋವಿ, ಬಂಜಾರ ಸಮುದಾಯಕ್ಕೆ ಶೇ. 4 ಮೀಸಲಾತಿಯನ್ನು ನೀಡಿದೆ. ನಾಗಮೋಹನ್ ದಾಸ ವರದಿಯನ್ನು ನಾವು ವಿರೋಧಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯಲ್ಲಿ ಮತ್ತೊಂದು ಒಳ ಮೀಸಲಾತಿ ಮಾಡಿ ಅನ್ಯಾಯ ಮಾಡಿದೆ. ಶೇ. 5 ಮೀಸಲಾತಿಯಲ್ಲಿ ಶೇ.1 ರಷ್ಟು ಅಲೆಮಾರಿಗೆ ನೀಡಿ, ಇನ್ನೂಳಿದ 63 ಸಮುದಾಯಗಳಿಗೆ ಶೇ. 4 ರಷ್ಟು ಒಳಮೀಸಲಾತಿಯನ್ನು ನೀಡಲಾಯಿತು. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ನಮಗಷ್ಟೇ ಅಲ್ಲದೇ ಇತರೆ ಸಮುದಾಯಗಳಿಗೂ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ತಾಂಡಾ ಬಚಾಮೋ, ಕಾಂಗ್ರೆಸ್ ಹಠಾಮೋ ಆಂದೋಲನ ಮಾಡಲಾಗುವುದು ಎಂದು ಶಾ. ಚಂದ್ರು ಲಮಾಣಿ ಹೇಳಿದರು.