ಓದು, ಹವ್ಯಾಸ, ಭಾಷಾ ಪ್ರಾವಿಣ್ಯತೆ ಬೆಳೆಸಲು ಮಕ್ಕಳಿಗೆ ಸಾಹಿತ್ಯದ ಪರಿಚಯ ಅಗತ್ಯ: ಶಂಕರ ಹಲಗತ್ತಿ

ಗದಗ ನಗರದ ವಿಜಯಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶಂಕರ ಹಲಗತ್ತಿ ಉದ್ಘಾಟಿಸಿದರು. ಆರ್​. ಬುರಡಿ, ವಿವೇಕಾನಂದಗೌಡ ಪಾಟೀಲ, ತಯಬಅಲಿ ಹೊಂಬಳ, ನಯನಾ ಅಂಗಡಿ, ಗೌಡಪ್ಪ ಹುಲ್ಲೂರು, ಬಿ. ಎಂ. ಮುಂದಿನಮನಿ, ಆರ್​.ವಿ. ಶೆಟ್ಟಪ್ಪನ್ನವರ, ಕೆ. ಎಚ್​. ಬೇಲೂರು, ಅನ್ನದಾನಿ ಹಿರೇಮಠ, ಬಿ.ಜಿ. ಪಾಟೀಲ ಇತರರು ಇದ್ದರು.
ಗದಗ ನಗರದ ವಿಜಯಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶಂಕರ ಹಲಗತ್ತಿ ಉದ್ಘಾಟಿಸಿದರು. ಆರ್​. ಬುರಡಿ, ವಿವೇಕಾನಂದಗೌಡ ಪಾಟೀಲ, ತಯಬಅಲಿ ಹೊಂಬಳ, ನಯನಾ ಅಂಗಡಿ, ಗೌಡಪ್ಪ ಹುಲ್ಲೂರು, ಬಿ. ಎಂ. ಮುಂದಿನಮನಿ, ಆರ್​.ವಿ. ಶೆಟ್ಟಪ್ಪನ್ನವರ, ಕೆ. ಎಚ್​. ಬೇಲೂರು, ಅನ್ನದಾನಿ ಹಿರೇಮಠ, ಬಿ.ಜಿ. ಪಾಟೀಲ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳಲ್ಲಿ ಓದು ಹವ್ಯಾಸ, ಭಾಷಾ ಪ್ರಾವಿಣ್ಯತೆ ಹಾಗೂ ಸೃಜನಶೀಲ ಚಿಂತನೆ ಬೆಳೆಸಲು ಮಕ್ಕಳ ಸಾಹಿತ್ಯ ಸಮ್ಮೇಳನ ಇಂದಿನ ದಿನಗಳಲ್ಲಿ ಅವಶ್ಯಕ ಎಂದು ಗುಬ್ಬಚ್ಚಿಗೂಡು ಮಕ್ಕಳ ಪತ್ರಿಕೆ ಪ್ರಧಾನ ಸಂಪಾದಕ ಶಂಕರ ಹಲಗತ್ತಿ ಹೇಳಿದರು.
ನಗರದ ವಿಜಯ ಕಲಾ ಮಂದಿರದ ದುರ್ಗಸಿಂಹ ವೇದಿಕೆಯಲ್ಲಿ ಶನಿವಾರ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಡಿಜಿಟಲ್​ ಯುಗದಲ್ಲಿ ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಮೊಬೈಲ್​, ಟಿವಿ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳು ಸಾಹಿತ್ಯದಿಂದ ದೂರವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಥೆ, ಕವನ, ನೀತಿಕಥೆ ಹಾಗೂ ಜನಪದ ಸಾಹಿತ್ಯದ ಪರಿಚಯ ಮಾಡಿಕೊಡುವುದು ಅತ್ಯಗತ್ಯವಿದೆ. ಮಕ್ಕಳ ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ. ಅದು ಮಕ್ಕಳ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದೆ. ಉತ್ತಮ ಸಾಹಿತ್ಯ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕಾರ, ಕಲ್ಪನಾ ಶಕ್ತಿ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಸುತ್ತದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಮಾತನಾಡಿದ ಡಿಡಿಪಿಐ ಆರ್​.ಎಸ್​. ಬುರಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಶಾಲಾ ಮಟ್ಟದಲ್ಲೇ ಗ್ರಂಥಾಲಯ ಬಳಕೆಯನ್ನು ಹೆಚ್ಚಿಸಬೇಕು. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ಸಾಹಿತ್ಯ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರು ಮಕ್ಕಳಿಗೆ ಮೊಬೈಲ್​ ಕೊಡುವ ಬದಲು ಪುಸ್ತಕ ಕೊಡುವ ಸಂಸತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಸಾಪ ಅಧ್ಯಕ್ಷ ವಿವೇಕಾನಮದಗೌಡ ಪಾಟೀಲ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನವು ಮಕ್ಕಳಲ್ಲಿ ಸಾಹಿತ್ಯ ಪ್ರೀತಿ, ಓದು ಹವ್ಯಾಸ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿದೆ. ಮಕ್ಕಳ ಪ್ರತಿಭೆಗೆ ಹೊಸ ಪ್ರೇರಣೆ ನೀಡಿದ ಕಾರ್ಯಕ್ರಮವಾಗಿ ಗಮನ ಸೆಳೆದಿದೆ. ಮಕ್ಕಳ ಸಾಹಿತ್ಯ ಸಮ್ಮೇಳನವು ಸಂಭ್ರಮ ಮತ್ತು ಸಾಂಸತಿಕ ವೈಭವದ ತವರು ಮನೆ ಆಗಿದೆ. ಸಮ್ಮೇಳನ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು. ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಪ್ರಕಾಶನ ಸಂಸ್ಥೆಗಳು ಮಕ್ಕಳ ಕಥೆ ಪುಸ್ತಕ, ಕವನ ಸಂಕಲನ, ವಿಜ್ಞಾನ ಸಾಹಿತ್ಯ, ಚುಟುಕು ಕಥೆಗಳು ಹಾಗೂ ಜೀವನ ಮೌಲ್ಯ ಸಾರುವ ಪುಸ್ತಕಗಳನ್ನು ಪ್ರದಶಿರ್ಸಲಾಯಿತು. ವಿವಿಧ ಶಾಲೆಗಳ ನೂರಾರು ವಿದ್ಯಾಥಿರ್ಗಳು, ಶಿಕ್ಷಕರು, ಸಾಹಿತಿಗಳು,ಪೋಷಕರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಕವನ ವಾಚನ, ಕಥೆ ಹೇಳುವಿಕೆ, ಚಿತ್ರಕಲೆ, ಕರಕುಶಲ, ಭಾಷಾಆಟ, ಕಥೆ ಬರೆಯುವುದು, ಪ್ರಬಂಧ ಸ್ಪರ್ಧೆ ಸೇರಿದಂದ ವಿವಿಧ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮ, ಚಟುವಟಿಕೆಗಳು ಜರುಗಿದವು.
ಸಮ್ಮೇಳನಾಧ್ಯೆ ತಯಬಅಲಿ ಹೊಂಬಳ, ನಯನಾ ಅಂಗಡಿ, ಗೌಡಪ್ಪ ಹುಲ್ಲೂರು, ಬಿ. ಎಂ. ಮುಂದಿನಮನಿ, ಆರ್​.ವಿ. ಶೆಟ್ಟಪ್ಪನ್ನವರ, ಕೆ. ಎಚ್​. ಬೇಲೂರು, ಅನ್ನದಾನಿ ಹಿರೇಮಠ, ಬಿ.ಜಿ. ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net