ಜಿಲ್ಲೆಯಲ್ಲಿ KMF ​ನಿಂದ ಮೆಕ್ಕೆಜೋಳ ಖರೀದಿ

ಗದಗ
ಗದಗ
Published on
ಮೆಕ್ಕೆಜೋಳ: 16000 ಕ್ವಿಂಟಾಲ್​ ಖರೀದಿ
ಶಿವಾನಂದ ಹಿರೇಮಠ ಗದಗ
ಪ್ರಸಕ್ತ ಸಾಲಿನಲ್ಲಿ ಮೆಕ್ಕೆಜೊಳ ಬೆಳೆದ ರೈತರು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಜಿಲ್ಲೆಯಲ್ಲಿ ಸಾವಿರಾರು ಕ್ವಿಂಟಲ್​ ಮೆಕ್ಕೆಜೋಳ ಬೆಳೆದರೂ ಸಹ ಸೂಕ್ತ ಬೆಲೆ ಇಲ್ಲದೇ ರಾಶಿಯನ್ನು ಕಣದಲ್ಲಿಯೇ ಇಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ, ಶುಕ್ರವಾರ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಲಾಂತರ ರೂ. ಮೌಲ್ಯದ ಮೆಕ್ಕೆಜೋಳಕ್ಕೆ ದುಷ್ಕಮಿರ್ಧಗಳಿಂದ ಬೆಂಕಿ ಹಚ್ಚಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ರೈತರ ಈ ನೋವಿಗೆ ಸಹಕರಿಸಲೆಂದೇ ರಾಜ್ಯಾದ್ಯಂತ ಕೆಎಂಎ್​ ವತಿಯಿಂದ ಇದೇ ಮೊದಲ ಬಾರಿಗೆ ಖರೀದಿ ಕೇಂದ್ರ ಆರಂಭಿಸಿ ಮೆಕ್ಕೆಜೋಳ ಖರೀದಿಸಲಾಗುತ್ತಿದ್ದು, ರೈತರಿಗೆ ಸ್ವಲ್ಪ ನೆಮ್ಮದಿ ದೊರೆತಿದೆ.
ಧಾರವಾಡ ವಿಭಾಗದ ಕೆಎಂಎ್​ ವತಿಯಿಂದ ಜಿಲ್ಲೆಯಲ್ಲಿ 7 ಖರೀದಿ ಕೇಂದ್ರ ಆರಂಭಿಸಲಾಗಿದೆ. ಈ ವರೆಗೆ 2971 ರೈತರ ನೋಂದಣಿ ಮಾಡಿದ್ದು, 800 ರೈತರಿಂದ ತಲಾ 20 ಕ್ವಿಂಟಾಲ್​ ನಂತೆ 16000 ಕ್ವಿಂಟಾಲ್​ ಮೆಕ್ಕೆಜೊಳ ಖರೀದಿಸಲಾಗಿದೆ. ಬಾಕಿ ರೈತರಿಂದ ಖರೀದಿ ಪ್ರಕ್ರಿಯೆ ಈ ತಿಂಗಳಾಂತ್ಯದಲ್ಲಿ ರ್ಪೂಣಗೊಳ್ಳಲಿದೆ. ಗರಿಷ್ಠ 50 ಕ್ವಿಂಟಾಲ್​ ಖರೀದಿಯನ್ನು ಆಧ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಮೆಕ್ಕೆಜೋಳ ಖರೀದಿ ನೋಡಲ್​ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾಂದ್ಯತ ಖರೀದಿ:
ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಬೆಂಗಳೂರು ಗ್ರಾಮಾಂತರ ಪ್ರದೇಶದ ರಾಜಾನಕುಂಟೆ, ತುಮಕೂರು ಜಿಲ್ಲೆಯ ಗುಬ್ಬಿ, ಹಾಸನ ಹಾಗೂ ಧಾರವಾಡ ವಿಭಾಗೀಯ ಕೆಎಂಎ್​ ನಲ್ಲಿ ಮೆಕ್ಕೆಜೋಳ ಖರೀದಿ ಆರಂಭವಾಗಿದೆ. ಧಾರವಾಡ ಕೆಎಂಎ್​ ವ್ಯಾಪ್ತಿಯಲ್ಲಿ 14 ಜಿಲ್ಲೆಗಳಲ್ಲಿ 52 ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ನಡೆದಿದೆ. 14 ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ಶೇ. 80 ರಷ್ಟು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಶೇ. 20 ರಷ್ಟು ರೈತರ ನೋಂದಣಿ ಬಾಕಿ ಇದೆ. ಈ 14 ಜಿಲ್ಲೆಗಳಲ್ಲಿ 12000 ರೈತರು ಧಾರವಾಡ ಪಶು ಆಹಾರ ಟಕಕ್ಕೆ ಮೆಕ್ಕೆಜೋಳ ಮಾರಾಟ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 4500 ರೈತರಿಂದ 75000 ಕ್ವಿಂಟಾಲ್​ ಮೆಕ್ಕೆಜೋಳವನ್ನು ಕ್ವಿಂಟಾಲ್​ಗೆ ಬೆಂಬಲ ಬೆಲೆ 2400 ರೂ. ನಂತೆ ಪಶು ಆಹಾರ ಟಕಕ್ಕೆ ಖರೀದಿಸಲಾಗಿದೆ. ಇನ್ನೂ 8000 ರೈತರಿಂದ ಖರೀದಿಸುವ ಪ್ರಕ್ರಿಯೆ ಬಾಕಿ ಇದೆ.
ಮೊದಲು ಸಮಸ್ಯೆ ಇತ್ತು?
