ಕೆ. ಎಚ್​. ಪಾಟೀಲರು ಬದುಕಿದ್ದರೆ ರಾಜಕೀಯ ಜೀವನದ ಉತ್ತುಂಗದಲ್ಲಿ ಇರುತ್ತಿದ್ದೆ: ಪ್ರಭಾಕರ ಕೋರೆ

  ನಗರದ ಕಾಟನ್​ ಸೇಲ್​ ಸೊಸೈಟಿ ಆವರಣದಲ್ಲಿ ಸೋಮವಾರ ಜರುಗಿದ ಕೆ.ಎಚ್​. ಪಾಟೀಲ 101 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಭಾಕರ ಕೋರೆ ಅವರಿಗೆ ಕೆ.ಎಚ್​. ಪಾಟೀಲ ವಾಷಿರ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಕಾಟನ್​ ಸೇಲ್​ ಸೊಸೈಟಿ ಆವರಣದಲ್ಲಿ ಸೋಮವಾರ ಜರುಗಿದ ಕೆ.ಎಚ್​. ಪಾಟೀಲ 101 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಭಾಕರ ಕೋರೆ ಅವರಿಗೆ ಕೆ.ಎಚ್​. ಪಾಟೀಲ ವಾಷಿರ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on
ವಿಜಯವಾಣಿ ಸುದ್ದಿಜಾಲ ಗದಗ
ಹಿರಿಯ ರಾಜಕಾರಣಿ ದಿವಂಗತ ಕೆ. ಎಚ್​. ಪಾಟೀಲ ಬದುಕಿದ್ದರೆ ನಾನು ಇನ್ನೂ ರಾಜಕೀಯ ಜೀವನದ ಉತ್ತುಂಗಕ್ಕೆ ಏರುತ್ತಿದೆ ಎಂದು ಪದ್ಮಶ್ರೀ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.
ನಗರದ ಕಾಟನ್​ ಸೇಲ್​ ಸೊಸೈಟಿ ಆವರಣದಲ್ಲಿ ಸೋಮವಾರ ಜರುಗಿದ ಕೆ.ಎಚ್​. ಪಾಟೀಲ 101 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕೆ.ಎಚ್​. ಪಾಟೀಲ ವಾಷಿರ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಶಾಸಕ ಸ್ಥಾನದ ಟಿಕೆಟ್​ ನೀಡಿದ್ದು ಕೆ. ಎಚ್​. ಪಾಟೀಲು ಎಂದು ಸ್ಪರಿಸಿದರು. ಪ್ರಶಸ್ತಿಯ 5 ಲಕ್ಷ ರೂ. ಮೊತ್ತವನ್ನು ಗದಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸುತ್ತಿರುವ ಬುತ್ತಿಯ ಆಲಕ್ಕೆ ನೀಡುತ್ತೇನೆ ಎಂದು 5 ಲಕ್ಷ ಮೊತ್ತವನ್ನು ಮರುಕಳಿಸಿದರು.
ಕೆ.ಎಚ್​. ಪಾಟೀಲ್​ ಅವರು ರಾಜಕೀಯದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಕೆ.ಎಚ್​. ಪಾಟೀಲ್​ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದಲೇ ತಾವು ರಾಜಕೀಯದಲ್ಲಿ ಮುನ್ನಡೆಯಲು ಸಾಧ್ಯವಾಯಿ. ತಾವು ರಾಜಕೀಯದಲ್ಲಿ ಆರಂಭಿಕ ಹಂತದಲ್ಲಿದ್ದಾಗ ಕೆ.ಎಚ್​. ಪಾಟೀಲ್​ ಅವರು ಚುನಾವಣೆಯಲ್ಲಿ ಸ್ಪಧಿರ್ಸಲು ಪ್ರೋತ್ಸಾಹಿಸಿದರು. ಅವರಂತಹ ಹಿರಿಯ ನಾಯಕರು ಯುವಕರಿಗೆ ಅವಕಾಶ ನೀಡಿ ಪ್ರೋತ್ಸಾಹ ನೀಡುತ್ತಿದ್ದರಿಂದ ರಾಜಕೀಯದಲ್ಲಿ ಹೊಸ ನಾಯಕತ್ವ ಬೆಳೆದಿದೆ ಎಂದು ಹೇಳಿದರು.
ಸರ್ಕಾರಿ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಹಾಗೂ ರೈತರಿಗೆ ಉತ್ತಮ ಕಬ್ಬಿನ ಬೆಲೆ ದೊರಕುವಂತೆ ಮಾಡುವಲ್ಲಿ ಕೆ.ಎಚ್​. ಪಾಟೀಲ್​ ಅವರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯದ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಕೆ.ಎಚ್​. ಪಾಟೀಲ ಅವರು ವಿಶೇಷ ಆಸಕ್ತಿ ತೋರಿದ ನಾಯಕರಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net