ಡಿ. 14 ರಂದು ಡಿಜಿಎಂ ಆಯುರ್ವೇದ ಕಾಲೇಜಿನಲ್ಲಿ ಸ್ನೇಹ ಸಿಂಚನ ಸಮಾವೇಶ: ಡಾ.ಎಸ್​.ಎನ್​.ಬೆಳವಡಿ

ನಗರದ ಡಿಜಿಎಂ ಆಯುರ್ವೇದ ವೈದ್ಯಕಿಯ ಸಂಸ್ಥೆಯಲ್ಲಿ ಸ್ನೇಹ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಮಿತ್ಯ  ಡಾ.ಎಸ್​.ಎನ್​.ಬೆಳವಡಿ ಸುದ್ದಿಗೋಷ್ಠಿ ನಡೆಸಿದರು. ಡಾ.ಚಂದ್ರಕಾಂತ ಇಟಗಿ, ಡಾ. ಐ. ಎಸ್​. ಸವಿರ್, ಡಾ. ಯು. ವಿ. ಪುರದ, ಡಾ. ಐ. ಬಿ. ಕೋರಿಶೆಟ್ಟರ, ಡಾ. ಎಸ್​. ಡಿ. ಯರಗೇರಿ, ಡಾ. ಕುಮಾರ, ಡಾ.ವೀಣಾ ಕೋರಿ, ಡಾ. ಎಂ. ವಿ. ಸೊಬಗೀನ, ಡಾ. ಬೂದೇಶ ಕಣಾಜ ಇತರರು ಇದ್ದರು.
ನಗರದ ಡಿಜಿಎಂ ಆಯುರ್ವೇದ ವೈದ್ಯಕಿಯ ಸಂಸ್ಥೆಯಲ್ಲಿ ಸ್ನೇಹ ಸಿಂಚನ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಮಿತ್ಯ ಡಾ.ಎಸ್​.ಎನ್​.ಬೆಳವಡಿ ಸುದ್ದಿಗೋಷ್ಠಿ ನಡೆಸಿದರು. ಡಾ.ಚಂದ್ರಕಾಂತ ಇಟಗಿ, ಡಾ. ಐ. ಎಸ್​. ಸವಿರ್, ಡಾ. ಯು. ವಿ. ಪುರದ, ಡಾ. ಐ. ಬಿ. ಕೋರಿಶೆಟ್ಟರ, ಡಾ. ಎಸ್​. ಡಿ. ಯರಗೇರಿ, ಡಾ. ಕುಮಾರ, ಡಾ.ವೀಣಾ ಕೋರಿ, ಡಾ. ಎಂ. ವಿ. ಸೊಬಗೀನ, ಡಾ. ಬೂದೇಶ ಕಣಾಜ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಡಿಜಿಎಂ. ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಹಳೆಯ ವಿದ್ಯಾಥಿರ್ಗಳ ಸಂದ ವತಿಯಿಂದ 21 ನೇ ವರ್ಷದ ಸ್ನೇಹ ಸಿಂಚನ ಸಮಾವೇಶ-ವು ಡಿ.14 ರಂದು ಭಾನುವಾರ ಜಗದ್ಗುರು ಶಿವಾನಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಎಸ್​. ಎನ್​. ಬೆಳವಡಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಶಕಗಳಿಂದಲೂ ಆಯುರ್ವೇದ ವೈದ್ಯಕಿಯ ಸೇವೆ ಸಲ್ಲಿಸುತ್ತ ಸಾವಿರಾರು ವೈದ್ಯರನ್ನು ಸಮಾಜಕ್ಕೆ ನೀಡಿದ ಹೆಮ್ಮೆಯ ಸಂಸ್ಥೆಯ, ದೇಶ, ವಿದೇಶಗಳಲ್ಲಿ ಮಹಾವಿದ್ಯಾಲಯದ ಕೀತಿರ್ಯನ್ನು ಹೆಚ್ಚಿಸಿರುವ ಹಳೆಯ ವಿದ್ಯಾಥಿರ್ಗಳನ್ನು ಒಂದೆಡೆ ಸೇರಿಸಲು ಸಮಾವೇಶವನ್ನು ಹಮ್ಮಿಮಕೊಳ್ಳಲಾಗಿದೆ. ಈ ಬಾರಿಯ ಸಮಾವೇಶಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸತ, ಖ್ಯಾತ ಜಾನಪದ ಕಲಾವಿದ ಗುರುರಾಜ ಹೊಸಕೋಟೆ, ಶಬ್ಬಿರ ಡಾಂಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಜಾನಪದ ಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಲಿದ್ದಾರೆ. ಪಾಂಡಿಚೇರಿಯ ರಾಜೀವ ಗಾಂಧಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕುಬೇರ ಸಂಕ ಮತ್ತು ಗದಗ ಜಿಲ್ಲಾ ಆಯುಷ್​ ಅಧಿಕಾರಿ ಡಾ. ಜೈಪಾಲ ಸಿಂಗ ಸಮೋರೇಕರ್​ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಕಾರ್ಯದಶಿರ್ ಬಿ. ಎಸ್​. ಪಾಟೀಲ ಹಾಗೂ ಡಾ.ಜಿ.ಬಿ.ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಎಸ್​.ಎನ್​.ಬೆಳವಡಿ ಅವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಐ.ಎಸ್​. ಸವಿರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂರ್ಪೂಣ ಪ್ರಾಯೋಜಕತ್ವ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಬಿಎಎಂಎಸ್​ 2000 ನೇ ಬ್ಯಾಚಿನ ವಿದ್ಯಾಥಿರ್ಗಳು ವಹಿಸಿಕೊಂಡಿದ್ದಾರೆ. ಸಮಾವೇಶವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷವಿಡೀ ಅನೇಕ ಶೈಕ್ಷಣಿಕ, ಸಾಮಾಜಿಕ ಹಾಗೂ ಸಮುದಾಯ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಉಚಿತ ಬೃಹತ್​ ಆರೋಗ್ಯ ಶಿಬಿರ ಮತ್ತು ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಸಹ ನಡೆಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಚಂದ್ರಕಾಂತ ಇಟಗಿ, ಡಾ. ಐ. ಎಸ್​. ಸವಿರ್, ಡಾ. ಯು. ವಿ. ಪುರದ, ಡಾ. ಐ. ಬಿ. ಕೋರಿಶೆಟ್ಟರ, ಡಾ. ಎಸ್​. ಡಿ. ಯರಗೇರಿ, ಡಾ. ಕುಮಾರ, ಡಾ.ವೀಣಾ ಕೋರಿ, ಡಾ. ಎಂ. ವಿ. ಸೊಬಗೀನ, ಡಾ. ಬೂದೇಶ ಕಣಾಜ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net