ಜ್ಯುವೆಲರಿ ಶಾಪ್​ ಕಳ್ಳತನ ಪ್ರಕರಣ! ಕಿನ್ನಿ ಟೋಲ್​ ಬಳಿ ಆರೋಪಿಗೆ ಗುನ್ನಾ ಇಟ್ಟ ಗದಗ ಪೊಲೀಸ್​

ಗದಗ ಪೊಲೀಸ್ ಸುದ್ದಿಗೋಷ್ಠಿ
ಗದಗ ಪೊಲೀಸ್ ಸುದ್ದಿಗೋಷ್ಠಿ
Published on
ಜ್ಯುವೆಲರಿ ಶಾಪ್​ ಕಳ್ಳತನ ಪ್ರಕರಣ! 24 ಗಂಟೆ ಒಳಗಾಗಿ ಪೊಲೀಸ್​ ಕಾರ್ಯಾಚರಣೆ
80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ
ಅಂತರಾಜ್ಯ ಕಳ್ಳನ ಬಂಧನ! ಪೊಲೀಸ್​ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಖಾಸಗಿ ಜ್ಯುವೆಲೆರಿ ಶಾಪ್​ ನಲ್ಲಿ ಬುಧವಾರ ಬೆಳಗಿನ ಜಾವ 80.21ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ ಖತರ್ನಾಕ ಕಳ್ಳನನ್ನು 24 ಗಂಟೆ ಒಳಗಾಗಿ ಸಿನೀಮಿಯ ರೀತಿಯಲ್ಲಿ ಪೊಲೀಸರು ಬಂಧಿಸಿದ ಟನೆ ಗದಗ ನಗರದಲ್ಲಿ ನಡೆದಿದೆ. ಪೊಲೀಸ್​ ಕಾರ್ಯಾಚರಣೆಗೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಗುಜುರಾತಿನ ಅಹ್ಮದಾಬಾದ್​ನ ನಿವಾಸಿ ಆಗಿರುವ ಮಹ್ಮದ ಸಿದ್ಧಿಕಿ(43) ಬಂದಿತ ಆರೋಪಿ ಆಗಿದ್ದು, ಮಹರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಕಿನ್ನಿ ಟೋಲ್​ ಗೇಟ್​ ನಲ್ಲಿ ಆರೋಪಿಯನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ. ಪೊಲೀಸ್​ ಕಾರ್ಯಾಚರಣೆಯಲ್ಲಿ ಸಾರಿಗೆ ಇಲಾಖೆ ಮತ್ತು ಸೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳ ಪೊಲಿಸ್​ ವರಿಷ್ಠಾಧಿಕಾರಿಗಳು ಸಹಕಾರ ನೀಡಿದ್ದನ್ನು ಸ್ಮರಿಸಿದ ಜಿಲ್ಲಾ ಪೊಲಿಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನಗರದ ಸ್ಟೇಷನ್​ ರಸ್ತೆಯಲ್ಲಿ ಇರುವ ಶಾಂತಾದುರ್ಗಾ ಜ್ಯುವೆಲಿರಿ ಶಾಪ್​ ನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಅಂಗಡಿ ಮಾಲೀಕರು ಬೆಳಗ್ಗೆ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಮುರ್ತುಜಾ ಖಾದ್ರಿ ಹಾಗೂ ಪಿಎಸ್​ಐ ಎಲ್​.