ಗಣರಾಜ್ಯೋತ್ಸವ ಮೊದಲು ಸ್ವಾಧಿನ ಭೂಮಿ ಖರೀದಿ

ಗದಗ ಜಿಲ್ಲಾಡಳಿತ ಭವನದಲ್ಲಿ ಲಕ್ಕುಂಡಿ ಕುರಿತು ಎಚ್​.ಕೆ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಸಿ. ಎನ್​. ಶ್ರೀಧರ, ಡಾ. ಎ. ದೇವರಾಜು, ಡಾ. ಶೈಜೇಶ್ವರ, ಸ್ಮಿತಾ ರೆಡ್ಡಿ, ಶರಣು ಗೋಗೇರಿ, ಕೊಟ್ರೇಶ ವಿಭೂತಿ, ಸಿದ್ದು ಪಾಟೀಲ ಇತರರು ಇದ್ದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಲಕ್ಕುಂಡಿ ಕುರಿತು ಎಚ್​.ಕೆ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಸಿ. ಎನ್​. ಶ್ರೀಧರ, ಡಾ. ಎ. ದೇವರಾಜು, ಡಾ. ಶೈಜೇಶ್ವರ, ಸ್ಮಿತಾ ರೆಡ್ಡಿ, ಶರಣು ಗೋಗೇರಿ, ಕೊಟ್ರೇಶ ವಿಭೂತಿ, ಸಿದ್ದು ಪಾಟೀಲ ಇತರರು ಇದ್ದರು.
Published on
ನಿಧಿ ಹಸ್ತಾಂತರಿಸಿದ ಕುಟುಂಬಕ್ಕೆ ಮೊತ್ತ ನೀಡುವ ಬಗ್ಗೆ ಜಿಲ್ಲಾಡಳಿತದಿಂದ ವರದಿ ಸಲ್ಲಿಸಲು ಸೂಚನೆ
ವಿಜಯವಾಣಿ ಸುದ್ದಿಜಾಲ ಗದಗ
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮೂರು ಎಕರೆ ಜಮೀನು ಖರೀದಿ ಮಾಡಲು ಅನುದಾನ ಬಿಡುಗಡೆ ಆಗಿದೆ. ಗಣರಾಜ್ಯೋತ್ಸವ ಮೊದಲು ಭೂಮಿ ಖರೀದಿ ಪ್ರಕ್ರಿಯೆ ಮುಗಿಸುವಂತೆ ಲಕ್ಕುಂಡಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಬಜೆಟ್​ ನಲ್ಲಿ ಬಯಲು ಪ್ರಾಚ್ಯಾವಶೇಷ ವಸ್ತು ಸಂಗ್ರಹಾಲಯ ನಿಮಿರ್ಸುವ ಕುರಿತು ಘೋಷಣೇ ಮಾಡಲಾಗಿತ್ತು. ಅದರಂತೆ ಯೋಜನೆ ಸಾಕಾರಗೊಂಡಿದೆ. ಮುಂದುವರಿದು ಲಕ್ಕುಂಡಿಯಲ್ಲಿ ಈಗಾಗಲೇ 16 ದೇವಾಲಯಗಳನ್ನು ಸಂರಕ್ಷಿತ ದೇವಾಲಯ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇನ್ನೂ 8 ದೇವಾಲಯಗಳನ್ನು ಸಂರಕ್ಷಿತ ದೇವಾಲಯ ಎಂದು ಘೋಷಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ೆಬ್ರುವರಿ ತಿಂಗಳ ಒಳಗಾಗಿ ಅಂತಿಮ ಘೋಷಣೆ ನಿರೀಕ್ಷೆ ಇದೆ ಎಂದರು.
ಒಟ್ಟು 24 ದೇವಾಲಯಗಳ ಸಂಕೀರ್ಣವನ್ನು ಅಭಿವೃದ್ಧಿ ಗೊಳಿಸಲು ರಾಜ್ಯ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲು ಲಕ್ಕುಂಡಿ ಪ್ರಾಧಿಕಾರಕ್ಕೆ ಒಂದು ತಿಂಗಳು ಗಡವು ನೀಡಲಾಗಿದೆ. ದೇವಾಲಯಗಳ ಜೀಣೋರ್ದ್ಧಾರಕ್ಕೆ 10 ಕೋಟಿ ಬಿಡುಗಡೆ ಆಗಿದ್ದು, ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಕಾರ್ಯಾರಂಭ ಆಗುವುದು ಎಂದರು.
