ನಕಲಿ ಠರಾವು ಪ್ರಕರಣದಲ್ಲಿ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು ಅನರ್ಹತೆ ಮಾಡಿದ್ದರು. ಹೀಗಾಗಿ ನಗರಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಕುಸಿದಿತ್ತು. ಈ ನಡುವೆ ೆ. 28, 2025 ರಂದು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲು ಉಪವಿಭಾಗಾಧಿಕಾರಿ ಗಂಗಪ್ಪ ಅವರು ಅಧಿಸೂಚನೆ ಹೊರಡಿಸಿದ್ದರು. ೆ.28ರ ಚುನಾವಣೆ ದಿನವೇ ಚುನಾವಣೆ ಮುಂದೂಡುವಂತೆ ಹೈಕೋರ್ಟ ಆದೇಶ ನೀಡಿತ್ತಾದರೂ ಉಪವಿಭಾಗಾಧಿಕಾರಿ ಚುನಾವಣೆ ನಡೆಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಾಗಿತ್ತು. ನ್ಯಾಯಾಂಗದಲ್ಲಿ ವಿಚಾರಣೆ ಮುಂದುವರಿದು, ಕಳೆದ ೆ. 10, 2026 ರಂದು ಹೈಕೋರ್ಟ ಏಕ ಸದಸ್ಯ ಪೀಠವು 45 ದಿನಗಳ ಒಳಗಾಗಿ ಚುನಾವಣೆ ನಡೆಸುವಂತೆ ಚುನಾವಣಾ ಅಧಿಕಾರಿಗೆ ಸೂಚಿಸಿತ್ತು ಮತ್ತು ಅನರ್ಹತೆ ಕುರಿತು ವಿಚಾರಣೆಯನ್ನು ಮಾ. 18ಕ್ಕೆ ಮುಂದೂಡಿತ್ತು. ಈ ನಡುವೆ ಹೈಕೋರ್ಟ ಆದೇಶ ಅನುಸಾರ ಮಾ. 3, 2026ರಂದು ಚುನಾವಣೆ ನಡೆಸಲು ಚುನಾವಣಾ ಅಧಿಕಾರಿ ಗಂಗಪ್ಪ ಅವರು ಅಧಿಸೂಚನೆ ಹೊರಡಿಸಿದ್ದರು. ಹೀಗಾಗಿ ಬಿಜೆಪಿ ಸದಸ್ಯರು ದ್ವೀಸದಸ್ಯ ಪೀಠದಕ್ಕೆ ಸಜಿರ್ ಸಲ್ಲಿಸಿ, ಈ ಮೊದಲು ಚುನಾವಣಾ ಅಧಿಕಾರಿ ಮೇಲಿದ್ದ ನ್ಯಾಯಾಂಗ ನಿಂಧನೆ ಪ್ರಕರಣವನ್ನು ಹೈಕೋರ್ಟ ಗಮನಕ್ಕೆ ತಂದರು. ಗುರುವಾರ ವಿಚಾರಣೆ ನಡೆಸಿದ ದ್ವೀಸದಸ್ಯ ಪೀಠವು, ನ್ಯಾಯಾಂಗ ನಿಂಧನೆ ಪ್ರಕರಣ ಮತ್ತು ಬಿಜೆಪಿ ಸದಸ್ಯರ ಮೂವರು ಅನರ್ಹತೆ ಪ್ರಕರಣ ಮತ್ತೊಮ್ಮೆ ವಿಚಾರಣೆ ನಡೆಸಲು ಅಸ್ತು ಎಂದಿದೆ. ಮಾ. 2 ರಂದು ವಿಚಾರಣೆ ನಡೆಯಲಿದೆ. ಮಾ.3ಕ್ಕೆ ಸುನಾವಣೆ ನಡೆಯಲಿದೆಯೇ? ಇಲ್ಲವೇ? ಎಂಬುದು ಮಾ. 2ರಂದೇ ನಿರ್ಧಾರವಾಗಲಿದೆ.