ಇತಿಹಾಸ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಮತ್ತು ಕಾರ್ಯಕ್ರಮದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಮಾತನಾಡಿ, ಕರ್ನಾಟಕದ ಸಾಂಸತಿಕ ಕೇಂದ್ರಗಳಲ್ಲಿ ಲಕ್ಕುಂಡಿ ಒಂದಾಗಿದೆ. ಇದು ಬೆಳವಲ, ಪುಲಿಗೆರೆ, ಮಾಸವಾಡಿ ನಾಡುಗಳಲ್ಲಿ ಬಹುತ್ವ ಸಂಸತಿಯ ಸಂಗಮವಾಗಿದ್ದ ತಿರುಳ್ಗನ್ನಡನಾಡಿನ ಹಿರಿಮೆಯಾಗಿತ್ತು. ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ಕಳಚೂರಿಗಳು, ಹೊಯ್ಸಳರು, ವಿಜಯನಗರ ಅರಸರ ಕಾಲದಲ್ಲಿ ಇಲ್ಲಿ ನಿರ್ಮಾಣವಾಗಿರುವ ದೇವಾಲಯಗಳು, ಬಸದಿಗಳು, ಬಾವಿಗಳು, ಪ್ರತಿಷ್ಠಾಪಿತ ಶಿಲ್ಪಗಳು ಕರ್ನಾಟಕದ ಸಾಂಸತಿಕ ಮತ್ತು ವಾಸ್ತುಶಿಲ್ಪ ಕಲೆಗಳ ರತ್ನಗಳಾಗಿವೆ. ಲಕ್ಕುಂಡಿಯು ವಿಶ್ವ ಪಾರಂಪರಿಕ ಸ್ಥಾನಮಾನ ಪಡೆದು ಕರ್ನಾಟಕದ ಶ್ರೇಷ್ಠ ಪ್ರವಾಸೋದ್ಯಮ ಕೇಂದ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಲಕ್ಕುಂಡಿಯ ಚರಿತ್ರೆ, ಶಾಸನಗಳು, ದೇವಾಲಯಗಳು, ಬಸದಿಗಳು, ಬಾವಿಗಳು, ಶಿಲ್ಪಗಳು, ಸ್ಮಾರಕಶಿಲ್ಪಗಳು, ಟಂಕಸಾಲೆ, ಸಂಸತಿ, ಧರ್ಮ, ಸಾಹಿತ್ಯ, ಸಮಾಜ, ಭೌಗೋಳಿಕ ಪರಿಸರ ಮುಂತಾದ ಸಾಂಸತಿಕ ಆಯಾಮಗಳನ್ನು ಕೂಲಂಕಷ ತಲಸ್ಪಶಿರ್ ವಸ್ತುನಿಷ್ಠವಾಗಿ ಅಧ್ಯಯನ ನಡೆಸಿ ಇದರ ಹಿರಿಮೆಯೆಡೆಗೆ ವಿಶ್ವಸಂಸ್ಥೆಯ ಸಾಂಸತಿಕ ಅಂಗ ಯುನೆಸ್ಕೋ ಸಂಸ್ಥೆಯ ಗಮನ ಸೆಳೆಯಬೇಕಿದೆ ಎಂದು ಹೇಳಿದರು.