ಲಕ್ಕುಂಡಿಯಲ್ಲಿ ಹಲವು ದೇವಸ್ಥಾನಗಳು ವಸತಿ ಮತ್ತು ಇತರೆ ಕಾರಣದಿಂದ ಬೆಳಕಿಗೆ ಬಂದಿಲ್ಲ. ಕೆಲವರು ಮನೆ ಮಾಡಿಕೊಂಡಿದ್ದಾರೆ. ಅಂತವುಗಳನ್ನು ತೆರವುಗೊಳಿಸಿ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಮಾರ್ಚ ಅಂತ್ಯದೊಳಗೆ ಅವರನ್ನು ಮನವೊಲಿಸಿ ಈ ಪ್ರಕ್ರಿಯೆ ರ್ಪೂಣಗೊಳಿಸಲಾಗುವುದ. ಇನ್ನೂ 500 ಪ್ರಾಚ್ಯಾವಶೇಷ ಗಳು ಲಕ್ಕುಂಡಿ ಗ್ರಾಮದಲ್ಲಿ ಇವೆ. ಅವುಗಳ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.
ಕುಟುಂಬಕ್ಕೆ ಪರಿಹಾರ:
ನಿಧಿ ಹಸ್ತಾಂತರ ಮಾಡಿದ ಕುಟುಂಬಕ್ಕೆ ಸರ್ಕಾರದಿಂದ ಏನೆಲ್ಲ ಪರಿಹಾರ, ಬಹುಮಾನ ನೀಡಬಹುದು ಎಂದು ಸಭೆಯಲ್ಲಿ ಚಚಿರ್ಸಲಾಯಿತು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಕಾನೂನು ಇಲಾಖೆ ವರದಿ ಆಧರಿಸಿ ಸೂಕ್ತ ಪರಿಹಾರ ನೀಡಲಾಗುವುದು. ಸಿಕ್ಕ ನಿಧಿಯು ಯಾವ ಕಾಲಕ್ಕೆ ಸೇರಿದ್ದು ಎಂದು ಕಂಡು ಹಿಡಿಯಲು ಒಂದು ತಾಂತ್ರಿಕ ಸಮಿತಿ ರಚನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ತದ ನಂತರ ನಿಧಿಯ ಕಾಲಘಟ್ಟ ಆಧರಿಸಿ ಮತ್ತು ಕಾನೂನಿನ ಅಡಿಯಲ್ಲಿ ಪರಮಾಶಿರ್ಸಿ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಮೊತ್ತ ನಿರ್ಧರಿಸಲಾಗುವುದು. ಸರ್ಕಾರದಿಂದ ಕುಟುಂಬಕ್ಕೆ ಸಿಗಬೇಕಾದ ಮೊತ್ತ ಹೊರತು ಪಡಿಸಿ ಜ.26 ರಂದು ಕುಟುಂಬಕ್ಕೆ ಪ್ರೋತ್ಸಾಹ ನೀಡಲಾಗುವುದು. ಪ್ರತ್ಯೇಖ ನಿವೇಶನ ನೀಡಲಾಗುವುದು. ಮನೆ ನಿರ್ಮಾಣ ಮಾಡಿಕೊಡುವ ಕುರಿತು ಸಿಎಂ ಜತೆ ಚಚಿರ್ಸಲಾಗಿದೆ. ಉದ್ಯೋಗ ನಿಡುವ ಕುರಿತು ಜಿಲ್ಲಾಧಿಕಾರಿಗಳ ಜತೆ ಚಚಿರ್ಸಲಾಗಿದೆ. ಕುಟುಂಬಕ್ಕೆ ಎಲ್ಲ ಸಹಕಾರ ನೀಡಲಾವುದು ಎಂದು ಎಚ್​.ಕೆ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ, ಮೈಸೂರು ವಲಯ ಆಯುಕ್ತ ಡಾ. ಎ. ದೇವರಾಜು, ಹಂಪಿ ವಲಯ ನಿರ್ದೇಶಕ ಡಾ. ಶೈಜೇಶ್ವರ, ಉಪ ನಿರ್ದೇಶಕಿ ಸ್ಮಿತಾ ರೆಡ್ಡಿ, ಶರಣು ಗೋಗೇರಿ, ಕೊಟ್ರೇಶ ವಿಭೂತಿ, ಸಿದ್ದು ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net