ಜೆಟಿ ಮಹಾವಿದ್ಯಾಲಯದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನ
ಗದಗ ಕೆಎಲ್ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಸಮಮ್ಮೇಳವನ್ನು ಡಾ. ವಿಜಯಕುಮಾರ ಉದ್ಘಾಟಿಸಿದರು. ಪ್ರೊ. ಪಿ. ಜಿ. ಪಾಟೀಲ, ಪ್ರೊ. ಸೀತಾರಾಮ ಪವಾರ, ಪ್ರೊ ಜಿ. ವಿಶ್ವನಾಥ, ಪ್ರೊ. ಬಿ. ಆರ. ಚಿನಗುಂಡಿ, ಪ್ರೊ ಸ್ನೇಹಾ ಕೊಡಗುಳಿ, ಸಂಗೀತಾ ವಣಗೇರಿ, ಡಾ. ನಾಗರಾಜ ಬಳಿಗೇರ, ಡಾ. ನಾಗರಾಜ ಓಬ್ಬಯ್ಯ ಇತರರು ಇದ್ದರು.
ಸಾಹಿತ್ಯವು ಜನರ ನೈಜ ನಂಬಿಕೆಗಳು ಮತ್ತು ಸಂಸತಿಯನ್ನು ಪ್ರತಿಬಿಂಬಿಸುತ್ತದೆ: ಡಾ.ವೀರೇಂದ್ರ ಪಾಲ
ವಿಜಯವಾಣಿ ಸುದ್ದಿಜಾಲ ಗದಗ
ಸಮಕಾಲೀನ ಭಾರತೀಯ ಸಾಹಿತ್ಯವು ವೈವಿಧ್ಯಮಯವಾಗಿ ಬೆಳೆದಿದೆ. ಸಾಹಿತ್ಯವು ಭಾರತೀಯ ಜನರ ನೈಜ ನಂಬಿಕೆಗಳು ಮತ್ತು ಸಂಸತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹರಿಯಾಣ ರಾಝ್ಯದ ಕುರುೇತ್ರ ವಿಶ್ವ ವಿದ್ಯಾಲಯದ ಕುಲಸಚಿ ಡಾ. ವೀರೇಂದ್ರ ಪಾಲ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿನ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಮೇಲೆ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾವಹಿಸಿ ಮಾತನಾಡಿದರು. ಪಾಶ್ಚಿಮಾತ್ಯ ಕಣ್ಣುಗಳಿಂದ ನಮ್ಮ ಸಂಸತಿಯನ್ನು ನೋಡುತ್ತಿದ್ದೇವೆ ಎಂಬುದನ್ನು ವಿವರಿಸಿದ ಅವರುರು, ನಾವು ಗಂಗೆ, ಯಮುನೆಯನ್ನು ಪೂಜಿಸುತ್ತೇವೆ. ಆದರೆ ಅವುಗಳನ್ನು ಕಲುಷಿತ ಗೊಳಿಸಿದ್ದೇವೆ. ಆದರೆ ಮೇಘಾಲಯದ ಉಮ್ಂಗೋಟ್ ನದಿಯ ಸ್ವಚ್ಛತೆಯು ಅಲ್ಲಿನ ಬುಡಕಟ್ಟು ಜನರು ನಿಸರ್ಗವನ್ನು ಎಷ್ಟು ಪವಿತ್ರವಾಗಿ ಕಾಣುತ್ತಾರೆ ಎಂಬುದಕ್ಕೆ ಸಾಯಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹರಿಯಾಣ ರಾಜ್ಯದ ಗುರು ಜಂಬೇಶ್ವರ ವಿಶ್ವವಿದ್ಯಾಲಯದ ಕುಲಸಚಿ ಡಾ. ವಿಜಯಕುಮಾರ, ಸಾಹಿತ್ಯ ನಮ್ಮ ಬದುಕಿನ ವಿವಿಧ ಆಯಾಮಗಳನ್ನು ಒಳಗೊಂಡು ಜನರ ಮನಸು ಮತ್ತು ಬುದ್ದಿಯನ್ನು ಬೆಳಗುತ್ತದೆ. ಸಾಹಿತ್ಯದಲ್ಲಿ ಸುಂದರ ಬದುಕಿಗೆ ಬೇಕಾದ ರಾಶಿ ವಿಚಾರಗಳಿವೆ ಎಂದು ಹೇಳಿದರು.
