ಕಾನೂನು ಕೇವಲ ವೃತ್ತಿಯಲ್ಲ. ಸಮಾಜದ ಚೌಕಟ್ಟು: ಸವಿತಾ

  ಗದಗ ಎಸ್​.ಎ. ಮಾನ್ವಿ ಕಾನೂನು ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಥಿರ್ಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಸವಿತಾ ಶಗ್ಲಿ ಮಾತನಾಡಿದರು. ಬಿ. ಜಿ. ಶೆಲ್ಲಿಕೇರಿ, ಡಾ. ಸಂಜೀವ ಹುಲ್ಲೂರು, ಡಾ. ವಿಜಯ ಮುರದಂಡೆ, ಡಾ. ಜ್ಯೋತಿ ಸಿ.ವಿ., ಡಾ. ಶ್ರೀನಿವಾಸ ಪಾಲಕೊಂಡ, ಡಾ. ಸಿ. ಬಿ. ರಣಗಟ್ಟಿಮಠ ಸೇರಿದಂತೆ ವಿದ್ಯಾಥಿರ್ಗಳು ಇದ್ದರು.
ಗದಗ ಎಸ್​.ಎ. ಮಾನ್ವಿ ಕಾನೂನು ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾಥಿರ್ಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಸವಿತಾ ಶಗ್ಲಿ ಮಾತನಾಡಿದರು. ಬಿ. ಜಿ. ಶೆಲ್ಲಿಕೇರಿ, ಡಾ. ಸಂಜೀವ ಹುಲ್ಲೂರು, ಡಾ. ವಿಜಯ ಮುರದಂಡೆ, ಡಾ. ಜ್ಯೋತಿ ಸಿ.ವಿ., ಡಾ. ಶ್ರೀನಿವಾಸ ಪಾಲಕೊಂಡ, ಡಾ. ಸಿ. ಬಿ. ರಣಗಟ್ಟಿಮಠ ಸೇರಿದಂತೆ ವಿದ್ಯಾಥಿರ್ಗಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಕಾನೂನು ಎನ್ನುವುದು ಕೇವಲ ಉದ್ಯೋಗ ಅಥವಾ ಹಣ ಗಳಿಸುವ ಸಾಧನವಲ್ಲ.  ಅದು ಸಮಾಜವನ್ನು ಒಗ್ಗೂಡಿಸಿ ನ್ಯಾಯ, ಸಮಾನತೆ ಮತ್ತು ಶಾಂತಿಯನ್ನು ಕಾಪಾಡುವ ಪ್ರಮುಖ ಚೌಕಟ್ಟಾಗಿದೆ ಎಂದು ಗದಗ ಪಬ್ಲಿಕ್​ ಪ್ರಾಸಿಕ್ಯೂಟರ್​ ಸವಿತಾ ಶಿಗ್ಲಿ ಹೇಳಿದರು. 
ನಗರದ ಕೆಎಲ್​ಇ ಸಂಸ್ಥೆಯ ಎಸ್​ಎ ಮಾನ್ವಿ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಲ್​ಎಲ್​ಬಿ ಅಂತಿಮ ವರ್ಷದ ವಿದ್ಯಾಥಿರ್ಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನೀವು ಈ ಜಗತ್ತಿಗೆ ಕಾಲಿಡುತ್ತಿದ್ದಂತೆ, ನಿಮ್ಮ ಕೌಶಲ್ಯಗಳು ಧ್ವನಿ ಇಲ್ಲದವರಿಗೆ ಧ್ವನಿ ನೀಡುತ್ತವೆ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು. ಕಾನೂನು ವೃತ್ತಿಯು ಕೇವಲ ವೈಯಕ್ತಿಕ ಯಶಸ್ಸಿಗೆ ಸೀಮಿತವಾಗದೆ, ನ್ಯಾಯವನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿದೆ. ಕಾನೂನು ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ನೀಡಬಹುದಾಗಿದೆ. ಕೆಲವರು ಕಾರ್ಪರೇಟ್​ ಸಂಸ್ಥೆಗಳಲ್ಲಿ ಒಪ್ಪಂದಗಳನ್ನು ರೂಪಿಸುವ ಮೂಲಕ ವ್ಯವಹಾರಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದರೆ, ಇನ್ನೂ ಕೆಲವರು ಜಿಲ್ಲಾ ಮತ್ತು ಉನ್ನತ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ಮತ್ತೊಬ್ಬರು ಸಾರ್ವಜನಿಕ ಹಿತಾಸಕ್ತಿ ಅಜಿರ್ಗಳು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಳಲ್ಲಿ ತೊಡಗುವ ಮೂಲಕ ಸಮಾಜದ ಅಸಹಾಯಕರ ಪರ ಧ್ವನಿಯಾಗುತ್ತಾರೆ ಎಂದರು.
ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್​ ಸದಸ್ಯೆ ಪದ್ಮಾವತಿ ಮಾನೆ ಮಾತನಾಡಿ, ತಜ್ಞರ ಪ್ರಕಾರ ವಕೀಲರ ಪ್ರಮುಖ ಕರ್ತವ್ಯವೆಂದರೆ ಕಾನೂನು ಮತ್ತು ನ್ಯಾಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು. ಕಾನೂನು ಪುಸ್ತಕಗಳಲ್ಲಿ ಬರೆದಿರುವ ನಿಯಮಗಳು ಮತ್ತು ಸಾಮಾನ್ಯ ನಾಗರಿಕರು ಅನುಭವಿಸುವ ವಾಸ್ತವ ಜೀವನದ ಸಮಸ್ಯೆಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವುದು ವಕೀಲರ ಜವಾಬ್ದಾರಿ ಆಗಿದೆ. ಈ ಕಾರಣದಿಂದಲೇ ಕಾನೂನು ವೃತ್ತಿಗೆ ಸಮಾಜದಲ್ಲಿ ವಿಶೇಷ ಗೌರವ ಮತ್ತು ಮಹತ್ವವಿದೆ. ಆಧುನಿಕ ಯುಗದಲ್ಲಿ ಕಾನೂನು ಕ್ಷೇತ್ರವು ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನದ ಬೆಳವಣಿಗೆ, ಕೃತಕ ಬುದ್ಧಿಮತ್ತೆ, ಸೈಬರ್​ ಅಪರಾಧಗಳು, ಡಿಜಿಟಲ್​ ವ್ಯವಹಾರಗಳು ಹಾಗೂ ಹೊಸ ಸಾಮಾಜಿಕ ಮೌಲ್ಯಗಳು ಕಾನೂನು ವ್ಯವಸ್ಥೆಯ ಮೇಲೆ ಮಹತ್ತರ ಪರಿಣಾಮ ಬೀರುತ್ತಿವೆ. ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ, ಡೇಟಾ ಗೌಪ್ಯತೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಮಾನವ ಹಕ್ಕುಗಳಂತಹ ವಿಷಯಗಳು ಹೊಸ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದರು.
ಸ್ಥಳಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಸ್​.ಎ.ಮಾನ್ವಿ ಮಾತನಾಡಿ, ಕಾನೂನು ವಿದ್ಯಾಥಿರ್ಗಳು ಮತ್ತು ವಕೀಲರು ನಿರಂತರ ಅಧ್ಯಯನದ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ತರಗತಿಯಲ್ಲಿ ಕಲಿತದ್ದು ಕೇವಲ ಅಡಿಪಾಯ ಮಾತ್ರ. ವೃತ್ತೀಜಿವನದಲ್ಲಿ ಯಶಸ್ಸು ಸಾಧಿಸಲು ನಿರಂತರವಾಗಿ ಹೊಸ ಕಾನೂನುಗಳು, ತೀರ್ಪುಗಳು ಮತ್ತು ಸಾಮಾಜಿಕ ಬದಲಾವಣೆಗಳನ್ನು ನಿರಂತರ ಅಧ್ಯಯನ ಮಾಡಬೇಕು. ಜೀವಮಾನವಿಡೀ ವಿದ್ಯಾಥಿರ್ ಆಗಿರುವ ಮನೋಭಾವವೇ ಉತ್ತಮ ವಕೀಲರನ್ನು ರೂಪಿಸುತ್ತದೆ. ಕಾನೂನು ವೃತ್ತಿಯು ಸವಾಲುಗಳಿಂದ ಕೂಡಿದ್ದರೂ, ಸಮಾಜದ ಮೇಲೆ ಪರಿಣಾಮ ಬೀರುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ. ನ್ಯಾಯ, ನೈತಿಕತೆ ಮತ್ತು ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುವ ಯುವ ವಕೀಲರು ಭವಿಷ್ಯದ ನ್ಯಾಯಸಮ್ಮತ ಮತ್ತು ಸಮಾನತೆಯ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದರು. 
ಬಿ. ಜಿ. ಶೆಲ್ಲಿಕೇರಿ, ಡಾ. ಸಂಜೀವ ಹುಲ್ಲೂರು, ಡಾ. ವಿಜಯ ಮುರದಂಡೆ, ಡಾ. ಜ್ಯೋತಿ ಸಿ.ವಿ., ಡಾ. ಶ್ರೀನಿವಾಸ ಪಾಲಕೊಂಡ, ಡಾ. ಸಿ. ಬಿ. ರಣಗಟ್ಟಿಮಠ ಸೇರಿದಂತೆ ವಿದ್ಯಾಥಿರ್ಗಳು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net