ಶರಣ ಮಾರ್ಗ ಜಗತ್ತಿಗೆ ಮಾದರಿ: ಜಿ. ಪಿ. ಬಸವರಾಜು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಚನ ಪಿತಾಮಹ .ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮ ಜರುಗಿತು. ಜಿ.ಎಸ್​.ಬಸವರಾಜು, ವಿವೇಕಾನಂದಗೌಡ ಪಾಟೀಲ, ಕೆ.ಎಚ್​.ಬೇಲೂರ, ಅನ್ನದಾನಿ ಹಿರೇಮಠ ಹಲವರು ಇದ್ದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಚನ ಪಿತಾಮಹ .ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮ ಜರುಗಿತು. ಜಿ.ಎಸ್​.ಬಸವರಾಜು, ವಿವೇಕಾನಂದಗೌಡ ಪಾಟೀಲ, ಕೆ.ಎಚ್​.ಬೇಲೂರ, ಅನ್ನದಾನಿ ಹಿರೇಮಠ ಹಲವರು ಇದ್ದರು
Published on
ವಿಜಯವಾಣಿ ಸುದ್ದಿಜಾಲ ಗದಗ
ಸಮಕಾಲೀನ ಸಂದರ್ಭದಲ್ಲಿದ್ದ ಸಾಮಾಜಿಕ, ಧಾಮಿರ್ಕ, ಆಥಿರ್ಕ ಅಸಮಾನತೆಗಳನ್ನು ತೊಡೆದು ಹಾಕಿ ಸಮಾನ ಸಮಾಜವನ್ನು ನಿಮಿರ್ಸುವ ಹಿನ್ನೆಲೆಯಲ್ಲಿ ಬಸವಾದಿ ಶರಣರು ಶ್ರಮಿಸಿದರು. ಆ ಹಿನ್ನೆಲೆಯಲ್ಲಿ ಅವರು ರೂಪಿಸಿದ ಮತ್ತು ಅನುಸರಿಸಿದ ಮಾರ್ಗ ಜಗತ್ತಿನ ಎಲ್ಲ ಜನರಿಗೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಜರುಗಿದ ವಚನ ಪಿತಾಮಹ .ಗು.ಹಳಕಟ್ಟಿ ಅವರ ಜಯಂತಿ ಅಂಗವಾಗಿ ಜರುಗಿದ ಉಪನ್ಯಾಸದಲ್ಲಿ ಮಾತನಾಡಿ ವಚನ ಮಾದರಿಯ ಪ್ರಯತ್ನವನ್ನು ಜಗತ್ತಿನ ಯಾವ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ರೀತಿಯ ಚಳವಳಿ ಕನ್ನಡ ನೆಲದಲ್ಲಿ ಆಗಿದೆ ಎಂಬುದು ಹೆಮ್ಮೆಯ ಸಂಗತಿ. ಅನುಭವ ಮಂಟಪ ಲಿಂಗಬೇಧವಿಲ್ಲದೇ ಚರ್ಚೆಗೆ ಅವಕಾಶ ಕಲ್ಪಿಸಿದ್ದರಿಂದ ಅನುಭವಗಳನ್ನು ಅನುಭಾವವಾಗಿಸಿ ವಚನಗಳನ್ನು ರಚಿಸಿದರು. ವಚನ ರಚನೆಯಲ್ಲಿ ಕೆಳವರ್ಗದವರು ಭಾಗವಹಿಸಿದ್ದು ಜಗತ್ತಿನ ಇತಿಹಾಸದಲ್ಲಿಯೇ ಪ್ರಥಮ. ತಾರತಮ್ಯದಿಂದ ನಲುಗುತ್ತಿದ್ದ ಸಾಮಾಜಿಕ ವ್ಯವಸ್ಥೆಗೆ ಹೊಸ ಬೆಳಕಾಗಿ ಶರಣರು ಗೋಚರಿಸಿದರು. ವೈಚಾರಿಕ ಮತ್ತು ಮಾನವೀಯ ನೆಲೆಗಳಲ್ಲಿ ರೂಪಿತವಾಗಿ ಚಳವಳಿಯನ್ನು ಅಂತ್ಯಗಾಣಿಸಲು ಪ್ರಗತಿ ವಿರೋಧಿಗಳು ಪ್ರಯತ್ನಿಸಿದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಲಾಂತರ ವಚನಗಳು ಹಾಳಾದವು. ಆದರೆ ಅವರು ತೋರಿದ ಮಾರ್ಗ ಜಗತ್ತಿಗೆ ಸದಾ ಬೆಳಕಾಗಿದೆ. ಬೆಳಕನ್ನು ನಂದಿಸುವ ಪ್ರಯತ್ನಗಳು ಈಗಲೂ ನಡೆಯುತ್ತಿವೆ. ಅದು ಸಾಧ್ಯವಾಗುವುದಿಲ್ಲ ಎಂದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕಲ್ಯಾಣ ಕ್ರಾಂತಿಯ ನಂತರ ಶರಣರಿಂದ ದೊರೆತ ತಾಳೆಗರಿ, ಹಸ್ತಪ್ರತಿ ಕಟ್ಟುಗಳನ್ನು ತಲೆ ತಲಾಂತರದಿಂದ ಪೂಜಿಸುತ್ತಿದ್ದರು. ಊರೂರು ಅಲೆದು ಸಂಗ್ರಹಿಸಿ, ಸಂಪಾದಿಸಿ, ಮುದ್ರಿಸಿ ವಚನ ಸಾಹಿತ್ಯ ಬೆಳಕನ್ನು ಮನೆಮನಗಳಿಗೆ ಪಸರಿಸಿದ ಕೀತಿರ್ .ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ದೂರ ದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಟನೆ, ಬ್ಯಾಂಕಿಂಗ್​, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿ ಸಂ, ಒಕ್ಕಲುತನ ಸಹಕಾರಿ ಸಂ, ನೇಕಾರರ ಸಂ, ಹತ್ತಿ ಮಾರಾಟ ಸಂಗಳು ಸೇರಿದಂತೆ ಸಹಕಾರಿ ಸಂಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜದ ಅಭಿವೃದ್ಧಿಗಾಗಿ ದುಡಿದ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದರು.
ಸಂತೋಷ ಅಂಗಡಿ, ದತ್ತಪ್ರಸನ್ನ ಪಾಟೀಲ, ಕೆ.ಎಚ್​.ಬೇಲೂರ, ಅನ್ನದಾನಿ ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಡಿ. ಎಸ್​.ಬಾಪುರಿ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಶಿಲ್ಪಾ ಮ್ಯಾಗೇರಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net