ವಿವಿಯ ಪ್ರಭಾರ ಕುಲಪತಿ ಡಾ. ಸುರೇಶ ನಾಡಗೌಡ ಮಾತನಾಡಿ, ಸಮ್ಮೇಳನ ಮೊದಲ ದಿನ ಗ್ರಾಮ ಸ್ವರಾಜ್ಯದ ಗಾಂಧೀಯ ತತ್ವಗಳು, ಪಂಚಾಯತ್ ಕಾಯ್ದೆಗಳು, ವಿಕೇಂದ್ರೀಕೃತ ಆಡಳಿತ, ನೀತಿ-ನಿಯಮಗಳು ಮತ್ತು ಸಮುದಾಯ ಸಬಲೀಕರಣ ಕುರಿತು ಅಧಿವೇಶನಗಳು ನಡೆಯಲಿವೆ. ಎರಡನೇ ದಿನ ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ, ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ವಿಷಯಗಳ ಕುರಿತು ಪ್ರಮುಖ ತಾಂತ್ರಿಕ ಅಧಿವೇಶನಗಳು ನಡೆಯಲಿವೆ ಎಂದು ಹೇಳಿದರು.