ಐಎನ್ವಿರೋ ಎಂಬ ಸಂಸ್ಥೆಗೆ ಮುಂದಿನ 15 ವರ್ಷಗಳ ಕಾಲ ನಗರದ ತ್ಯಾಜ್ಯ ನಿರ್ವಹಣೆ ಗುತ್ತಿಗೆ ನೀಡಲಾಗಿದೆ. ಮುಂದಿನ 15 ವರ್ಷಗಳಲ್ಲಿ ಯಂತ್ರೋಪಕರಣ, ಕೂಲಿಕಾಮಿರ್ಕರು, ನಿರ್ವಹಣೆ ಸೇರಿ ಒಟ್ಟು 8.70 ಕೋಟಿ ಹಣವನ್ನು ಸಂಸ್ಥೆಯು ತ್ಯಾಜ್ಯ ನಿರ್ವಹಣೆಗೆ ಹೂಡಿಕೆ ಮಾಡಲಿದೆ. ಹಸಿ ಮತ್ತು ಒಣ ಕಸ ಎಂದು ಬೇರ್ಪಡಿಸುವ ವಿಧಾನದ ಜತೆಗೆ ಪುನರ್ಬಳಕೆ ಮತ್ತು ಪುನರ್ಬಳಕೆ ಮಾಡದ ಕಸವನ್ನು ಪ್ರತ್ಯೇಖಿಸಿ ವಿಲೇವಾರಿ ಮಾಡುವ ತಂತ್ರಜ್ಞಾನವನ್ನು ಇಲ್ಲಿ ಬಳಸಲಿದೆ. ಹಸಿ ಮತ್ತು ಒಣಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಮಾಡುವ ವಿಧಾನ ಅಳವಡಿಸಕೊಳ್ಳಲಾಗಿದೆ. ಮುಂದುವರಿದು, ಪುನರ್ಬಳಕೆ ಮಾಡಬಹುದಾದ ಕಸದಲ್ಲಿ ದಿನಬಳಕೆ ವಸ್ತುಗಳ ಉತ್ಪಾದನೆ ಮತ್ತು ಸಿಮೆಂಟ್ ್ಯಾಕ್ಟರಿಗಳಿಗೆ ಉರುವಲಾಗಿ ಬಳಸುವ ವಸ್ತುಗಳನ್ನು ಉತ್ಪಾದಿಸಲಾಗುವುದು. ಕಸದಿಂದ ಉತ್ಪಾದನೆ ಮಾಡಿದ ಬಳಕೆ ವಸ್ತುಗಳ ಮಾರಾಟದಲ್ಲಿ ಶೇ. 50 ರಷ್ಟು ಲಾಭ ನಗರಸಭೆಗೂ ದೊರೆಯಲಿದೆ. ಜತೆಗೆ ನತ್ಯಾಜ್ಯ ವಿಲೇವಾರಿ ಟಕದಲ್ಲಿ ಒಂದು ಟನ್ ಕಸ್ ಬೇರ್ಪಡಿಸುವ ನಿರ್ವಹಣಾ ಕೆಲಸಕ್ಕೆ ನಗರಸಭೆ ಏಜೆನ್ಸಿಯವರಿಗೆ 460 ರೂ. ಪಾವತಿಸಲಿದೆ.