ಖೊಟ್ಟಿ ದಾಖಲೆ ಸೃಷ್ಟಿಸಿದ ಪ್ರಕರಣವೊಂದು ಬೆಳಿಕೆಗೆ ಬಂದಿದ್ದು, ಈ ಪ್ರಕರಣದಲ್ಲಿ ಮೊತ್ತವನ್ನು ಮರುಪಾವತಿಸಿರುವ ಟನೆ 2022 - 23ರಲ್ಲಿ ರೋಣ ತಾಲೂಕಿನ ಜಿಗಳೂರು ಗ್ರಾಮದಲ್ಲಿ ನಡೆದಿದೆ. ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಜಿಗಳೂರು ಗ್ರಾಮದಲ್ಲಿ 22 ರೈತರ ಜಮೀನನ ಬದುಗಳ ಸುತ್ತಲೂ ತೆಂಗಿನ ಸಸಿ ನೆಟ್ಟಿರುವುದಾಗಿ ಖಒಟ್ಟಿ ದಾಖಲೆ ಸೃಷ್ಟಿ ಹಣ ಲಪಟಾಯಿಸಲಾಗಿತ್ತು. ಈ ಪ್ರಕರಣದಲ್ಲಿ ಓಂಬಡ್ಸಮನ್ ಅವರು ಒಟ್ಟು 2,23,831 ರೂ, ಹಣವನ್ನು ಮರುಪಾವತಿಸಲು ಆದೇಶಿಸಿದ್ದರು. ಪ್ರಕರಣದಲ್ಲಿ 1,29,325 ರೂ. ಗಳನ್ನು ಮರು ಪಾವತಿ ಪಡೆದುಕೊಳ್ಳಲಾಗಿದೆ. ಅದೇ ರೀತಿ 2022&23ನೇ ಅವಧಿಯಲ್ಲಿ ಮಲ್ಲಾಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಬಿಲ್ನಲ್ಲಿ ಅಕ್ರಮ ಎಸಗಿದ್ದು ಈ ಪ್ರಕರಣದಲ್ಲೂ 27.310 ರೂ. ಗಳನ್ನು ಅಕ್ರಮ ಭಾಗಿದಾರರು ಮರುಪಾವತಿ ಮಾಡಿದ್ದಾರೆ. ಸಾಮಗ್ರಿ ಬಿಲ್ ನಲ್ಲಿ ಅಕ್ರಮ ಎಸಗಿದ ಕಾರಣ 16,446 ರೂ, ಹುನಗುಂಡಿ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿಯಲ್ಲಿ ಎಸಗಿದ ಅಕ್ರಮದ 69,725 ರೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ಓಂಬಡ್ಸಮನ್ ವರದಿಯಂತೆ ಸರ್ಕಾರಕ್ಕೆ ಮರುಪಾವತಿ ಆಗಿದೆ.