14 ಕಳ್ಳತನ ಪ್ರಕರಣ! ಪ್ರತ್ಯೇಕ ಎರಡು ಗ್ಯಾಂಗ್​ ಬಂಧನ

ಜಿಲ್ಲೆಯಲ್ಲಿ 14 ಕಳ್ಳತನ ಪ್ರಕರಣ ಭೇದಿಸಿ ಚಿನ್ನಾಭರಣ ವಶಪಡಿಸಿಕೊಂಡಿರುವ ಕುರಿತು ಜಿಲ್ಲಾ ಎಸ್ಪಿ ರೋಹನ್​ ಜಗದೀಶ ಸುದ್ದಿಗೋಷ್ಠಿ ನಡೆಸಿದರು. ಪೊಲೀಸ್​ ಅಧಿಕಾರಿಗಳಾದ ಮುರ್ತುಜಾ ಖಾದ್ರಿ, ಧೀರಜ ಶಿಂದೆ, ಮಾರುತಿ ಜೋಗದಂಡಕರ, ಲಕ್ಷ$್ಮಣ ಆರಿ, ಆರ್​. ಎಚ್​. ಜೂಲಕಟ್ಟಿ, ಸಿಬ್ಬಂದಿಗಳು ಇತರರು ಇದ್ದರು.
ಜಿಲ್ಲೆಯಲ್ಲಿ 14 ಕಳ್ಳತನ ಪ್ರಕರಣ ಭೇದಿಸಿ ಚಿನ್ನಾಭರಣ ವಶಪಡಿಸಿಕೊಂಡಿರುವ ಕುರಿತು ಜಿಲ್ಲಾ ಎಸ್ಪಿ ರೋಹನ್​ ಜಗದೀಶ ಸುದ್ದಿಗೋಷ್ಠಿ ನಡೆಸಿದರು. ಪೊಲೀಸ್​ ಅಧಿಕಾರಿಗಳಾದ ಮುರ್ತುಜಾ ಖಾದ್ರಿ, ಧೀರಜ ಶಿಂದೆ, ಮಾರುತಿ ಜೋಗದಂಡಕರ, ಲಕ್ಷ$್ಮಣ ಆರಿ, ಆರ್​. ಎಚ್​. ಜೂಲಕಟ್ಟಿ, ಸಿಬ್ಬಂದಿಗಳು ಇತರರು ಇದ್ದರು.
Published on
ಒಟ್ಟು 1.26 ಕೋಟಿ ಮೌಲ್ಯದ ಚಿನ್ನಾಭರಣ ವಶ
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಲ್ಲಿ 2025 ಮತ್ತು 2026ನೇ ಸಾಲಿನಲ್ಲಿ ನಡೆದ ಹಲವು ಕಳ್ಳತನ ಪ್ರಕರಣಗಳನ್ನು ಜಿಲ್ಲಾ ಪೊಲೀಸ್​ ಇಲಾಖೆ ಬೇದಿಸಿದ್ದು, ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿ, 1.26 ಕೋಟಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನು ಪ್ರಕ್ರಿಯೆ ಮೂಲಕ ಮೂಲ ಮಾಲೀಕರಿಗೆ ಚಿನ್ನಾಭರಣ ಮರಳಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ ಹೇಳಿದರು.
ನಗರದ ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತರು ಭಾಗಶಃ ಎಲ್ಲರೂ ಸಂಬಂಧಿಕರಾಗಿದ್ದಾರೆ. ಸಾಕ್ಷ$್ಯಗಳು ಸಿಗದಂತೆ ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ಪುಟ್ಟರಾಜ ನಗರದಲ್ಲಿ ರಾತ್ರಿಹೊತ್ತು 8 ಜನರ ತಂಡ ಮನೆ ಕಳ್ಳತನ ಮಾಡಿ ಪರಾರಿ ಆಗಿತ್ತು. ಈ ಜಾಡು ಹಿಡಿದು ತನಿಖೆ ನಡೆಸಿದಾಗ 8 ಜನರಲ್ಲಿ ಒಬ್ಬ ಕಳ್ಳ ಸಾಕ್ಷ$್ಯವನ್ನು ಬಿಟ್ಟಿದ್ದ. ತನಿಖೆ ಮುಂದುವರಿಸಿ ಎಲ್ಲರನ್ನೂ ಬಂಧಿಸಲಾಗಿದೆ. ಈ 8 ಜನರಲ್ಲಿ ಮೂವರಿಗೆ 2007ರ ಪ್ರಕರಣ ಒಂದರಲ್ಲಿ ಶಿೆಯೂ ಆಗಿದೆ ಎಂದು ತಿಳಿಸಿದರು.
