ಪುಟ್ಟರಾಜ ಗವಾಯಿಗಳವರ ಜನ್ಮದಿನದ ಅಂಗವಾಗಿ ಸಾಮೂಹಿಕ ವಿವಾಹ : ಕಲ್ಲಯ್ಯಜ್ಜನವರು

  ಉಚಿತ ಸಾಮೂಹಿಕ ವಿವಾಹ ಕುರಿತು ಕಲ್ಲಯ್ಯಜ್ಜನವರು ಸುದ್ದಿಗೋಷ್ಠೀ ನಡೆಸಿದರು. ಪೀರಸಾಬ್​ ಕೌತಾಳ, ಪಿ.ಸಿ.ಹಿರೇಮಠ, ಆನಂದ ಸಾಲಿಗ್ರಾಮ, ಮಂಜುನಾಥ ಮುಳಗುಂದ, ವಿನೋದ ಶಿದ್ಲಿಂಗ ಸೇರಿದಂತೆ ಮುಂತಾದವರು ಇದ್ದರು.
ಉಚಿತ ಸಾಮೂಹಿಕ ವಿವಾಹ ಕುರಿತು ಕಲ್ಲಯ್ಯಜ್ಜನವರು ಸುದ್ದಿಗೋಷ್ಠೀ ನಡೆಸಿದರು. ಪೀರಸಾಬ್​ ಕೌತಾಳ, ಪಿ.ಸಿ.ಹಿರೇಮಠ, ಆನಂದ ಸಾಲಿಗ್ರಾಮ, ಮಂಜುನಾಥ ಮುಳಗುಂದ, ವಿನೋದ ಶಿದ್ಲಿಂಗ ಸೇರಿದಂತೆ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಾಡಿನ ನಡೆದಾಡುವ ದೇವರಾದ ಲಿಂ. ಪಂ. ಪುಟ್ಟರಾಜ ಗವಾಯಿಗಳವರ 112 ನೇ ಜನ್ಮದಿನದ ಅಂಗವಾಗಿ ಕೆ.ಎಚ್​. ಪಾಟೀಲ ಅಭಿಮಾನಿ ಬಳಗದ ವತಿಯಿಂದ ನಗರಸಭೆಯ ಮಾಜಿ ಅಧ್ಯ ಪೀರಸಾಬ್​ ಕೌತಾಳ ಅವರ ನೇತೃತ್ವದಲ್ಲಿ ಮಾ. 3 ರಂದು ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದ ಪರಮ ಭಕ್ತರಾದ ಪೀರಸಾಬ್​ ಕೌತಾಳ ದಂಪತಿಗಳು ಕಳೆದ 12 ವರ್ಷದಿಂದ ಪೂಜ್ಯ ಗುರುಗಳ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಕಳೆದ 7 ವರ್ಷಗಳಿಂದ ಗುರುಗಳ ಜನ್ಮದಿನಾಚರಣೆಯ ಅಂಗವಾಗಿ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವವನ್ನು ಉಚಿತವಾಗಿ ಮಾಡುತ್ತ ಬಂದಿದ್ದಾರೆ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸುವ ವಧುವಿಗೆ ತಾಳಿ, ಬಟ್ಟೆ, ಕಾಲುಂಗುರ ಮತ್ತು ವರನಿಗೆ ಬಟ್ಟೆಗಳನ್ನು ನೀಡಲಾಗುವುದು. ಅಂದು ಬೆಳಗ್ಗೆ ಕುಂಭೋತ್ಸವ, ಧರ್ಮಸಭೆ ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗುವದು. ಇದೇ ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಂಗೀತಗಾರರಾದ ಸದಾಶಿವ ಪಾಟೀಲ ಅವರಿಗೆ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರಿನಲ್ಲಿ ನಗದು ಸಹಿತ ಪ್ರಶಸ್ತಿ ನೀಡಲಾಗುವುದು. ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಕೆ.ಎಚ್​.ಪಾಟೀಲ ಅಭಿಮಾನಿ ಬಳಗದ ಅಧ್ಯ ಪೀರಸಾಬ್​ ಕೌತಾಳ ಮಾತನಾಡಿ, ಪಂ. ಪುಟ್ಟರಾಜ ಗವಾಯಿಗಳವರ ಜಯಂತಿ ದಿನದಂದು ಮದುವೆಯಾಗುವುದು ಪೂರ್ವಜನ್ಮದ ಪುಣ್ಯ. ಕಳೆದ 7 ವರ್ಷಗಳಿಂದ ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಮಾ. 2 ರಂದು ಸಂಜೆ ರಸಮಂಜರಿ ಕಾರ್ಯಕ್ರಮ ಮತ್ತು ಮಾ. 3 ರಂದು 1012 ಕುಂಭಮೇಳದ ಮೆರವಣಿಗೆ ನಡೆಯಲಿದೆ. ಮಾ. 3 ರಂದು ನಡೆಯುವ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧುವರರು ಇದೇ ೆ. 25 ರ ಒಳಗಾಗಿ ಮಠದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ಮಾಹಿತಿ ಮಠದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರಿಗಳು ಹೆಡಿಗ್ಗೊಂಡ, ಸಹ ವ್ಯವಸ್ಥಾಪಕರಾದ ಶರಣಯ್ಯ ಹಿಡ್ಕಿಮಠ ಅವರನ್ನು ಸಂಪಕಿರ್ಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿ.ಸಿ.ಹಿರೇಮಠ, ಆನಂದ ಸಾಲಿಗ್ರಾಮ, ಮಂಜುನಾಥ ಮುಳಗುಂದ, ವಿನೋದ ಶಿದ್ಲಿಂಗ ಸೇರಿದಂತೆ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net