ಚನೈನ ಮದ್ರಾಸ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಮಿಳು ಸೆಲ್ವಿ ಮಾತನಾಡಿ ಕರ್ನಾಟಕದಲ್ಲಿ ಕನ್ನಡವೇ ಮುಖ್ಯ. ವಿದ್ಯಾಥಿರ್ಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಬದುಕಿನಲ್ಲಿ ಹಲವು ವಿಷಯಗಳನ್ನು ನೋಡಿ ಕಲಿತರೆ ಕೆಲವನ್ನು ಶಾಸ್ತ್ರಗಳಿಂದ, ಕೆಲವು ವಿಚಾರಗಳನ್ನು ಸಜ್ಜನರಿಂದ ಕಲಿಯಬಹುದು. ವಿದ್ಯಾಥಿರ್ಗಳು ಕಲಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇತ್ತೀಚಿನ ಭಾರತೀಯ ಸಾಹಿತ್ಯದಲ್ಲಿ ಅನುವಾದವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇದರಿಂದ ನಮ್ಮ ದೇಶದ ಬೇರೆ ಬೇರೆ ಭಾಷೆಗಳಲ್ಲಿನ ಸಾಹಿತ್ಯ, ಸಂಸತಿಯನ್ನು ಪರಸ್ಪರ ಪರಿಚಯ ಮಾಡಿಕೊಳ್ಳಲು ನೆರವಾಗುತ್ತದೆ. ಭಾರತೀಯ ಸ್ತ್ರೀವಾದವು ಹೊಸ ರೂಪುರೇಷೆಗಳೊಂದಿಗೆ ಸ್ತ್ರೀಯರ ಬದುಕಿನಲ್ಲಿ ಆಮೂಗ್ರವಾದ ಬದಲಾವಣೆಯನ್ನು ಉಂಟುಮಾಡಿದೆ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ಸೀತಾರಾಮ ಪವಾರ ಮಾತನಾಡಿ ಸಾಹಿತ್ಯ ಮತ್ತು ಸಮಾಜದ ನಡುವಿನ ಸಂಬಂಧವನ್ನು ವಿವರಿಸಿ, ಸಾಹಿತ್ಯವು ಸಮಾಜದ ಕನ್ನಡಿ. ಗಿರೀಶ ಕಾರ್ನಾಡ ಅವರ ಕನ್ನಡ ನಾಟಕಗಳಾದ ನಾಗಮಂಡಲ, ತಲೆದಂಡ, ಬೆಂಕಿ ಮತ್ತು ಮಳೆ ಇವು ಹಿಂದಿ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡು ಭಾರತದಾದ್ಯಂತ ಪ್ರಸಿದ್ಧಿಯಾಗಿವೆ. ಇಂದಿನ ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆ ದೌಜನ್ಯಗಳನ್ನು ಕೊನೆಗಾಣಿಸಬೇಕು. ಸಾಮಾಜಿಕ ಜಾಗೃತಿ ಇರಬೇಕು ಎಂದರು.
ಅಧ್ಯತೆ ವಹಿಸಿದ್ದ ಜೆಟಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ. ಜಿ. ಪಾಟೀಲ ಮಾತನಾಡಿ ವಿಜ್ಞಾನವು ಮೆದುಳು ಮತ್ತು ಪರಮಾಣುಗಳ ಬಗ್ಗೆ ಮಾತನಾಡಿದರೆ, ಸಾಹಿತ್ಯವು ಹೃದಯದ ಭಾಷೆಯಾಗಿದೆ. ಇಂದಿನ ಸಾಹಿತ್ಯವು ಕೇವಲ ಕಲ್ಪನೆಯಾಗಿ ಉಳಿಯದೆ ಪರಿಸರ ಮತ್ತು ವಿಜ್ಞಾನದಂತಹ ವಾಸ್ತವಿಕ ವಿಷಯಗಳನ್ನು ಒಳಗೊಳ್ಳುತ್ತಿದೆ ಎಂದು ಹೇಳಿದರು. ಕುರುೇತ್ರ ಯುದ್ದದಲ್ಲಿ ಕೃಷ್ಣ ಹೇಳಿದ ಭಗವದ್ಗೀತೆಯನ್ನು ಅರ್ಜುನ ಕೇಳಿಸಿಕೊಂಡಂತೆ ತರಗತಿಯಲ್ಲಿ ವಿದ್ಯಾಥಿಗಳು ಅಧ್ಯಾಪಕರ ವಿಚಾರ ಮಂಡನೆಯನ್ನು ಕಿವಿಕೊಟ್ಟು ಆಲಿಸಬೇಕು. ಕೃಷ್ಣನಂತೆ ಅಧ್ಯಾಪಕರು, ಅರ್ಜುನನಂತೆ ನಮ್ಮ ವಿದ್ಯಾಥಿರ್ಗಳು ಆಸಕ್ತಿಯಿಂದ ಆಲಿಸುವಂತವರಾಗಬೇಕು ಎಂದರು.
ಸಮ್ಮೇಳನದಲ್ಲಿ ಇತರೆ ಮಹಾವಿದ್ಯಾಲಯದಿಂದ ಹಾಗು ರಾಜ್ಯದಿಂದ 40 ಕ್ಕೂ ಹೆಚ್ಚು ವಿದ್ಯಾಥಿರ್ಗಳು, ಸಂಶೋಧನಾ ವಿದ್ಯಾಥಿರ್ಗಳು, ಪ್ರಾಧ್ಯಾಪಕರು ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಪ್ರೊ ಜಿ. ವಿಶ್ವನಾಥ, ಪ್ರೊ. ಬಿ. ಆರ. ಚಿನಗುಂಡಿ, ಪ್ರೊ ಸ್ನೇಹಾ ಕೊಡಗುಳಿ, ಸಂಗೀತಾ ವಣಗೇರಿ, ಡಾ. ನಾಗರಾಜ ಬಳಿಗೇರ, ಡಾ. ನಾಗರಾಜ ಓಬ್ಬಯ್ಯ ಇತರರು ಇದ್ದರು.