ಕೆ. ಜೂಲಕಟ್ಟಿ ಅವರು ತನಿಖೆ ಆರಂಭಿಸಿದರು. ಪ್ರಾಥಮಿಕ ತನಿಖೆಯಲ್ಲಿ ಜ್ಯುವೆಲರಿ ಶಾಪ್​ ಹಿಂಬದಿ ಇರುವ ಲಾಡ್ಜ್​ ಮೂಲಕ ಶಾಪ್​ ಗೆ ನುಗ್ಗಿರುವ ಆರೋಪಿಯು ಅತ್ಯಾಧುನಿಕ ಉಪಕರಣ ಬಳಸಿ ಕಬ್ಬಿಣದ ಕಿಟಕಿಗಳನ್ನು ಒಡೆದು ಒಳಗೆ ಬಂದು ಕಳ್ಳತನ ಮಾಡಿರುವುವು ಗೊತ್ತಾಗಿದೆ. ಪ್ರಕರಣ ಗಂಭೀರತೆ ಅರಿತ ಎಸ್ಪಿ ರೋಹನ್​ ಜಗದೀಶ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್​ ತಂಡ ರಚನೆಯಾಗಿ ಆರೋಪಿ ಸುಳಿವಿಗಾಗಿ ಹುಡಕಾಟ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕಾರ್ಯಾಚರಣೆ ವಿವರ:
ನಗರದ ಶಾಂತಾ ದುರ್ಗಾ ಜ್ಯವೆಲರಿ ಶಾಪ್​ ಹಿಂದುಗಡೆ ಖಾಸಗಿ ಲಾಡ್ಜನಲ್ಲಿ ಆರೋಪಿ ಕಳೆದ ಹಲವು ದಿನಗಳಿಂದ ತಂಗಿದ್ದನ್ನು ಎಂಬುದನ್ನು ಸಿಸಿ ಕೆಮಾರಾ ಆಧರಿಸಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಕಳ್ಳತನ ಆಗಿರುವ ಬಗ್ಗೆ ಅಂಗಡಿ ಮಾಲೀಕರು ದೂರು ದಾಖಲಿಸುವ ಮೊದಲೇ ಕಾರ್ಯಪ್ರವೃತ್ತರಾಗಿದ್ದಾರೆ. ನಗರದಲ್ಲಿ ಪೊಲೀಸ್​ ಇಲಾಖೆ ವತಿಯಿಂದ ಅಳವಡಿಸಿರುವ ಸಿ.ಸಿ. ಕೆಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿ ಬೆನ್ನಿಗೆ ಬಿದ್ದಿದ್ದಾರೆ. ಕಳ್ಳತನದ ಚಿನ್ನಾಭಾರಣಗಳೊಂದಿಗೆ ಆರೋಪಿಯು ನಗರದ ಹೊಸ ಬಸ್​ ನಿಲ್ದಾಣದಿಂದ ಪುಣೆ ಬಸ್​ ಮೂಲಕ ಮಹಾರಾಷ್ಟ್ರ ಕಡೆಗೆ ತೆರಳುತ್ತಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಹೀಗಾಗಿ ಜಿಲ್ಲಾ ಪೊಲೀಸ್​ ಇಲಾಖೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಪೊಲಿಸ್​ ವರಿಷ್ಠಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸೊಲ್ಲಾಪುರ ಜಿಲ್ಲೆಯ ವಡಗಾಂ ಪೊಲೀಸ್​ ಠಾಣೆ ವ್ಯಾಪ್ತಿಯ ಕಿನ್ನಿ ಟೋಲ್​ ಬಳಿ ಬಸ್​ನಲ್ಲಿ ಸಂಚರಿಸುತ್ತಿದ್ದ ಆರೋಪಿಯನ್ನು ವಡಗಾಂ ಪೊಲೀಸರು ಬಂಧಿಸಿ ಪಂಚನಾಮೆಗೆ ಒಳಪಡಿಸಿದ್ದಾರೆ. ಆರೋಪಿತನಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟರೊಳಗಾಗಿ ಗದಗ ಜಿಲ್ಲಾ ಪೊಲೀಸ್​ ಸಿಬ್ಬಂದಿಯು ಅಲ್ಲಿಗೆ ತೆರಳಿ ಚಿನ್ನಾಭರಣದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ.
