ವಸಾಹತುಶಾಹಿತ್ವವು ಒಳಿತು ಕೆಡಕುಗಳ ಸಂತೆ : ಪ್ರೊ. ಕೆ. ವೆಂಕಟೇಶ

ಗದಗ
ಗದಗ
Published on
ವಸಾಹತುಶಾಹಿತ್ವವು ವಿಮೋಚನೆಯ ದಾರಿ :
ವಸಾಹತು ನೀತಿಯ ಒಳಿತನ್ನು ಗುಣಗಾಣಿಸುವ ಸಮೂಹವೂ ನಮ್ಮ ನಡುವೆ ಇರುವುದನ್ನು ನೆನಪಿಸಿದ ಪ್ರೊ. ಕೆ. ವೆಂಕಟೇಶ್ ಅವರು ಕುವೆಂಪುವಿನಂತಹ ಮಹಾನ್ ಲೇಖಕರು ‘ಬ್ರಿಟೀಷರು ಭಾರತಕ್ಕೆ ಪ್ರವೇಶಿಸದಿದ್ದರೆ ನಾನು ಧಣಿಗಳ ಮನೆಯ ಸಗಣಿ ಬಾಚುತ್ತಿದ್ದೆ’ ಎನ್ನುವ ಮಾತು ವಸಾಹತುಶಾಹಿ ಕಾಲದ ಬ್ರಿಟೀಶ್ ಶಿಕ್ಷಣ ವ್ಯವಸ್ಥೆಯು ಶೂದ್ರ ಮತ್ತು ತಳ ವರ್ಗ, ಸ್ತ್ರೀಯರ ಪಾಲಿಗೆ ಬಿಡುಗಡೆಯ ದಾರಿಯಾಗಿ ಕಂಡಿರುವುದನ್ನು ಸೂಚಿಸುತ್ತದೆ ಎಂದರು
(ಬಳ್ಳಾರಿಯಲ್ಲಿ ಬಹುಕಾಲ ಬ್ರಿಟೀಷ್ ಅಧಿಕಾರಿಯಾಗಿದ್ದ ಥಾಮಸ್ ಮನ್ರೋವನ್ನು ಇಂದಿಗೂ ಬಳ್ಳಾರಿಯ ಜನ ದೇವತಾ ಸ್ವರೂಪದಲ್ಲಿ ‘ಮನ್ರಪ್ಪ’ ‘ಮನ್ರಮ್ಮ’ ಎಂದು ಪೂಜಿಸುತ್ತಿರುವುದಲ್ಲದೇ ತಮ್ಮ ಮಕ್ಕಳಿಗೆ ಹೆಸರನ್ನಿಟ್ಟಿದ್ದಾರೆ. ಸುರಪುರದ ಮೆಡೋಸ್ ಟೇಲರ್, ಆದಿವಾಸಿಗಳ ಏಳಿಗೆಗೆ ದುಡಿದ ವಾಲ್ಟರ್ ಏಲಿಯನ್, ಕನ್ನಡಕ್ಕಾಗಿ ಶ್ರಮಿಸಿದ ಕಿಟಲ್, ರೈಸ್ ಮುಂತಾದ ಬ್ರಿಟೀಷ್ ಅಧಿಕಾರಿಗಳು ಇಂದಿಗೂ ಜನಸ್ಮೃತಿಯಲ್ಲಿರುವುದು ವಿಶೇಷ.
- ಪ್ರೊ. ಕೆ. ವೆಂಕಟೇಶ್, ಪ್ರಾಧ್ಯಾಪಕರು, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು
(ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತಲ್ಪಡುವ ಧರ್ಮ-ದೇಶ, ಜನಾಂಗಗಳ ಕುರಿತಾದ ಹಸಿಸುಳ್ಳುಗಳನ್ನು, ಉನ್ಮಾದವನ್ನು ಮೀರುವ ಅಗತ್ಯವಿದೆ. ಕುವೆಂಪು ಹೇಳುವ ಹಾಗೆ ವಿದ್ಯಾರ್ಥಿಗಳು ಬತ್ತ ಬೆಳೆಯುವ ಗದ್ದೆಗಳಾಗಬೇಕೆ ಹೊರತು ಬತ್ತ ತುಂಬುವ ಗೋಣಿಚೀಲಗಳಾಗಬಾರದು
- ಶ್ರೀಮತಿ. ರಜನಿ ಪಾಟೀಲ, ಅಧ್ಯಕ್ಷರು, ಸ್ಥಳೀಯ ಆಡಳಿತ ಮಂಡಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net