ಬಡ್ಡಿದಂಧೆ ವ್ಯವಹಾರ, ನಗರಾದ್ಯಂತ ಪೊಲೀಸ್​ ಕಾರ್ಯಾಚರಣೆ

Gadag Police Operation
Gadag Police Operation
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರಾದ್ಯಂತ ಬಡ್ಡಿದಂಧೆ ವ್ಯವಹಾರ ವಿರುದ್ಧ ಪೊಲೀಸ್​ ಇಲಾಖೆ ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಹಲವರನ್ನು ವಿಚಾರಣೆ ನಡೆಸಿದ್ದು, ಬಡ್ಡಿ ವ್ಯವಹಾರ ನಡೆಸದಂತೆ ಎಚ್ಚರಿಕೆಯನ್ನೂ ನೀಡಿದೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪತ್ತೆಯಾಗಿರುವ ಅಕ್ರಮ ಹಣಕಾಸು ವ್ಯವಹಾರ ಹಾಗೂ ದುಬಾರಿ ಬಡ್ಡಿ ದಂಧೆ ಕುರಿತ ಸರಣಿ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್​ ಎಚ್ಚೆತ್ತುಕೊಂಡಿದೆ.
ಪೊಲೀಸ್​ ದಾಳಿ:
ಪೊಲೀಸ್​ ಇಲಾಖೆ 6 ವಿಶೇಷ ತಂಡಗಳನ್ನು ರಚಿಸಿ ಬೆಟಗೇರಿಯ ನಿವಾಸಿ ಮನೋಹರ ಕಟ್ಟಿಮನಿ ಎಂಬುವವರ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ದಾಳಿಯ ವೇಳೆ 150 ಕ್ಕೂ ಹೆಚ್ಚು ಚೆಕ್​ಗಳು, 65 ಕ್ಕೂ ಹೆಚ್ಚು ಖಾಲಿ ಬಾಂಡ್​ಗಳು, ಒಪ್ಪಂದ ಪತ್ರಗಳು ಹಾಗೂ ವಿವಿಧ ದಾಖಲೆಗಳು, 9 ಬ್ಯಾಂಕ್​ ಪಾಸ್​ಬುಕ್​?ಗಳು, 11 ಚೆಕ್​ಬುಕ್​ಗಳು, 5 ಕ್ಕೂ ಹೆಚ್ಚು ಎಟಿಎಂ ಕಾರ್ಡಗಳು ಹಾಗೂ 3 ಪ್ಯಾನ್​ ಕಾರ್ಡಗಳು ಪೊಲೀಸ ಇಲಾಖೆ ದಾಳಿ ವೇಳೆ ವಶಪಡಿಸಿಕೊಂಡಿದೆ.
ಯಾವುದೇ ಲೆಕ್ಕಪತ್ರಗಳಲ್ಲಿ ದಾಖಲಾಗದ ಅಂದಾಜು 422.4 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 60 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೇ 5.5 ಲಕ್ಷ ನಗದು ಹಣವನ್ನೂ ವಶಪಡಿಸಿಕೊಳ್ಳಲಾಗಿದೆ. ದಾಳಿಯ ವೇಳೆ ಗೋವಾ ಮದ್ಯದ 10 ಬಾಟಲಿಗಳು ಪತ್ತೆಯಾಗಿದ್ದು, ಅವುಗಳನ್ನು ಸಹ ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್​) ಸುಲಿಗೆ, ಬೆದರಿಕೆ, ಕ್ರಿಮಿನಲ್​ ಇಂಟಿಮಿಡೇಶನ್​ ಸೇರಿದಂತೆ ವಿವಿಧ ಕಲಂಗಳು ಹಾಗೂ ಮೈಕ್ರೋ ೈನಾನ್ಸ್​ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಅಕ್ರಮ ಹಣಕಾಸು ಜಾಲದ ಬಗ್ಗೆ ತನಿಖೆ ಕೂಡಾ ಮುಂದುವರಿದಿದೆ.
ಅಕ್ರಮ ಹಣಕಾಸು ವ್ಯವಹಾರ, ವಿಪರೀತ ಬಡ್ಡಿ ವಸೂಲಿ, ಸಾಲಗಾರರಿಗೆ ಬೆದರಿಕೆ ಹಾಕುವುದು ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಗದಗ ಪೊಲೀಸರು ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಕೋಟ್​.
ಅಕ್ರಮ ಬಡ್ಡಿ ದಂಧೆ ಹಾಗೂ ಸಮಾಜಕ್ಕೆ ಹಾನಿಕಾರಕವಾಗಿರುವ ಅನಧಿಕೃತ ಹಣಕಾಸು ಚಟುವಟಿಕೆಗಳನ್ನು ಸಂರ್ಪೂಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಕ್ರಮ ಬಡ್ಡಿ ವ್ಯವಹಾರ ನಡೆಸುವವರಿಗೆ ಖಡಕ್​ ಸಂದೇಶ ರವಾನಿಸಲಾಗಿದೆ.
ರೋಹನ್​ ಜಗದೀಶ ಎಸ್ಪಿ ಗದಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net