ಕಾಮಿರ್ಕ ಕಲ್ಯಾಣ ಮಂಡಳಿಯು ಖಾಸಗಿ ಏಜೆನ್ಸಿಗೆ ಟೆಂಡರ್ ನೀಡುವ ಮೂಲಕ ಕಿಟ್ ವಿತರಣೆಗೆ ಆದೇಶಿಸಲಾಗಿದೆ. ಖಾಸಗಿ ಏಜೆನ್ಸಿಯವರು ಎಲ್ಲ ಜಿಲ್ಲೆಗಳಿಗೆ ಕಳೆದ ಎರಡು ತಿಂಗಳ ಹಿಂದೆ ಕಾಮಿರ್ಕರ ರಕ್ಷಣಾ ಕಿಟ್ಗಳನ್ನು ರವಾನಿಸಿದ್ದಾರೆ. ವೆಲ್ಡಿಂಗ್, ಎಲೆಕ್ಟ್ರಿಸಿಯನ್, ಪೇಂಟರ್ ಸೇರಿದಂತೆ ಇತರೆ ಕಾಮಿರ್ಕ ಕಾರ್ಡ ಹೊಂದಿರುವರಿಗೆ ಕಿಟ್ ಸಂಗ್ರಹಿಸಲಾಗಿದೆ. ಕಿಟ್ ವಿತರಣೆಗೆಮದೇ ಹೊಸದಾಗಿ ಕಚೇರಿಯನ್ನು ಜಿಲ್ಲೆಯಲ್ಲಿ ಆರಂಭಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ ಒಟ್ಟಾರೆ 3.53 ಕೋಟಿ ವೆಚ್ಚದಲ್ಲಿ ಅಂದಾಜು 7 ಸಾವಿರ ಕಿಟ್ ಪೂರೈಕೆಗೆ ಅನುಮತಿ ನೀಡಲಾಗಿದ್ದು, ಈ ವರೆಗೆ 3000 ಕಿಟ್ ಸಂಗ್ರಹ ಇದೆ. ಆದರೆ, ಕಿಟ್ ವಿತರಣೆಗೆ ಅರ್ಹ ಕಾಮಿರ್ಕರ ಪಟ್ಟಿ ನೀಡಿ ಎಂದು ಏಜೆನ್ಸಿ ಸಿಬ್ಬಂದಿಗಳು ಜಿಲ್ಲಾ ಕಾಮಿರ್ಕ ಇಲಾಖೆಗೆ ದಿನನಿತ್ಯ ಮನವಿ ಮಾಡುತ್ತಿದ್ದು, ಈ ವರೆಗೂ ಅರ್ಹ ಕಾಮಿರ್ಕರ ಪಟ್ಟಿ ನೀಡಲು ಜಿಲ್ಲಾ ಕಾಮಿರ್ಕ ಇಲಾಖೆ ಹಿಂದೇಟು ಇಟ್ಟಿದೆ. ಹೀಗಾಗಿ ಕಿಟ್ ಯಾರಿಗೆ ವಿತರಿಸಬೇಕು ಎಂಬ ಗೊಂದಲದಲ್ಲಿ ಇರುವ ಏಜೆನ್ಸಿ ಸಿಬ್ಬಂದಿ ಕಿಟ್ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.