ಕಬ್ಬು, ಹೆಸರು ಜತೆಗೆ ಮೆಕ್ಕೆಜೋಳ ಬೆಳೆದ ರೈತರಿಗೆ ಈ ವರ್ಷ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. 15 ದಿನಗಳ ವರೆಗೆ ಲೆ$್ಮಶ್ವರದಲ್ಲಿ ಖರೀದಿ ಕೇಂದ್ರ ಆರಂಭಿಸಲು ಪ್ರತಿಭಟನೆ ನಡೆಸಿದರೂ ಸಹ ಮೆಕ್ಕೆಜೋಳ ಬೆಳೆದ ರೈತರಿಗೆ ಪರಿರ್ಪೂಣವಾಗಿ ಪರಿಹಾರ ಸಿಕ್ಕಿರಲಿಲ್ಲ. ರೈತರ ಪ್ರತಿಭಟನೆಗೆ ಮಣಿದು ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೂ ಸಹ ನೋಂದಣಿ ಪ್ರಕ್ರಿಯೆಯಲ್ಲಿ ಅನುಸರಿಸುವ ಮಿತಿಯಂದ ಜಿಲ್ಲೆಯ ರೈತರಿಗೆ ಬೆಂಬಲ ಬೆಲೆ ಖರೀದಿ ಅಡಿಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೆಕ್ಕೆಜೋಳ ಸಮಸ್ಯೆ ಎನ್ನುವುದು ಜಿಲ್ಲೆಯಲ್ಲಿ ಬಿಡಿಸಲಾಗದ ಕಗ್ಗಂಟಾಗಿ ಪರಿಗಣಿಸಿತ್ತು. ಆರಂಭದಲ್ಲಿ ಸರ್ಕಾರ ಪ್ರತಿ ರೈತರಿಂದ 5 ಕ್ವಿಂಟಾಲ ಮೆಕ್ಕೆಜೋಳ ಖರೀದಿ ಮಾಡಬೇಕೆಂದು ಮಿತಿಗೊಳಿಸಿ ಖರೀದಿ ಕೇಂದ್ರ ಆರಂಭಿಸಲು ಸೂಚಿಸಿತ್ತು. 5 ಕ್ವಿಂಟಾಲ್​ ಖರೀದಿ ಕಡಿಮೆ ಪ್ರಮಾಣದ್ದಾಗಿದೆ ಎಂದು ಮತ್ತೆ ರೈತರು ಪ್ರತಿಭಟನೆ ನಡೆಸಿದರು. ತದ ನಂತರ ಸರ್ಕಾರ 20 ಕ್ವಿಂಟಾಲ್​ ಖರೀದಿಸಬೇಕೆಂದು ಆದೇಶ ಮಾರ್ಪಾಡು ಮಾಡಿತು. ಆದರೆ, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಮೆಕ್ಕೆಜೋಳ ಬೆಳೆದ ಕಾರಣ ರೈತರ ಆಗ್ರಹಕ್ಕೆ ಮಣಿದ ಸರ್ಕಾರ ಪ್ರತಿ ರೈತರಿಗೆ 50 ಕ್ವಿಂಟಾಲ್​ ಮೆಕ್ಕೆಜೋಳ ಖರೀದಿಗೆ ಆದೇಶ ಮಾಡಿದೆ. ಇದರ ಅನ್ವಯ ಕೆಎಂಎ್​ ಮೊದಲು ರೈತರಿಂದ 20 ಕ್ವಿಂಟಾಲ್​ ಮೆಕ್ಕೆಜೋಳವನ್ನು ಆಧ್ಯತೆ ಮೇರೆಗೆ ಖರೀದಿಸುತ್ತಿದೆ.
1.44 ಲಕ್ಷ ಹೆಕ್ಟರ್​ ಮೆಕ್ಕೆಜೋಳ ಬಿತ್ತನೆ:
ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಲ್ಲಿ ಈಗ ಗದಗ ಜಿಲ್ಲೆವೂ ಒಂದಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಸುಮಾರು 1.44 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಹೆಕ್ಟೇರ್​ಗೆ 20 ರಿಂದ 40 ಕ್ವಿಂಟಾಲ್​ ಇಳುವರಿ ಬಂದಿದೆ. ಜಿಲ್ಲೆಯಲ್ಲಿ ಅಂದಾಜು 45 ಲಕ್ಷ ಕ್ವಿಂಟಾಲ್​ ಮೆಕ್ಕೆಜೋಳ ಇಳುವರಿ ಬಂದಿದೆ. ಒಟ್ಟು 90 ಸಾವಿರ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ.
ಕೋಟ:
ರಾಜ್ಯ ಸರ್ಕಾರ ಆದೇಶ ನೀಡಿದ ನಂತರ ಕೆಎಂಎ್​ ನಿಂದ ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ. ನಿರೀೆಗೂ ಮೀರಿ ರೈತರು ಮಾರಾಟ ಮಾಡುತ್ತಿದ್ದಾರೆ. ಹೊಸ ಆದೇಶದಂತೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಮೊದಲು 20 ಕ್ವಿಂಟಾಲ್​ ಖರೀದಿಗೆ ಆಧ್ಯತೆ ನೀಡಲಾಗುತ್ತಿದ್ದು, ನಂತರ 50 ಕ್ವಿಂಟಾಲ್​ ಖರೀದಿಗೆ ಆಧ್ಯತೆ ನೀಡಲಾಗುವುದು.
ಎಂ. ಗಂಗಪ್ಪ, ಉಪ ವಿಭಾಗಾಧಿಕಾರಿ ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net