ಡಿಜಿಟಲ್​ ವ್ಯಸನದಿಂದ ತಾರುಣ್ಯದ ಆನಂದದಿಂದ ದೂರ: ಜಿತೇಂದ್ರ ಮುಗಳಿ

ಗದಗ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿತೇಂದ್ರ ಮುಗಳಿ ಮಾತನಾಡಿದರು. ಕವಿತಾ ವಿಭೂತಿ, ರಾಹುಲ ಗಿಡ್ನಂದಿ, ಡಿ. ಎಸ್​. ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡರ ಇತರರು ಇದ್ದರು.
ಗದಗ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿತೇಂದ್ರ ಮುಗಳಿ ಮಾತನಾಡಿದರು. ಕವಿತಾ ವಿಭೂತಿ, ರಾಹುಲ ಗಿಡ್ನಂದಿ, ಡಿ. ಎಸ್​. ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡರ ಇತರರು ಇದ್ದರು.
Published on
ಗದಗ: ಡಿಜಿಟಲ್​ ವ್ಯಸನದಿಂದ ಯುವಜನಾಂಗ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಕಳೆದುಕೊಂಡು ತಾರುಣ್ಯದ ಆನಂದದಿಂದ ವಂಚಿತರಾಗಿದ್ದಾರೆ ಎಂದು ಜಿಮ್ಸ್​ ಮನೋರೋಗ ತ ಜಿತೇಂದ್ರ ಮುಗಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆದರ್ಶ ಶಿಣ ಸಮಿತಿ ವತಿಯಿಂದ ಇತ್ತೀಚೆಗೆ ಶಿಕ್ಷಣ ಸಮಿತಿ ಸಭಾಂಗಣದಲ್ಲಿ ಜರುಗಿತು ಯುವಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಜಿಟಲ್​ ವ್ಯಾಮೋಹದಿಂದ ಮೆದುಳಿನ ಸೃಜನಶೀಲ ಚಿಂತನೆಗಳಿಗೆ ಧಕ್ಕೆ ಉಂಟಾಗಿ ಯುವಕರು ಮುದುಕರಂತೆ ವತಿರ್ಸುತ್ತಿದ್ದಾರೆ. ಯುವಶಕ್ತಿ ದೇಶದ ಶಕ್ತಿ ಆಗಿರುವುದರಿಂದ ಕ್ರಿಯಾಶೀಲತೆಯ ಕೊರತೆ ದೇಶಕ್ಕೆ ಮಾರಕ ಆಗುತ್ತಿದೆ. ಆನ್​ಲೈನ್​ ಗೇಮಿಂಗ್​, ಬೆಟ್ಟಿಂಗ್​, ರೀಲ್ಸ ವೀಣೆ ಮೂಲಕ ತಮ್ಮ ಅಮೂಲ್ಯ ಸಮಯವನ್ನು ವ್ಯಯಗೊಳಿಸಿ ಕುಟುಂಬದಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣರಾಗುತ್ತಿದ್ದಾರೆ. ನಿದ್ರಾಹಿನತೆ, ನಿದ್ದೆಯಲ್ಲಿ ನಡಿಗೆ, ಬಡಬಡಿಸುವದು, ಹೆಣ್ಣುಮಕ್ಕಳ ತೂಕದಲ್ಲಿ ವ್ಯತ್ಯಾಸ, ಪಿಸಿಓಡಿ ಸಮಸ್ಯೆ ಅನೇಕ ದೈಹಿಕ ಮತ್ತು ಮಾನಸಿಕ ತೊಂದರೆಗಳು ಅಧಿಕ ಆಗುತ್ತಿವೆ. ಈ ಹಿನ್ನೆಲೆ ಡಿಜಿಟಲ್​ ಸಾಮಗ್ರಿಗಳ ಬಳಕೆಯನ್ನು ಕಡಿಮೆಗೊಳಿಸಿ ಸೃಜನಶೀಲ ಚಟುವಟಿಕೆ, ಓದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಸೈಬರ್​ ಅಪರಾಧಗಳ ಕುರಿತು ಎಂ. ಎಸ್​. ತಿಪ್ಪಾಪೂರ ಮಾತನಾಡಿ, ಸೈಬರ್​ ಅಪರಾಧಗಳ ಸಂಖ್ಯೆ ದಿನೇ ದಿನೆ ಅಧಿಕಗೊಳ್ಳುತ್ತಿವೆ. ನಮಗೆ ಅವಿಲ್ಲದೇ ಓಪಿಟಿಗಳ ಮೂಲಕ ವಂಚನೆ ನಡೆಯುತ್ತಿದೆ. ವ್ಯವಸ್ಥಿತ ಜಾಲದಲ್ಲಿ ನಮ್ಮನ್ನು ಸಿಲುಕಿಸಿ ಆಥಿರ್ಕವಾಗಿ, ಮಾನಸಿಕವಾಗಿ ಕುಗ್ಗಿಸುವ ಕಾರ್ಯ ನಡೆಯುತ್ತಿರುವದರಿಂದ ಎಚ್ಚರಿಕೆ ಹೊಂದಬೇಕು ಎಂದು ಹೇಳಿದರು.
ಡಾ. ಜಿ. ಬಿ. ಪಾಟೀಲ ಮಾತನಾಡಿ, ಅಂಗೈಯಲ್ಲಿ ಇರುವ ಸಾಧನವನ್ನು ತಮ್ಮ ಸಾಮರ್ಥ್ಯವಾಗಿ ಇಮ್ಮಡಿಗೊಳಿಸಲು ಬಳಸಬೇಕು. ಮಾನಸಿಕ ಖಿನ್ನತೆ ಮತ್ತು ದೈಹಿಕ ತೊಂದರೆಗಳಿಂದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗಗಳು ನಿರ್ಮಾಣ ಗೊಳ್ಳುತ್ತಿರುವದು ಒಳ್ಳೆಯ ಬೆಳವಣಿಗೆಯಲ್ಲ. ಯುವಕರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಕವಿತಾ ವಿಭೂತಿ, ರಾಹುಲ ಗಿಡ್ನಂದಿ, ಡಿ. ಎಸ್​. ಬಾಪುರಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net