ಕಳ್ಳನ ಕೈಚಳ:
ಆರೋಪಿಯ ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ ಕಳ್ಳತನ ಕುರಿತು ಪೊಲೀಸ್​ ಇಲಾಖೆಗೆ ಆರೋಪಿ ವಿವರಿಸಿದ್ದಾರೆ. ಲಾಡ್ಜ ಮೂಲಕ ಜ್ಯುವೆಲರಿ ಶಾಪ್​ನ ಎರಡನೇ ಮಹಡಿಗೆ ಬಂದಿದ್ದ ಆರೋಪಿಯು ಗ್ಯಾಸ್​ ಕಟರ್​ ಯಂತ್ರ, ಹೈಡ್ರೋಲಿಕ್​ ಕಟರ್​ ಯಂತ್ರ, ಕಬ್ಬಿಣ ಸುತ್ತಿಗೆ ಮೂಲಕ ಕಿಟಕಿಯನ್ನು ಕೊರೆದು ಒಳ ನುಗ್ಗಿದ್ದಾನೆ. ಮೊದಲು ಸಿಸಿ ಕೆಮಾರಾ ಡ್ಯಾಮೇಜ್​ ಮಾಡಿದ್ದಾನೆ. ಚಿನ್ನಧ ಆಬರಣ ಇರುವ ಟ್ರೆಸರಿ ಒಡೆಯಲು ಯತ್ನಿಸಿದ್ದಾನೆ. ಟ್ರೆಸರಿ ಒಡೆಯುವ ಯತ್ನ ವಿಲವಾದಾಗ ಗ್ರಾಹಕರಿಗಾಗಿ ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಟ್ಟ ಆಭರಣಗಳನ್ನು ಕಳ್ಳತನ ಮಾಡಿ ಮತ್ತೆ ಲಾಡ್ಜಗೆ ಮರಳಿದ್ದಾನೆ. ಲಾಡ್ಜ್​ ರೆಜಿಸ್ಟ್ರಾರನಲ್ಲಿ ತನ್ನ ಮೂಲ ವಿಳಾಸವನ್ನು ತಾನೆ ತಿದ್ದುವ ಮೂಲಕ ಸಾ ನಾಶ ಮಾಡುವ ಯತ್ನ ನಡೆಸಿದ್ದಾರೆ. ಅದೇ ದಿನ ಪುಣೆ ಬಸ್​ ಮೂಲಕ ತೆರಳಿರುವುದು ಗೊತ್ತಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಪೊಲೀಸ್​ ಅಧಿಕಾರಿಗಳಾದ ಮಹಾಂತೇಶ ಸಜ್ಜನ, ಎಲ್​.ಕೆ. ಜೂಲಕಟ್ಟಿ, ಮುರ್ತುಜಾ ಖಾದ್ರಿ, ಧೀರಜ್​ ಸಿಂಧೆ, ಸಿದ್ರಾಮೇಶ್ವರ ಗಡದ, ಆರ್​.ಆರ್​. ಮುಂಡೆವಾಡಗಿ, ಜಿ.ಟಿ. ಜಕ್ಕಲಿ, ಮಾರುತಿ ಜೋಗದಂಡಕರ, ಎಂ. ಬಿ. ವಡ್ಡಟ್ಟಿ, ಸಂತೋಷ ಗುಬ್ಬಿ, ವಿ. ಎಸ್​. ಶೆಟ್ಟಣ್ಣವರ, ಯು.ಎ್​. ಸುನಗಾರ, ಎಸ್​. ಎಚ್​. ನಾಗೇಂದ್ರಗಡ, ಕೆ.ವಿ. ತಿಗರಿ, ಎಚ್​.ಐ. ಯಡಿಯಾಪೂರ, ಅಣ್ಣಪ್ಪ ಕವಲೂರು, ವೈ.ಬಿ. ಪಾಟೀಲ, ಎಸ್​.ಎಸ್​. ಮಾವಿನಕಾಯಿ, ಎ.ಎ್​. ಹನಜಿ, ಪಿ.ಎಚ್​. ಗುಬ್ಬಿ, ವಿಜಯಕುಮಾರ ವಾಲಿ, ನೆಹರು ನಾಯಕ, ಬಸವರಾಜ ಗುಡ್ಲಾನೂರು, ಪ್ರಕಾಶ ಗಾಣಿಗೇರ ಇತರರು ಇದ್ದರು.
ವಶಪಡಿಸಿಕೊಂಡ ಆಭರಣಗಳು:
10,16,200 ರೂ ಮೌಲ್ಯದ 76.80 ಗ್ರಾ ಬಂಗಾರದ ಆಭರಣಗಳು, 61,09,828 ರೂ, ಮೌಲ್ಯದಬೆಳ್ಳಿಯ ಆಭರಣಗಳು, 8,95,000 ರೂ. ಮೌಲ್ಯದ ಜೆಮ್​ ಸ್ಟೋನ್​ಗಳು ಹಾಗೂ 26000 ರೂ. ನಗದು ಸೇರಿ ಒಟ್ಟು 80,21,0258 ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
= = =
ಪ್ರಕರಣ ಸಾವಾಲಿನದಾಗಿತ್ತು. ಚಿನ್ನಾಭರಣಗಳ ಸಂಖ್ಯೆ ಅಧಿಕವಾಗಿದ್ದರಿಂದ ಆದಷ್ಟು ಬೇಗ ಆರೋಪಿ ಜತೆಗೆ ಚಿನ್ನಾಭರಣ ವಶಪಡಿಸಿಕೊಳ್ಳಬೇಕಿತ್ತು. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್​ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಗುದು.
- ರೋಹನ್​ ಜಗದೀಶ, ಎಸ್ಪಿ, ಗದಗ
= = = = = = = =
ಆರೋಪಿ ಮಹ್ಮದ ಸಿದ್ಧಿಕಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net