ಪ್ರಕರಣ 1:
ಕಳೆದ ತಿಂಗಳು ಪುಟ್ಟರಾಜ ನಗರದ ಮನೆಯೊಂದರಲ್ಲಿ 8 ಜನರ ತಂಡವೊಂದು ಕಳ್ಳತನ ನಡೆಸಿತ್ತು. ಮಾಸ್ಕ, ಗ್ಲೌಸ್​ ಬಳಸಿದ್ದರಿಂದ ಆರೋಪಿಗಳ ಗುರುತು ಪತ್ತೆ ಕಷ್ಟವಾಗಿತ್ತು. ನಗರದ ಹೊರ ವಲಯದಲ್ಲಿ ಅಂದಾಜು ಐದಾರು ಕಿಮೀ ದೂರದಲ್ಲಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲೇ ಬಂದು ಕಳ್ಳತನ ಮಾಡುತ್ತಿದ್ದರು. ಇವರು ಮೊಬೈಲ್​ ಬಳಸುತ್ತಿರಲಿಲ್ಲ. ಹೀಗಾಗಿ ಕಳ್ಳರ ಬಂಧನ ಸವಾಲಾಗಿತ್ತು. ಆದರೆ, ಕಳ್ಳತನ ನಂತರ ನಗರದ ಹೊರವಲಯದ ಹೊಲದಲ್ಲಿ ಕಾಲ್ನಡಿಗೆಯಲ್ಲಿ ತೆರಳಿದ್ದರು. ಆಗ ಮಳೆ ಆಗಿದ್ದರಿಂದ ಆರೋಪಿಯು ಹೊಲದಲ್ಲಿ ನಡೆದ ಗುತುಗಳು ಪತ್ತೆ ಆಗಿತ್ತು. ಆ ಜಾಡು ಹಿಡಿದು ಆರೋಪಿಗಳಿಗೆ ಬಲೆ ಬೀಸಲಾಗಿತ್ತು. ಬೆಳಗಾವಿ, ಹಳಿಯಾಳ, ಧಾರವಾಡ, ಕಾರವಾರ ಮತ್ತು ಮಧ್ಯ ಪ್ರದೇಶ ಸೇರಿದಂತೆ ವಿವಿಧ ಕಡೆ ಕಳ್ಳರ ಹಡುಕಾಟ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಿತ್ತೂರು ತಾಲೂಕಿನ ಕಾದ್ರೋಳಿ ಗ್ರಾಮದ ಸುರೇಶ ಸಿಂಗನೂರು, ಅಳ್ನಾವರದ ನಾಗಪ್ಪ ದುರಗಮುರಗಿ, ಧಾರವಾಡ ಜಿಲ್ಲೆಯ ಗರಗ ಗ್ರಾಮದ ಶಿವು ಬೆಳಗಂಟಿ, ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಸುರೇಶ ತಮ್ಮಣ್ಣವರ, ಧಾರವಾಡ ಜಿಲ್ಲೆಗೆ ವೆಂಕಟಾಪೂರ ಗ್ರಾಮದ ಶಂಕರ ಕರಿ, ಧಾರವಾಡ ಪಟ್ಟಣದ ಮಂಜುನಾಥ ಬಾದಗಿ, ಹಾನಗಲ್ಲ ತಾಲೂಕಿನ ಬೆಳಗಾಲಪೇಟೆ ಗ್ರಾಮದ ಹುಲಗೆಪ್ಪ ಹಾಗೂ ಧಾರವಾಡ ಜಿಲ್ಲೆ ಮುನವಳ್ಳಿ ಗ್ರಾಮದ ಆನಂದ ಯರಗಣ್ಣವರ ಅವರನ್ನು ಬಂಧಿತರು. ಇದರಲ್ಲಿ ಸುರೇಶ ಸಿಂಗನೂರು, ನಾಗಪ್ಪ ಮತ್ತು ಸುರೇಶ ತಮ್ಮಣ್ಣವರ ಆರೋಪಿಗಳು 2007ರಲ್ಲಿ ಕಳ್ಳತನ ಪ್ರಕರಣದಲ್ಲಿ ಶಿೆ ಅನುಭವಿಸಿದ್ದಾರೆ. ಗದಗ ಜಿಲ್ಲೆಯಯಲ್ಲಿ 7, ಬೆಳಗಾವಿ ಜಿಲ್ಲೆಯಲ್ಲಿ 4 ಸೇರಿ ಒಟ್ಟು 11 ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದು, ಬಮಧಿತರಿಂದ 587 ಗ್ರಾಂ ಚಿನ್ನ, 3822 ಗ್ರಾಂ ಬೆಳ್ಳಿ, ಬೈಕ್​ ಹಾಗೂ ಟಾಟಾ ಗೂಡ್ಸ್​ ವಾಹನ ಸೇರಿ ಒಟ್ಟು 1.07 ಕೋಟಿ ಮೊತ್ತದ ಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ರೋಹನ್​ ಜಗದೀಶ ಹೇಳಿದರು.
ಪ್ರಕರಣ 2:
ಬೆಟಗೇರಿ ಬಡಾವಣೆ ವ್ಯಾಪ್ತಿಯಲ್ಲಿ 2025 ಮತ್ತು 26ನೇ ಸಾಲಿನಲ್ಲಿ ಮೂರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ತಲೂಕಿನ ಮೊಗಾಬಿ ಗ್ರಾಮದ ಗಂಗಾರಾಮ ಚವ್ಹಾಣ ಮತ್ತು ಶ್ರೀಕಾಂತ ಪೂಜಾರ ಹಾಗೂ ಆಳಂದ ತಾಲೂಕಿನ ಶಕಾಪೂರ ಗ್ರಾಮದ ಕನೀರಾಮ ಕಮಸರ ಬಂಧಿತರು. ಬಂಧಿತರಿಂದ 116 ಗ್ರಾಂ ಚಿನ್ನ, 515 ಗ್ರಾಂ ಬೆಳ್ಳಿ ಸೇರಿ ಒಟ್ಟು 18.66 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ರೋಹನ್​ ಜಗದೀಶ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪೊಲೀಸ್​ ಅಧಿಕಾರಿಗಳಾದ ಮುರ್ತುಜಾ ಖಾದ್ರಿ, ಧೀರಜ ಶಿಂದೆ, ಮಾರುತಿ ಜೋಗದಂಡಕರ, ಲಕ್ಷ$್ಮಣ ಆರಿ, ಆರ್​. ಎಚ್​. ಜೂಲಕಟ್ಟಿ, ಸಿಬ್ಬಂದಿಗಳು ಇತರರು ಇದ್ದರು.
ಕೋಟ್​:
ಪ್ರಕರಣ 1ರ ಆರೋಪಿಗಳು ಕಳ್ಳತನ ಮಾಡುವ ಸಂದರ್ಭಲ್ಲಿ ಮಾತ್ರ ಸೇರುತ್ತಿದ್ದರು. ಇತರೆ ಸಮಯದಲ್ಲಿ ಒಬ್ಬರಿಗೊಬ್ಬರು ಪರಿಚಯ ಇಲ್ಲದವರಂತೆ ಇರುತ್ತಾರೆ. ವೃತ್ತಿಯಲ್ಲಿ ಕಸ ಸಂಗ್ರಹಿಸುವರು ಎಂದು ಹೇಳಿಕೊಂಡಿದ್ದಾರೆ. ತನಿಖೆ ನಂತರವೇ ಸತ್ಯ ಹೊರ ಬರಲಿದೆ.
ರೋಹನ್​ ಜಗದೀಶ, ಎಸ್ಪಿ ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net