ಲೋಕಾದಾಳಿ ನಂತರ ನಗರಸಭೆಯ ನಗ್ನಸತ್ಯಗಳು ಒಂದೊಂದೆ ಬಹಿರಂಗಗೊಳ್ಳುತ್ತಿದ್ದು, ಹಲವು ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಅರೆಬರೆ ದಾಖಲೆಗಳನ್ನು ಸೃಷ್ಟಿಸಿ ಕೋಟಿಗೂ ಅಧಿಕ ಮೊತ್ತದ ಸಾಮಾನ್ಯ ನಿಧಿ ಹಣ ವಿವಿಧ ರೀತಿಯಲ್ಲಿ ರ್ದುಬಳಕೆ ಆಗಿರುವುದು ಲೋಕಾದಾಳಿಯಲ್ಲಿ ತಿಳಿದು ಬಂದಿದೆ. ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಲೋಕಾಯುಕ್ತದಲ್ಲಿ ಸಿದ್ಧತೆ ನಡೆದಿದೆ. ನಗರಭೆಯಲ್ಲಿನ ಅಧಿಕಾರಿ ವರ್ಗವೇ ನಿಯಮ ಬಾಹಿರ ಕಾರ್ಯಬಾರ ಮಾಡಿದ್ದು, ಈ ಲೋಕಾ ಪ್ರಕರಣದಿಂದ ಹಲವು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರ ವರ್ಗದ ತಲೆದಂಡ ಆಗಲಿದೆ ಎನ್ನಲಾಗುತ್ತಿದೆ.